ಬೆಂಗಳೂರು: ರಸ್ತೆಯಲ್ಲಿ ಅಪಘಾತವಾಗಿ ಬಿದ್ದಿದ್ದ ದಂಪತಿಗಳ ಪೈಕಿ ತೀವ್ರ ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸಲು ಕೇಂದ್ರ ಸಚಿವ ಸದಾನಂದಗೌಡ ಅವರು ತಮ್ಮ ಕಾರು ನೀಡಿ ಅರ್ಧ ಕಿ.ಮೀ. ದೂರದ ಮನೆಗೆ ನಡೆದು ಸಾಗಿ ಮಾನವೀಯತೆ ಮೆರೆದಿದ್ದಾರೆ.

https://twitter.com/DVSadanandGowda/status/1182344741079281664?s=20
https://twitter.com/DVSadanandGowda/status/1182342795496812546?s=20
ಗುರುವಾರ ರಾತ್ರಿ ತಮ್ಮ ಕಾರ್ಯ ಮುಗಿಸಿ ಡಿ.ವಿ.ಎಸ್. ಅವರು ಮನೆಯತ್ತ ಸಾಗುತ್ತಿದ್ದ ವೇಳೆ ಇಸ್ರೊ ಕಚೇರಿ ಮುಖ್ಯರಸ್ತೆಯಲ್ಲಿ ದಂಪತಿ ಆಯಾತಪ್ಪಿ ದ್ವಿಚಕ್ರ ವಾಹನದಿಂದ ಕೆಳಗೆ ಬಿದ್ದಿದ್ದರು. ತಕ್ಷಣ ಕಾರು ನಿಲ್ಲಿಸಿದ ಅವರು ಕೆಳಗಿಳಿದು ದಂಪತಿಯನ್ನು ಉಪಚರಿಸಿದ್ದಲ್ಲದೇ ತಮ್ಮ ಚಾಲಕ ಮತ್ತು ಇತರ ಸಿಬ್ಬಂದಿಯೊಂದಿಗೆ ಕಾರಿನಲ್ಲೇ ಅವರನ್ನು ಸಮೀಪದ ರಾಮಯ್ಯ ಆಸ್ಪತ್ರೆಗೆ ಕಳುಹಿಸಿ ಸುಮಾರು ಅರ್ಧ ಕಿ.ಮೀ ದೂರದಲ್ಲಿರುವ ತಮ್ಮ ಮನೆಗೆ ನಡೆದುಕೊಂಡು ಹೋದರು.
Comments are closed.