ಯುವಜನರ ವಿಭಾಗ

ದಂಪತಿ ಪರಸ್ಪರ ದೂರ ