ಕರಾವಳಿ

ನಾಪತ್ತೆಯಾಗಿದ್ದ ಮಹಿಳೆಯ ಶವ ಬಾವಿಯಲ್ಲಿ ಪತ್ತೆ; ಆತ್ಮಹತ್ಯೆ ಶಂಕೆ

Pinterest LinkedIn Tumblr

ಕುಂದಾಪುರ: ಮಂಗಳವಾರ ಮನೆಯಿಂದ ಹೊರಟು ನಾಪತ್ತೆಯಾಗಿದ್ದ ಮಹಿಳೆಯೋರ್ವರು ಕುಂದಾಪುರ ತಾಲೂಕಿನ ಹೆಮ್ಮಾಡಿ ದೊಡ್ಮನೆ ಸಮೀಪದ ಬಾವಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಹೆಮ್ಮಾಡಿಯ ಮೂವತ್ತುಮುಡಿ ನಿವಾಸಿ, ನಿವೃತ್ತ ಯೋಧ ತಿಯಾದೋರ್ ಒಲಿವೆರಾ ಎಂಬವರ ಮಗಳು ಸಿಲ್ವಿಯಾ(45) ಸಾವನ್ನಪ್ಪಿದವರು.

ಮಾನಸಿಕ ಅಸ್ವಸ್ಥೆಯಾಗಿದ್ದ ಸಿಲ್ವಿಯಾ ಹೆಮ್ಮಾಡಿ ಸಮೀಪದ ಸುಳ್ಸೆಯ ಸಹೋದರನ‌ ಮನೆಯಲ್ಲಿ ವಾಸವಿದ್ದರು. ಮಂಗಳವಾರ ಹೊರಗೆ ಹೊರಟವರು ಮರಳಿ ಮನೆಗೆ ಬಂದಿರಲಿಲ್ಲ. ಬಳಿಕ ಮನೆಯವರು ಹುಡುಕಾಟ ಆರಂಭಿಸಿದ್ದು, ರಾತ್ರಿಯಾದರೂ ಸಿಲ್ವಿಯಾ ಪತ್ತೆಯಾಗಿರಲಿಲ್ಲ. ಕೂಡಲೇ ಕಂಡ್ಲೂರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.

ಇಂದು ಸಂಜೆ ಮನೆಯವರು ಹುಡುಕಾಟ ನಡೆಸುತ್ತಿರುವಾಗ ಹೆಮ್ಮಾಡಿ ಪಂಚಾಯತ್ ಸದಸ್ಯ ಆನಂದ ಪಿಎಚ್ ಮನೆಯ ಸಮೀಪದ ಖಾಸಗಿ ತೋಟದಲ್ಲಿರುವ ಬಾವಿಯೊಳಗೆ ಸಿಲ್ವಿಯಾ ಶವವಾಗಿ ಪತ್ತೆಯಾಗಿದ್ದಾರೆ.

ಕುಂದಾಪುರ ಪೊಲೀಸರು ಸ್ಥಳಕ್ಕಾಗಮಿಸಿ ಸ್ಥಳೀಯರ ಸಹಕಾರದಿಂದ ಮೃತದೇಹವನ್ನು ಮೇಲೆತ್ತಿದ್ದಾರೆ. ಚಪ್ಪಲಿ ಬಾವಿ ಸಮೀಪ ಪತ್ತೆಯಾಗಿದ್ದು, ಆತ್ಮಹತ್ಯೆಗೈದಿರುವುದಾಗಿ ಪೊಲೀಸರು ಶಂಕಿಸಿದ್ದಾರೆ.

Comments are closed.