ಕರಾವಳಿ

ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಆಹ್ವಾನ : ಕನ್ನಡ ಭಾಷಾ ಕವನಗಳ ಆಹ್ವಾನ

Pinterest LinkedIn Tumblr

 

ಮಂಗಳೂರು ಅಕ್ಟೋಬರ್ 16 : ಜಿಲ್ಲಾಡಳಿತದ ವತಿಯಿಂದ ಪ್ರತಿ ವರ್ಷವೂ ದ.ಕ. ಜಿಲ್ಲೆಯಲ್ಲಿ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ನವೆಂಬರ್ 1 ರಂದು ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಹಾಗೂ ಅತ್ಯುತ್ತಮ ಸಾಧನೆಗೈದ ವ್ಯಕ್ತಿಗಳನ್ನು ಗುರುತಿಸಿ ನೀಡಲಾಗುತ್ತದೆ. ಪ್ರಸ್ತುತ ಸಾಲಿನ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗಾಗಿ ಅರ್ಜಿಗಳನ್ನು ಅಕ್ಟೋಬರ್ 22 ರೊಳಗೆ ಆಹ್ವಾನಿಸಲಾಗಿದೆ.

ಸಾಹಿತ್ಯ, ಶಿಕ್ಷಣ, ಸಂಗೀತ, ನೃತ್ಯ, ಕ್ರೀಡೆ, ಕೃಷಿ, ಲಿಲಿತಕಲೆಗಳು, ಸಮಾಜಸೇವೆ, ಜಾನಪದ, ಪರಿಸರ – ವಿಜ್ಞಾನ, ವೈದ್ಯಕೀಯ, ಸಂಶೋಧನೆ ಪತ್ರಿಕೋಧ್ಯಮ ಮುಂತಾದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರು ಅರ್ಜಿಯನ್ನು ತಮ್ಮ ಸೇವೆ, ಸಾಧನೆಯ ಕ್ಷೇತ್ರ ಹಾಗೂ ಸಂಕ್ಷಿಪ್ತ ದಾಖಲೆ, ವಿವರಣೆಗಳನ್ನು ಜಿಲ್ಲಾಧಿಕಾರಿ ಕಚೇರಿಗೆ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕನ್ನಡ ರಾಜ್ಯೋತ್ಸವ : ಕನ್ನಡ ಭಾಷಾ ಕವನಗಳ ಆಹ್ವಾನ

ನವಂಬರ್ 01ರಂದು ಕನ್ನಡ ರಾಜ್ಯೋತ್ಸವ ಸಮಾರಂಭದ ಪ್ರಯುಕ್ತ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಗರದ ಪುರಭವನದಲ್ಲಿ ಕನ್ನಡ ಭಾಷಾ ಕವಿಗೋಷ್ಠಿಯನ್ನು ಆಯೋಜಿಸಿದೆ.

ಈ ಕವಿಗೋಷ್ಠಿಯಲ್ಲಿ ಪ್ರಸ್ತುತ ಪಡಿಸುವರೇ ಕನ್ನಡ ಭಾಷೆಯ ಸ್ವರಚಿತ ಕವನಗಳನ್ನು ಆಹ್ವಾನಿಸಲಾಗಿದೆ.
ಜಿಲ್ಲೆಯ ಪ್ರತಿಭಾನ್ವಿತ ಕವಿಗಳು ತಾವೇ ರಚಿಸಿದ ಕವನಗಳನ್ನು ಅಕ್ಟೋಬರ್ 27ರೊಳಗೆ ಗೌರವ ಕಾರ್ಯದರ್ಶಿ, ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕಲ್ಕೂರ ಪ್ರತಿಷ್ಠಾನ, ಶ್ರೀಕೃಷ್ಣ ಕಾಂಪ್ಲೆಕ್ಸ್, ಮಹಾತ್ಮಗಾಂಧಿ ರಸ್ತೆ, ಕೊಡಿಯಾಲ್‌ಬೈಲ್, ಮಂಗಳೂರು ಈ ವಿಳಾಸಕ್ಕೆ ತಲುಪುವಂತೆ ಕಳುಹಿಸಿಕೊಡಲು ಕೋರಲಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments are closed.