ಕರಾವಳಿ

ಯೋಗಪಟು ಧನ್ವಿ ಪೂಜಾರಿ ಸೇರಿ 30 ಸಾಧಕರು, 2 ಸಂಘ-ಸಂಸ್ಥೆಗಳಿಗೆ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

Pinterest LinkedIn Tumblr

ಉಡುಪಿ: ಉಡುಪಿ ಜಿಲ್ಲೆಯಲ್ಲಿ ನಾನಾ ಕ್ಷೇತ್ರದಲ್ಲಿ ಮಹತ್ವದ ಸೇವೆ ಸಲ್ಲಿಸಿದ 30 ಮಂದಿ ಸಾಧಕರಿಗೆ ಮತ್ತು ಎರಡು ಸಂಸ್ಥೆಗಳಿಗೆ 2019ನೇ ಸಾಲಿನ ಉಡುಪಿ ಜಿಲ್ಲಾ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಜಿಲ್ಲಾಡಳಿತ ಬುಧವಾರ ಪ್ರಕಟಿಸಿದೆ.

ಪ್ರಶಸ್ತಿ ಪಡೆದವರ ವಿವರ:
ಯಕ್ಷಗಾನ ಕ್ಷೇತ್ರದಲ್ಲಿ ಪುಂಡರಿಕಾಕ್ಷ ಉಪಾಧ್ಯಾಯ, ಆನಂದ ಶೆಟ್ಟಿ ಹಕ್ಲಾಡಿ, ಬಡಾನಿಡಿಯೂರು ಕೇಶವ ರಾವ್, ದೈವಾರಾಧನೆ ಕ್ಷೇತ್ರದಲ್ಲಿ ನಾರಾಯಣ ನಲಿಕೆ, ಕೋಟಿ ಪೂಜಾರಿ, ಸಾಧು ಪಾಣಾರ, ರಂಗಭೂಮಿಯಲ್ಲಿ ವಿಜಯ್ ಆರ್ ನಾಯಕ್, ದಿನೇಶ್ ಪ್ರಭು ಕಲ್ಲೋಟ್ಟೆ, ಪತ್ರಿಕೋದ್ಯಮ ಕ್ಷೇತ್ರದಲ್ಲಿ ಎಸ್ ಜಿ ಕುರ್ಯ, ಸಂಗೀತ ಕ್ಷೇತ್ರದಲ್ಲಿ ಭೋಜರಾಜ್ ರಾಮ್ ಕಿದಿಯೂರು, ಕೆ. ರಾಘವೇಂದ್ರ ಭಟ್, ಸುಧಾಕರ ಶೇರಿಗಾರ್, ಸಾಹಿತ್ಯ ಕ್ಷೇತ್ರದಲ್ಲಿ ಉಪೇಂದ್ರ ಸೋಮಯಾಜಿ, ಮುನಿರಾಜ ರೆಂಜಾಳ, ಕ್ರೀಡಾ ಕ್ಷೇತ್ರದಲ್ಲಿ ಅಶೋಕ ಪಣಿಯಾಡಿ, ಪ್ರಕಾಶ್ ಶೆಟ್ಟಿ ಹೆಜಮಾಡಿ, ಚಿತ್ರಕಲೆ ಕ್ಷೇತ್ರದಲ್ಲಿ ದಾಮೋದರ ಭಟ್, ಶಿಲ್ಪಕಲೆ ಕ್ಷೇತ್ರದಲ್ಲಿ ಎಸ್ ಸುಬ್ರಹ್ಮಣ್ಯ ಆಚಾರ್ಯ, ಸೋಮಪ್ಪ ಮೇಸ್ತ್ರಿ, ಕಲೆ ಕ್ಷೇತ್ರದಲ್ಲಿ ಲಲಿತಾ ಕೊರವಡಿ,, ಛಾಯಾಗ್ರಹಣದಲ್ಲಿ ಸಂತೋಷ್ ಕುಂದೇಶ್ವರ್, ವೈದ್ಯಕೀಯ ಕ್ಷೇತ್ರದಲ್ಲಿ ಡಾ|ಕುಸುಮಾಕರ ಶೆಟ್ಟಿ ಬೇಳೂರು (ತೆಕ್ಕಟ್ಟೆ), ಯೋಗ/ನೃತ್ಯ ಕ್ಷೇತ್ರದಲ್ಲಿ ಕು ಧನ್ವಿ, ಕೃಷಿ/ಹೈನುಗಾರಿಕೆ ಕ್ಷೇತ್ರದಲ್ಲಿ ದಯಾನಂದ ರಾವ್, ನೃತ್ಯ ಕ್ಷೇತ್ರದಲ್ಲಿ ಲಕ್ಷ್ಮೀ ಗುರುರಾಜ್, ಸಂಕೀರ್ಣ ಕ್ಷೇತ್ರದಲ್ಲಿ ರಮಣ ನಾಯಕ್, ಕರುಣಾಕರ ಶೆಟ್ಟಿ, ಪೌರ ಕಾರ್ಮಿಕ ಕೃಷ್ಣ, ಸಮಾಜ ಸೇವೆ ಕ್ಷೇತ್ರದಲ್ಲಿ ಅನಂತ್ರಾಯ ಆರ್ ಶೆಣೈ, ಡೇವಿಡ್ ಸಿಕ್ವೇರಾ ಅವರಿಗೆ ಪ್ರಶಸ್ತಿ ಲಭಿಸಿದೆ.

