ರಾಷ್ಟ್ರೀಯ

ಪಾಕ್ ಸೇನಾಧಿಕಾರಿ ಸಮಾಧಿ ದುರಸ್ತಿ ಮಾಡುವ ಮೂಲಕ ಗೌರವ ಸೂಚಿಸಿದ ಭಾರತೀಯ ಸೇನೆ !

Pinterest LinkedIn Tumblr

ಶ್ರೀನಗರ: ಭಾರತೀಯ ಸೇನೆ ಮತ್ತೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ವಿಶ್ವದಾದ್ಯಂತ ಮಾನವೀಯತೆ, ನೈತಿಕತೆಗೆ ಸದಾ ಹೆಸರು ಮಾಡುತ್ತಿದ್ದ ಭಾರತೀಯ ಸೇನೆ ಈ ಬಾರಿ ಮಾತ್ರ ಬೇರೆಯೇ ವಿಭಿನ್ನ ರೀತಿಯ ಗೌರವಕ್ಕೆ ಪಾತ್ರವಾಗಿದೆ.

ಹಾನಿಗೊಳಗಾಗಿದ್ದ ಪಾಕಿಸ್ತಾನ ಅಧಿಕಾರಿಯೊಬ್ಬರ ಸಮಾಧಿಯನ್ನು ಪುನಃ ಸ್ಥಾಪಿಸುವ ಮೂಲಕ ಗೌರವ ಸಲ್ಲಿಸಿದೆ. ಈ ಮೂಲಕ ಸೈನಿಕನೇ ಮೊದಲು ಉಳಿದದ್ದೆಲ್ಲ ನಂತರ ಎಂಬ ಧ್ಯೇಯ ವಾಕ್ಯದ ಬದ್ಧತೆಯನ್ನು ಭಾರತೀಯ ಸೇನೆ ಪ್ರದರ್ಶಿಸಿದೆ.

ಭಾರತದ ಸೇನೆ ಮತ್ತು ಚಿನಾರ್ ಕಾರ್ಪ್ಸ್ ಸಂಪ್ರದಾಯದಂತೆ ನೌಗಂನ ಗಡಿ ನಿಯಂತ್ರಣ ರೇಖೆಯಲ್ಲಿ 1972 ಮೇ 05 ರಂದು ಮೃತಪಟ್ಟ ಪಾಕಿಸ್ತಾನ ಸೇನೆಯ ಸಿತಾರಾ ಇ ಜುರಾತ್ ಮೊಹಮ್ಮದ್ ಶಬೀರ್ ಖಾನ್ ಅವರ ಸಮಾಧಿ ದುರಸ್ತಿ ಮಾಡಲಾಗಿದೆ ಎಂದು ಚಿನಾರ್ ಕಾರ್ಪ್ಸ್ ಟ್ವೀಟ್ ಮಾಡಿದೆ.

ಮೇಜರ್ ಮೊಹಮ್ಮದ್ ಶಬ್ಬಿರ್ ಖಾನ್ ನೆನಪಿನಾರ್ಥವಾಗಿ ಸಿತಾರ್-ಎ-ಜುರತ್ ಶಾಹಿದ್ 5 ಮೇ, 1972, 1630 ಎಚ್ ಅವರು ಇ ಸಿಖ್ಖರ ಪ್ರತಿ ದಾಳಿ ವೇಳೆ ಸಾವನ್ನಪ್ಪಿದ್ದಾರೆ ಎಂದು ಟ್ವೀಟ್‍ನಲ್ಲಿ ಬರೆದುಕೊಂಡಿದೆ.

ಈ ಕುರಿತು ಹೇಳಿಕೆ ನೀಡಿರುವ ಭಾರತೀಯ ಸೇನೆ, ಭಾರತೀಯ ಸೇನೆ ನಂಬುವಂತೆ ಮೃತನಾದ ಯೋಧ ಯಾವುದೇ ದೇಶದವನಾದರೂ ಅದನ್ನೂ ಮೀರಿ ಎಲ್ಲ ಗೌರವಕ್ಕೆ ಅರ್ಹ. ಜಗತ್ತಿನಲ್ಲಿ ಭಾರತೀಯ ಸೇನೆಯ ರೀತಿ ಇದು ಎಂದು ತಿಳಿಸಿದೆ.

ಶಬ್ಬಿರ್ ಖಾನ್ ಅವರು 1972ರಲ್ಲಿ ಗಡಿ ನಿಯಂತ್ರಣ ರೇಖೆ(ಎಲ್‍ಒಸಿ) ಬಳಿ ಭಾರತೀಯ ಸೈನಿಕರ ದಾಳಿಗೆ ತುತ್ತಾಗಿ, ಸಾವನ್ನಪ್ಪಿದ್ದರು. ಖಾನ್ ಪಾಕಿಸ್ತಾನದ ಮೂರನೇ ಅತ್ಯುನ್ನತ ಮಿಲಿಟರಿ ಪ್ರಶಸ್ತಿಯಾದ ಸೀತಾರಾ-ಎ-ಜುರಾತ್ ಪಡೆದವರಾಗಿದ್ದಾರೆ.

Comments are closed.