
ಮಂಗಳೂರು,ಜ.15: ದ.ಕ. ಜಿಲ್ಲೆಯ ಪ್ರಾದೇಶಿಕ ಸಾರಿಗೆ ಪ್ರಾಧಿಕಾರವು ಆಟೋರಿಕ್ಷಾ ಚಾಲನೆಯ ವಿವಿಧ ಅಂಶಗಳಾದ ಇಂಧನ ಬೆಲೆ, ಆಟೋರಿಕ್ಷಾ ಬಿಡಿಭಾಗಗಳು, ವಿಮೆ, ಮತ್ತು ಇತ್ಯಾದಿ, ಹಾಗೂ ದಿನನಿತ್ಯದ ಜೀವನಾಶ್ಯಕ ವಸ್ತುಗಳ ಬೆಲೆಗಳ ಬಗ್ಗೆ ಕೂಲಂಕುಶವಾಗಿ ಪರಿಶೀಲಿಸಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಚರಿಸುವ ಆಟೋರಿಕ್ಷಾಗಳ ದರಗಳನ್ನು ಪರಿಷ್ಕರಣೆ ಮಾಡಿ ಇಂದಿನಿಂದ ಹೊಸ ದರವನ್ನು ಜಾರಿಗೊಳಿಸಲು ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಆದೇಶಿಸಿದೆ.
ಆಟೋರಿಕ್ಷಾ ಚಾಲಕರ/ ಮಾಲಕರ ಹಾಗೂ ಆಟೋರಿಕ್ಷಾಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಶಿಕ ಸಾರಿಗೆ ಪ್ರಾಧಿಕಾರವು ಹಿಂದೆ ನಿಗದಿ ಪಡಿಸಿದ ಆಟೋರಿಕ್ಷಾ ದರಗಳನ್ನು ಪುನರ್ ಪರಿಷ್ಕ್ರರಿಸಿ, ದ.ಕ.ಜಿಲ್ಲೆಯಲ್ಲಿ ಸಂಚರಿಸುವ ಆಟೋರಿಕ್ಷಾಗಳ ಪ್ರಯಾಣ ದರಗಳನ್ನು ಇಂದಿನಿಂದ (ಶುಕ್ರವಾರ) ಅನ್ವಯವಾಗುವಂತೆ ಈ ಕೆಳಗಿನ ಷರತ್ತುಗಳಿಗೆ ಒಳಪಟ್ಟು ಪ್ರಯಾಣದ ದರವನ್ನು ನಿಗದಿ ಪಡಿಸಲಾಗಿರುತ್ತದೆ.
ಕನಿಷ್ಠ ದರ ಮೊದಲ 1.5 ಕಿ.ಮೀ ರೂ.25.೦೦ (ಗರಿಷ್ಠ ಮೂರು ಪ್ರಯಾಣಿಕರಿಗೆ)
ನಂತರದ ಪ್ರತಿ ಕಿ.ಮೀಟರ್ ದರ ರೂ.13-೦೦ (ಗರಿಷ್ಠ ಮೂರು ಪ್ರಯಾಣಿಕರಿಗೆ)
ಕಾಯುವ ದರಗಳು ಮೊದಲ 15 ನಿಮಿಷ ಉಚಿತ, ನಂತರದ 45 ನಿಮಿಷದವರೆಗೆ ಪ್ರಯಾಣ ದದ 25 %
ಲಗೇಜು ದರ ಮೊದಲ 20 ಕಿ.ಗ್ರಾಂ ಉಚಿತ, ನಂತರ ಪ್ರತಿ 20 ಕಿ.ಗ್ರಾಂ ಅಥವಾ ಭಾಗಕ್ಕೆ ರೂ 2.00
ರಾತ್ರಿ ವೇಳೆ ದರ ರಾತ್ರಿ 10 ಗಂಟೆಯ ನಂತರ ಬೆಳಿಗ್ಗೆ 5.00ಗಂಟೆಯವರೆಗೆ ಮಾತ್ರ ಈ ಮೇಲಿನ ದರದ ಒಂದೂವರೆ ಪಟ್ಟು ದರವನ್ನು ಪ್ರಯಾಣಿಕರಿಂದ ಪಡೆಯಲು ಅವಕಾಶವಿದೆ.
1) ಪ್ರಾದೇಶಿಕ ಸಾರಿಗೆ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ದರದ ಪಟ್ಟಿಯನ್ನು ಪ್ರತಿಯೊಂದು ಆಟೋರಿಕ್ಷಾಗಳಲ್ಲಿಯೂ ಪ್ರಮುಖ ಸ್ಥಳದಲ್ಲಿ ಪ್ರದರ್ಶಿಸಬೇಕು.