ಸಂಘ ಸಂಸ್ಥೆ ವಿಭಾಗದಲ್ಲಿ ಕರಾವಳಿ ಯುವಕ-ಯುವತಿ ವೃಂದ ಹೆಜಮಾಡಿ ಮತ್ತು ನವಚೇತನ ಯುವತಿ ಮಂಡಲ ಕುತ್ಪಾಡಿ ರಾಜ್ಯೋತ್ಸವ ಪ್ರಶಸ್ತಿ ಪಡೆದಿದೆ.

ನವೆಂಬರ್ 1 ರಂದು ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವು ಬೆಳಗ್ಗೆ 9 ಗಂಟೆಗೆ ಉಡುಪಿ ನಗರಸಭಾ ವ್ಯಾಪ್ತಿಯ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣ ಅಜ್ಜರಕಾಡು ಮೈದಾನದಲ್ಲಿ ನಡೆಯಲಿದ್ದು, ಕಾರ್ಯಕ್ರಮಕ್ಕೆ ಗೃಹ ಮತ್ತು ಸಹಕಾರ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಧ್ವಜಾರೋಹಣ ಹಾಗೂ ಕನ್ನಡ ರಾಜ್ಯೋತ್ಸವ ಸಂದೇಶ ನೀಡಲಿದ್ದಾರೆ.

ಬೆಳಗ್ಗೆ 8 ಗಂಟೆಗೆ ಸರ್ಕಾರಿ ಪದವಿ ಪೂರ್ವಕಾಲೇಜ್ (ಬೋರ್ಡ್ ಹೈಸ್ಕೂಲ್) ನಿಂದ ಭುವನೇಶ್ವರಿ ದೇವಿ ಭಾವಚಿತ್ರದೊಂದಿಗೆ ವಿವಿಧ ಇಲಾಖೆ, ಕನ್ನಡ ನಾಡು ನುಡಿ ಸಂಸ್ಕ್ರತಿಯನ್ನು ಪ್ರತಿ ಬಿಂಬಿಸುವ ವಿವಿಧ ಸ್ತಬ್ಧ ಚಿತ್ರಗಳ ಮೆರವಣಿಗೆಯೊಂದಿಗೆ ಮಹಾತ್ಮ ಗಾಂಧಿ ಕ್ರೀಡಾಂಗಣ ಅಜ್ಜರಕಾಡು ಮೈದಾನಕ್ಕೆ ಸಾಗಿ ಬರಲಿದ್ದು, ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಪಥ ಸಂಚಲನ ಮತ್ತು ಪ್ರಸ್ತಕ ಸಾಲಿನ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿತರಣೆ ಹಾಗೂ ವಿದ್ಯಾರ್ಥಿಗಳಿಂದ ಸಾಂಸ್ಕ್ರತಿಕ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

Comments are closed.