ಕರಾವಳಿ

ಕಾರಂತರು ಸಾಹಿತ್ಯ ಲೋಕದ‌ ಅದ್ಭುತ ಪ್ರತಿಭೆ : ಶಾನಾಡಿ‌ ಅಜಿತ್‌ ಕುಮಾರ್ ಹೆಗಡೆ

Pinterest LinkedIn Tumblr

ಮಂಗಳೂರು : ಮಕ್ಕಳ ಸಾಹಿತ್ಯ, ಪ್ರವಾಸಕಥನ, ಕಾದಂಬರಿಯಕ್ಷಗಾನ, ವಿಜ್ಞಾನ ಹೀಗೆ ವೈವಿಧ್ಯಮಯವಾಗಿ ಬಹಳಷ್ಟು ಕೃತಿಗಳನ್ನು ರಚಿಸಿ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ ಡಾ| ಕೋಟ ಶಿವರಾಮ ಕಾರಂತರು ಸಾಹಿತ್ಯ ಲೋಕದ‌ಅದ್ಭುತ ಪ್ರತಿಭೆ‌ಎಂಬುದಾಗಿ ಮಂಗಳೂರು ಮಹಾನಗರ ಪಾಲಿಕೆಯ‌ಆಯುಕ್ತ ಶಾನಾಡಿ‌ಅಜಿತ್‌ಕುಮಾರ್ ಹೆಗಡೆ ನುಡಿದರು.

ನಗರದ ಡಾನ್‌ಬಾಸ್ಕೋ ಹಾಲ್‌ನಲ್ಲಿಕಲ್ಕೂರ ಪ್ರತಿಷ್ಠಾನದ‌ಆಶ್ರಯದಲ್ಲಿಜರಗಿದಡಾ. ಶಿವರಾಮ ಕಾರಂತ ಹುಟ್ಟುಹಬ್ಬ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರುತನ್ನ ನೇರ ನಡೆ ನುಡಿಯ ಮೂಲಕ ಅಷ್ಠೇ ಅದ್ಭುತವಾದ ಪಾಂಡಿತ್ಯವನ್ನು ಹೊಂದಿದ ಕಾರಂತರ ನ್ನು ಸ್ಮರಿಸುವುದು ನಿಜಕ್ಕೂ‌ ಔಚಿತ್ಯಪೂರ್ಣ‌ ಎಂದರು.

ಅಂತಾರಾಷ್ಟ್ರೀಯ ಮಟ್ಟದಲ್ಲಿಗುರುತಿಸಲ್ಪಟ್ಟ ಸಾಲಿಗ್ರಾಮ ಮಕ್ಕಳ ಮೇಳದ ಸ್ಥಾಪಕ ಹಾಗೂ ರಾ ಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ‌ ಅಧ್ಯಾಪಕ  ಶ್ರೀಧರ ಹಂದೆಯವರಿಗೆ ಕಾರಂತ ಪ್ರಶಸ್ತಿ ನೀಡಿ ಗೌರವಿಸಲಾಯ್ತು, ಅಲ್ಲದೆ‌ ಇದೇ ಸಂದರ್ಭ‌ ಇತ್ತೀಚೆಗೆ ಕೆನಡದಲ್ಲಿ ಜರಗಿದ ಕಾಮನ್‌ವೆಲ್ತ್‌ ಇಂಟರ್‌ನ್ಯಾಷನಲ್ ಬೆಂಚ್- ಪ್ರೆಸ್ ಪವರ್ ಲಿಫಿಂಗ್ ಚಾಂಪಿಯನ್‌ಶಿಪ್‌ನ 83 ಕೆಜಿ ಸಬ್‌ಜೂನಿಯರ್ ವಿಭಾಗದಲ್ಲಿ 2 ಚಿನ್ನದ ಪದಕವನ್ನು ಗಳಿಸಿರುವ ಮಂಗಳೂರಿನ ರಿತ್ವಿಕ್‌ಅಲೆವುರಾಯ ಕೆ.ವಿ. ಅವರಿಗೆ ‘ಕಾರಂತ ಹುಟ್ಟುಹಬ್ಬ ಸಾಧನಾ ಪ್ರಶಸ್ತಿ’ ಪ್ರದಾನ ಮಾಡಲಾಯಿತು.

ಪ್ರತಿಷ್ಠಾನದ‌ಅಧ್ಯಕ್ಷ‌ಎಸ್. ಪ್ರದೀಪಕುಮಾರಕಲ್ಕೂರಕಾರ್ಯಕ್ರಮದ‌ಅಧ್ಯಕ್ಷತೆ ವಹಿಸಿದ್ದು ಕಾರಂತರ ಮೇರು ವ್ಯಕ್ತಿತ್ವವನ್ನು ಸ್ಮರಿಸುತ್ತಾ ಪರಿಸರದ ಸಂರಕ್ಷಣೆಗಾಗಿಚುನಾವಣಿಯಲ್ಲಿಯೂ ಸ್ಪರ್ಧಿಸಿದ ಕಾರಂತರು‌ಓರ್ವಛಲವಾದಿ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಹಾಗೂ ನಿತ್ಯಾನಂದಕಾರಂತ ಪೊಳಲಿ ಉಪಸ್ಥಿತರಿದ್ದರು.

ಸುಧಾಕರರಾವ್ ಪೇಜಾವರ ಸ್ವಾಗತಿಸಿದರು. ಜಿ.ಕೆ. ಭಟ್ ಸೇರಾಜೆ ನಿರ್ವಹಣೆಗೈದರು. ಜನಾರ್ದನ ಹಂದೆ ವಂದಿಸಿದರು.
ಶಶಿಕಾಂತ ಶೆಟ್ಟಿ ನೇತೃತ್ವದ ಶ್ರೀ ದೇವಿ ಲಲಿತಕಲಾವೃಂದ ಕಾರ್ಕಳ ಇವರಿಂದ ಚಕ್ರಚಂಡಿಕ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.

Comments are closed.