2) ಬೆಂಗಳೂರು ನಗರದಲ್ಲಿದ್ದಂತೆಯೇ ಎಲ್ಲಾ ಆಟೋರಿಕ್ಷಾಗಳಲ್ಲಿ ಚಾಲಕನ ಭಾವಚಿತ್ರವುಳ್ಳ ಚಾಲನಾ ಪರವಾನಿಗೆ ವಿವರಗಳನ್ನು ಚಾಲಕನ ಸೀಟಿನ ಹಿಂಬದಿಯಲ್ಲಿ ಪ್ರಯಾಣಿಕರಿಗೆ ಕಾಣುವಂತೆ, ಮೊಬೈಲ್ ಸಂಖ್ಯೆಯೊಂದಿಗೆ ಪ್ರದರ್ಶಿಸಬೇಕು.
3) ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯೊಳಗೆ ಸಂಚರಿಸಲು ಪರವಾನಿಗೆಯನ್ನು ಹೊಂದಿರುವ ಆಟೋರಿಕ್ಷಾ ವಾಹನಗಳು ಮಂಗಳೂರು ಮಹಾನಗರ ಪಾಲಿಕೆಯ ಗಡಿ ಪ್ರದೇಶದಿಂದ ಪ್ರಯಾಣಿಕರು ಪ್ರಯಾಣಿಸುವ ಸ್ಥಳದವರೆಗೆ ಮೇಲಿನ ದರದ ಒಂದೂವರೆ ಪಟ್ಟಿನಷ್ಟು ದರವನ್ನು ಪಡೆಯಬಹುದಾಗಿದೆ.
4) ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಚರಿಸುವ ಎಲ್ಲಾ ಆಟೋರಿಕ್ಷಾ ಕ್ಯಾಬ್ಗಳಿಗೆ ಖಡ್ಡಾಯವಾಗಿ ಫೇರ್ಮೀಟರ್ ಅಥವಾ ಡಿಜಿಟಲ್ ಫೇರ್ ಮೀಟರ್ನ್ನು ಅಳವಡಿಸಿಕೊಂಡು ಮೇಲಿನ ದರಕ್ಕೆ ತಕ್ಕಂತೆ ಕಾನೂನು ಮಾಪನ ಶಾಸ್ತ್ರ ಇಲಾಖೆಯಿಂದ ಪರಿಷ್ಕೃತ ದರವು ಜಾರಿಗೆ ಬಂದ ದಿನಾಂಕದಿಂದ 60 ದಿವಸಗಳೊಳಗೆ ಆಟೋರಿಕ್ಷಾ ಚಾಲಕ ಮಾಲೀಕರು ತಮ್ಮ ಆಟೋರಿಕ್ಷಾಗಳ ಪ್ಲಾಗ್ ಮೀಟರ್ಲ್ಲಿ ಮರು ನಿಗದಿ ಪಡಿಸಿದ ದರವನ್ನು ರಿಕ್ಕಾಲಿಬರೇಷನ್ ಹಾಗೂ ಸೀಲ್ ಮಾಡಿಕೊಂಡು ಪ್ರಯಾಣಿಕರಿಂದ ಪ್ರಯಾಣಕ್ಕೆ ತಕ್ಕಂತೆ ಪರಿಷ್ಕರಿಸಿದ ಮೀಟರ್ ದರವನ್ನು ಪಡೆದುಕೊಳ್ಳುವಂತೆ ಆದೇಶಿಸಲಾಗಿದೆ.
5) ಅ) ಅಧಿಕ ದರ ವಸೂಲು ಮಾಡಿದಲ್ಲಿ. ಆ) ಪ್ರಯಾಣಿಕರು ಪ್ರಯಾಣಿಸುವ ಸ್ಥಳಗಳಿಗೆ ಹೋಗಲು ನಿರಾಕರಿಸಿದಲ್ಲಿ ಇ) ಸಾರ್ವಜನಿಕ ಪ್ರಯಾಣಿಕರೊಂದಿಗೆ ಅಸಭ್ಯವಾಗಿ ವರ್ತಿಸಿದಲ್ಲಿ, ಅಂತಹ ಚಾಲಕರ ವಿರುದ್ಧ ಕಾನೂನಿನಂತೆ ದಂಡ ವಿಧಿಸುವುದು/ಪರವಾನಿಗೆ ಅಮಾನತ್ತು/ ರದ್ದತಿ ಕುರಿತು ಕ್ರಮ ಕೈಗೊಳ್ಳುವುದು ಹಾಗೂ ಇತರೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಪೊಲೀಸ್ ಇಲಾಖಾ ಅಧಿಕಾರಿಗಳಿಗೆ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ.
6) ಸಾರ್ವಜನಿಕರು ದೂರುಗಳನ್ನು ಈ ಕೆಳಗೆ ತಿಳಿಸಿದ ಟೋಲ್ ಫ್ರೀ ಸಂಖ್ಯೆ: 1077, ಮತ್ತು ಎಸ್.ಎಂ.ಎಸ್ ಮೂಲಕ :9480802019.ಗೆ ದೂರುಗಳನ್ನು ನೀಡಬೇಕಾಗಿ ಕೋರಲಾಗಿದೆ.