ಯುವಜನರ ವಿಭಾಗ

ಹುಡುಗಿಯರನ್ನು ನಿಮ್ಮತ್ತ ಸೆಳೆಯಲು ಇಲ್ಲಿದೆ ಉತ್ತಮ ಟಿಪ್ಸ್ ..!

Pinterest LinkedIn Tumblr

ಹುಡುಗರೇ ಹುಡುಗಿಯರನ್ನು ಮೆಚ್ಚಿಸಲು ನೀವೆಷ್ಟು ಕಸರತ್ತು ಮಾಡಿದರೂ ಪ್ರಯೋಜನ ಆಗುತ್ತಿಲ್ಲವಾ. ಅದಕ್ಕೆ ಕಾರಣವೇನು ಗೊತ್ತಾ. ಹುಡುಗಿಯರ ಮುಂದೆ ನಿಮ್ಮ ಪರ್ಸನಾಲಿಟಿ, ಮಾತನಾಡುವ ಶೈಲಿ ಯಾವುದು ಮುಖ್ಯವಾಗುವುದಿಲ್ಲ. ಆದರೆ ನೀವು ಹೇಗಿರುತ್ತೀರಾ ಎನ್ನುವುದು ಮುಖ್ಯವಾಗುತ್ತದೆ. ನಿಮ್ಮಲ್ಲಿರಬೇಕಾದ ಗುಣಗಳೇನು ..?

*ಸ್ವಚ್ಛವಾಗಿರಿ : ನಿಮ್ಮ ಜೀವನದಲ್ಲಿ ಸ್ವಚ್ಛತೆಯನ್ನು ಮೊದಲು ಅಳವಡಿಸಿಕೊಳ್ಳಿ. ಪರಿಶುದ್ಧವಾದ ಜೀವನಶೈಲಿ ನಿಮ್ಮ ಸಂಬಂಧ ದೀರ್ಘಕಾಲದವರೆಗೂ ಇರುವಂತೆ ಮಾಡುತ್ತದೆ. ಯಾವ ಹುಡುಗ ಉತ್ತಮ ಆರೋಗ್ಯ ಶೈಲಿಯನ್ನು ಹೊಂದಿರುತ್ತಾನೋ ಅಂತವರ ಕಡೆ ಹುಡುಗಿಯರು ಅಟ್ರ್ಯಾಕ್ಟ್ ಆಗುತ್ತಾರೆ.

*ಮುಖದಲ್ಲೇ ಸ್ವಚ್ಛತೆ ಕಾಣಿಸುತ್ತದೆ: ನಿಮ್ಮ ದೇಹದ ಸ್ವಚ್ಛತೆಯು ಮುಖ್ಯ, ಪ್ರಮುಖವಾಗಿ ಕಿವಿ, ಮೂಗು, ದೇಹವನ್ನು ಸ್ವಚ್ಛವಾಗಿರಿಕೊಳ್ಳುವುದು. ಹುಡುಗನ ಕೂದಲು ಕೂಡ ನೀಟಾಗಿರಲಿ ಎಂದು ಹುಡುಗಿಯರು ಬಯಸುತ್ತಾರೆ. ನಿಮ್ಮ ಸ್ವಚ್ಛತೆಯನ್ನು ನಿಮ್ಮ ಮುಖವೇ ತೋರಿಸುತ್ತದೆ.

*ನಿಮ್ಮ ಉಗುರುಗಳು ಶಾರ್ಟ್ ಆಗಿರಲಿ : ಉಗುರುಗಳನ್ನು ಅತೀ ಹೆಚ್ಚು ಉದ್ದವಾಗಿ ಬೆಳೆಸುವ ಹುಡುಗರ ಅಭ್ಯಾಸವು ಹುಡುಗಿಯರಿಗೆ ಮೆಚ್ಚುಗೆಯಾಗುವುದಿಲ್ಲ. ಅಲ್ಲದೇ ಉಗುರುಗಳನ್ನು ಸ್ವಚ್ಛವಾಗಿರಿಕೊಳ್ಳುವುದು ಕೂಡ ಅತೀ ಮುಖ್ಯವಾದ ವಿಚಾರವಾಗಿದೆ. ನೈಲ್ ಕ್ಲಿಪ್ಪರ್ ಅಥವಾ ಪೆಡಿಕ್ಯೂರ್, ಮೆನಿಕ್ಯೂರ್ ಮಾಡಿಕೊಳ್ಳುತ್ತಿರಿ.

ಮಾಯಿಶ್ಚರೈಸರ್ ಬಳಸಿ : ನಮಗೇಕೆ ಇದೆಲ್ಲಾ ಎನ್ನುವ ಮನೋಭಾವವನ್ನು ಬಿಟ್ಟು ಬಿಡಿ. ಹುಡುಗರು ಬಳಸುವ ಲಿಪ್ ಬಾಮ್ ಗಳು ಕಡಿಮೆ ದರದಲ್ಲಿಯೇ ದೊರೆಯುತ್ತವೆ. ಅಲ್ಲದೇ ಮಾಯಿಶ್ಚರೈಸ್ ಕ್ರೀಮ್ ಬಳಸುವುದು ಮುಖ್ಯ. ನಿಮ್ಮ ಕೈ ಕಾಲುಗಳಿಗೆ ಉತ್ತಮ ಲೋಶನ್ಗಳ ಬಳಕೆ ಮಾಡಿ.

ಗಡ್ಡದ ಸ್ಟೈಲ್ ಕೂಡ ಮುಖ್ಯ : ನಿಮ್ಮ ಮುಖದಲ್ಲಿರುವ ಗಡ್ಡದ ಶೈಲಿಯೂ ಉತ್ತಮವಾಗಿರಲಿ, ಹುಡುಗರೇ ಯಾವುದೇ ಹೊಸ ಸ್ಟೈಲ್ ಬಂತೆಂದು ಅನುಸರಿಸಲು ಹೋಗಿ ಮುಜುಗರಕ್ಕೆ ಒಳಗಾಗದಿರಿ. ಅದು ನಿಮ್ಮ ಮುಖಕ್ಕೆ ಒಪ್ಪುತ್ತದೆಯೇ ಎನ್ನುವುದನ್ನು ಮೊದಲು ಖಾತರಿಪಡಿಸಿಕೊಳ್ಳಿ. ಅಲ್ಲದೇ ಸ್ವಚ್ಛವಾಗಿರಿಸಿಕೊಳ್ಳಿ.

Comments are closed.