ಕೊಪ್ಪಳ: ಮಕ್ಕಳಿಗೆ ಶಾಲೆಗಳಲ್ಲಿ ಮಧ್ಯಾಹ್ನ ಬಿಸಿಯೂಟದ ವೇಳೆ ಮೊಟ್ಟೆ ನೀಡುವ ವಿಚಾರ ಕುರಿತು ಈಗಾಗಲೇ ಸೋಷಿಯಲ್ ಮೀಡಿಯಾಗಳಲ್ಲಿ, ಸಾರ್ವಜನಿಕ ವೇದಿಕೆಗಳಲ್ಲಿ ಪರ-ವಿರೋಧ ಚರ್ಚೆಗಳು ನಡೆಯುತ್ತಿದೆ. ಒಂದು ವರ್ಗ ಮೊಟ್ಟೆ ನೀಡಬೇಕೆಂದು ಹೇಳುತ್ತಿದ್ದರೆ ಇನ್ನು ಹಲವು ಮಂದಿ ವಿರೋಧಿಸುತ್ತಿದ್ದಾರೆ. ಮಠಾಧೀಶರುಗಳೇನಕ ಮಂದಿ ಮಕ್ಕಳಿಗೆ ಮೊಟ್ಟೆ ವಿತರಿಸುವುದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಈ ಮಧ್ಯೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ವಿದ್ಯಾರ್ಥಿನಿಯೊಬ್ಬಳು ಮಾಧ್ಯಮದಲ್ಲಿ ಹೇಳಿರುವುದು ಬಹಳ ಸುದ್ದಿಯಾಗುತ್ತಿದೆ. ‘ಮೊಟ್ಟೆ ತಿನ್ನಬೇಡಿ ಎಂದರೆ ಹುಷಾರ್, ನಿಮ್ಮ ಮಠಕ್ಕೆ ಬಂದು ತತ್ತಿ ತಿಂದು ತೋರಿಸ್ತೀವಿ’ ಎಂದು ವಿದ್ಯಾರ್ಥಿನಿ ಮಠಾಧೀಶರುಗಳಿಗೆ ಸವಾಲು ಹಾಕಿದ್ದಾಳೆ.
‘ನಮಗೆ ತತ್ತಿ ತಿನ್ನದೆ ಬದುಕಲು ಸಾಧ್ಯವಿಲ್ಲ, ಸತ್ತು ಹೋಗುತ್ತೇವೆ, ಶಾಲೆಗಳಲ್ಲಿ ಮಧ್ಯಾಹ್ನ ಬಿಸಿಯೂಟದಲ್ಲಿ ಮಕ್ಕಳಿಗೆ ಮೊಟ್ಟೆ ಕೊಡಬೇಡಿ, ಬಾಳೆಹಣ್ಣು ಮಾತ್ರ ಕೊಡಿ ಎಂದು ವಿರೋಧ ವ್ಯಕ್ತಪಡಿಸಿದರೆ ನಿಮ್ಮ ಮಠಗಳಿಗೆ ಬಂದು ತಿಂತು ತೋರಿಸ್ತೀವಿ ನೋಡ್ತಿರಿ’ ಎಂದು ವಿದ್ಯಾರ್ಥಿನಿ ಖಡಕ್ ಆಗಿ ಹೇಳಿರುವುದು ಭಾರೀ ವೈರಲ್ ಆಗಿದೆ.
‘ತತ್ತಿ ತಿಂದರೇನೆ ಮುಂದೆ ಬದುಕುತ್ತೇವೆ, ಇಲ್ಲಾಂದ್ರೆ ನಾವೆಲ್ಲ ಸತ್ತು ಹೋಗುತ್ತೇವೆ. ನಾವು ಸಾಯೋದು ನಿಮಗೆ ಬೇಕಾ, ಇಲ್ಲ ಮೊಟ್ಟೆ ನೀಡೋದು ಬೇಕಾ ಎಂದು ಹೇಳಿ, ನಮ್ಮ ಪ್ರತಿಭಟನೆ ಮಾಡುತ್ತೇವೆ. ನಮಗೆ ಬೆಂಬಲಕ್ಕೆ ಸಂಸ್ಥೆಯಿದೆ’ ಎಂದು ವಿದ್ಯಾರ್ಥಿನಿ ಹೇಳಿದ್ದಾಳೆ.
Comments are closed.