ಯುವಜನರ ವಿಭಾಗ

ಕಾಂಡೋಮ್​ ಬಳಸುವಾಗ ಈ ತಪ್ಪುಗಳನ್ನು ಮಾಡಿದರೆ ಖಂಡಿತವಾಗಿಯೂ ಹೆಣ್ಣು ಗರ್ಭವತಿಯಾಗುತ್ತಾಳೆ !

Pinterest LinkedIn Tumblr

ಸುರಕ್ಷಿತ ಲೈಂ#ಗಿಕ ಜೀವನಕ್ಕೆ ಕಾಂಡೋಮ್ ಅಗತ್ಯ. ಇದು ಎಲ್ಲರಿಗೂ ತಿಳಿದಿರುವ ಸಂಗತಿ. ಇತ್ತೀಚಿನ ದಿನಗಳಲ್ಲಿ ಕಾಂಡೋಮ್ ಬಳಕೆದಾರರ ಸಂಖ್ಯೆಯಲ್ಲೂ ಹೆಚ್ಚಳವಾಗಿದೆ. ಹೆಚ್ಚಿನವರು ಗರ್ಭನಿರೋಧಕಕ್ಕಾಗಿ ಕಾಂಡೋಮ್ ಬಳಸುತ್ತಾರೆ. ಕೆಲವರು ಕಾಂಡೋಮ್ ಬಳಸುವಾಗ ಮಾಡುವ ತಪ್ಪಿನಿಂದಾಗಿ ಹೆಣ್ಣು ಗರ್ಭವತಿಯಾಗುತ್ತಾಳೆ.

ಕಾಂಡೋಮ್ ಬಳಕೆ ಮಾಡುವುದರಿಂದ ಶೇ.98 ಮಾತ್ರ ಸುರಕ್ಷಿತ ಸೆ#ಕ್ಸ್ ಮಾಡಲು ಸಾಧ್ಯ. ಇನ್ನು ಎರಡು ಪರ್ಸೆಂಟ್ ಗ್ಯಾರಂಟಿಯನ್ನು ಕಾಡೋಮ್ ಕಂಪನಿಗಳು ಕೂಡ ನೀಡುವುದಿಲ್ಲ.

ಹೀಗಾಗಿ ಕಾಂಡೋಮ್ ಧರಿಸಿದರೆ ಮಕ್ಕಳು ಆಗುವುದೇ ಇಲ್ಲ ಎಂಬುದನ್ನು ನೂರಕ್ಕೆ ನೂರು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಅಲ್ಲಿ ನೀವು ಮಾಡುವ ತಪ್ಪುಗಳು ಕೂಡ ಸಮಸ್ಯೆಯನ್ನು ತಂದೊಡ್ಡುವ ಸಾಧ್ಯತೆ ಇರುತ್ತದೆ.

ಕಾಂಡೋಮ್ ಬಳಕೆ ಮಾಡುವಾಗ ಹುಡುಗರು ತೆಗೆದುಕೊಳ್ಳುವ ತಪ್ಪು ನಿರ್ಧಾರಗಳಿಂದ ಆಕೆ ಗರ್ಭ ಧರಿಸಬಹುದು. ಹೀಗಾಗಿ ಕಾಂಡೋಮ್​ ಧರಿಸೋ ಮೊದಲು ಈ ನಾಲ್ಕು ಅಂಶಗಳನ್ನು ತಪ್ಪದೇ ಗಮನಿಸಿ.

ನೀವು ಕಾಂಡೋಮ್ ಅನ್ನು ತುಂಬಾ ಜಾಗರೂಕವಾಗಿ ಧರಿಸಬೇಕು. ನೀವು ಅವಸರದಲ್ಲಿ ಸರಿಯಾಗಿ ಧರಿಸಿಲ್ಲ ಎಂದು ನಿಮಗೆ ಅನಿಸಿದರೆ ಅದನ್ನು ತೆಗೆದುಹಾಕಿ ಮತ್ತು ಹೊಸ ಕಾಂಡೋಮ್ ಧರಿಸಿ. ಕಾಂಡೋಮ್ ಸರಾಗವಾಗಿ ನಿಮ್ಮ ಗುಪ್ತಾಂ#ಗದಲ್ಲಿ ಕೂತಿದರೆ ಎಂದರೆ ನೀವು ಸೂಕ್ತವಾಗಿ ಧರಿಸಿದ್ದೀರಿ ಎಂದರ್ಥ.

ಮರುಬಳಕೆಯ ದುರುಪಯೋಗ: ಕಾಂಡೋಮ್ ಅನ್ನು ತೊಳೆಯುವುದು ಮತ್ತು ಮರುಬಳಕೆ ಮಾಡುವುದು ತಪ್ಪು. ಆದ್ದರಿಂದ ಪ್ರತಿ ಬಾರಿಯೂ ಹೊಸ ಕಾಂಡೋಮ್ ಬಳಸಿ.

ಗಾತ್ರಕ್ಕೆ ತಕ್ಕಂತೆ ಕಾಂಡೋಮ್ ಬಳಿಸಿ: ಗುಪ್ತಾಂ#ಗದ ಗಾತ್ರ ವ್ಯಕ್ತಿಯಿಂದ ವ್ಯಕ್ತಿಗೆ ಬೇರೆ ಇರುತ್ತದೆ. ಹೀಗಾಗಿ ಈ ಗಾತ್ರಕ್ಕೆ ತಕ್ಕಂತೆ ಕಾಂಡೋಮ್‌ಗಳು ಲಭ್ಯವಿದೆ. ಆದ್ದರಿಂದ ನಿಮ್ಮ ನಿಖರವಾದ ಗಾತ್ರವನ್ನು ತಿಳಿದುಕೊಳ್ಳಿ ಮತ್ತು ಅದೇ ಗಾತ್ರದ ಕಾಂಡೋಮ್ ಬಳಸಿ. ಸಣ್ಣ ಗಾತ್ರಗಳನ್ನು ಧರಿಸುವುದರಿಂದ ಅವು ಸೆ#ಕ್ಸ್ ಮಾಡುವಾಗ ಹರಿದು ಹೋಗಬಹುದು. ದೊಡ್ಡ ಗಾತ್ರದ ಕಾಂಡೋಮ್ ಬಳಿಸಿದರೆ ಜಾರಿ ಹೋಗಬಹುದು.

ಏಕಕಾಲದಲ್ಲಿ ಎರಡು ಧರಿಸಬೇಡಿ: ಹೆಚ್ಚುವರಿ ರಕ್ಷಣೆಗಾಗಿ ಕೆಲವರು ಎರಡು ಕಾಂಡೋಮ್‌ಗಳನ್ನು ಧರಿಸುತ್ತಾರೆ. ಹಾಗೆ ಧರಿಸುವುದು ಸಂಪೂರ್ಣವಾಗಿ ತಪ್ಪು ಆಲೋಚನೆ. ಹಾಗೆ ಮಾಡುವುದರಿಂದ ಕಾಂಡೋಮ್ ಹರಿದುಹೋಗುವ ಅಥವಾ ಜಾರಿಬೀಳುವ ಸಾಧ್ಯತೆಯೂ ಹೆಚ್ಚಾಗುತ್ತದೆ. ಆದ್ದರಿಂದ ಅದನ್ನು ಮಾಡಬೇಡಿ.

Comments are closed.