ಕರಾವಳಿ

ಗಾಯಾಳು ವಿದ್ಯಾರ್ಥಿನಿ ಚಿಕಿತ್ಸೆಗೆ ‘ವೇಷ’ ಹಾಕಿ ಹಣ ಸಂಗ್ರಹಿಸಿ ಕೊಟ್ಟ ಕಾಲೇಜು ಹಳೆ ವಿದ್ಯಾರ್ಥಿಗಳು

Pinterest LinkedIn Tumblr

ಉಡುಪಿ: ಅಪಘಾತದಲ್ಲಿ ಗಾಯಗೊಂಡ ಕಾಲೇಜು ವಿದ್ಯಾರ್ಥಿಯೊರ್ವಳ ಚಿಕಿತ್ಸೆ ವೆಚ್ಚಕ್ಕಾಗಿ ಅದೇ ಕಾಲೇಜಿನ ಹಳೆ ವಿದ್ಯಾರ್ಥಿಗಳು ವಿಭಿನ್ನ ವೇಷ ತೊಟ್ಟು ಸಾರ್ವಜನಿಕರಿಂದ ಹಣ ಸಂಗ್ರಹಿಸಿ ನೀಡಿದ್ದಾರೆ.

ಸರಕಾರಿ ಪ್ರಥಮ ದರ್ಜೆ ಕಾಲೇಜು, ಹಿರಿಯಡಕ ಇಲ್ಲಿನ ದ್ವಿತೀಯ ಎಂ.ಕಾಂ. ವಿದ್ಯಾರ್ಥಿನಿ ಶುಭಲಕ್ಷ್ಮೀ ಕಾಲೇಜಿಗೆ ತೆರಳುವಾಗ ಕಾರು ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದು, ವಿದ್ಯಾರ್ಥಿನಿಯ ಚಿಕಿತ್ಸೆಗೆ ಆರ್ಥಿಕ ನೆರವು ಒದಗಿಸಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಿರಿಯಡಕ ಇಲ್ಲಿನ ಹಳೆ ವಿದ್ಯಾರ್ಥಿಗಳಾದ ಹರ್ಷಿತ್ ಶೆಟ್ಟಿ, ಸಚಿನ್ ಎಂ. ಮಾಜಿಮ್, ನಿತೀಶ್, ಪುರುಷೋತ್ತಮ್, ಕಿರಣ್ ಆಚಾರ್ಯ, ಸಂಧೀಪ, ಸುಧೀರ್, ಅಭಿ, ವಿಜೇತ್, ವಿನೀತ್, ಶಿವಪ್ರಸಾದ್, ರಾಘವೇಂದ್ರ ಹಾಗೂ ಪ್ರಸನ್ನ ಇವರು ಶ್ರೀಕೃಷ್ಣ ಜನ್ಮಾಷ್ಟಮಿಯ ದಿನದಂದು ಉಡುಪಿಯಲ್ಲಿ ವಿಶಿಷ್ಟ ವೇಷಭೂಷಣ ಧರಿಸಿ ಸಾರ್ವಜನಿಕರಿಂದ ಸಂಗ್ರಹಿಸಿದ 52,000 ರೂ. ಹಣವನ್ನು ಇತ್ತೀಚೆಗೆ ವಿದ್ಯಾರ್ಥಿನಿಯ ಪೋಷಕರಿಗೆ ಹಸ್ತಾಂತರಿಸಿದರು.

ಕಾಪು ಶಾಸಕ ಲಾಲಾಜಿ. ಆರ್. ಮೆಂಡನ್, ಕಾಲೇಜಿನ ಪ್ರಾಂಶುಪಾಲರಾದ ಡಾ. ನಿಕೇತನ, ಬೋಧಕ-ಬೋಧಕೇತರ ವರ್ಗ, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಈ ಕಾರ್ಯಕ್ಕೆ ಪ್ರಶಂಸಿಸಿ ಅಭಿನಂದಿಸಿದರು.

Comments are closed.