ಕರ್ನಾಟಕ

ವಾಟ್ಸಾಪ್ ಗ್ರೂಪ್ ನಲ್ಲಿ ಬಿಜೆಪಿ ಹೆಸರಿನಲ್ಲಿ 20ಕ್ಕೂ ಅಧಿಕ ಅಶ್ಲೀಲ ವಿಡಿಯೋ ರವಾನೆ.

Pinterest LinkedIn Tumblr

ಬಿಜೆಪಿ ಹೆಸರಿನಲ್ಲಿ ರಚಿಸಲಾಗಿದ್ದ ಸಾಮಾಜಿಕ ಜಾಲತಾಣ ವಾಟ್ಸಾಪ್ ಗ್ರೂಪ್ ನಲ್ಲಿ ವ್ಯಕ್ತಿಯೊಬ್ಬರು 20ಕ್ಕೂ ಅಧಿಕ ಅಶ್ಲೀಲ ವಿಡಿಯೋಗಳನ್ನು ರವಾನೆ ಮಾಡಿರುವ ಘಟನೆ ನಡೆದಿದೆ.

ಭದ್ರಾವತಿಯ ಪ್ರದೀಪ್ ಅವರು ಈ ವಾಟ್ಸಾಪ್ ಗ್ರೂಪ್ ರಚಿಸಿದ್ದು, ಬುಧವಾರದಂದು ಮತ್ತೊಬ್ಬ ವ್ಯಕ್ತಿ 20ಕ್ಕೂ ಅಧಿಕ ಅಶ್ಲೀಲ ವಿಡಿಯೋಗಳನ್ನು ಈ ಗ್ರೂಪ್ ನಲ್ಲಿ ಶೇರ್ ಮಾಡಿದ್ದಾರೆ.

ಗುರುವಾರದಂದು ಸಹ ಅಶ್ಲೀಲ ವಿಡಿಯೋಗಳು ಇದರಲ್ಲಿ ಹರಿದಾಡಿದ್ದು, ಇದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಗ್ರೂಪ್ ಸದಸ್ಯರು ಆತನನ್ನು ತೆಗೆದುಹಾಕುವಂತೆ ಆಗ್ರಹಿಸಿದ್ದಾರೆ. ಆದರೆ ಗ್ರೂಪ್ ಅಡ್ಮಿನ್ ಕ್ಷಮೆ ಯಾಚಿಸಿ ಸುಮ್ಮನಾಗಿದ್ದಾರೆ.

Comments are closed.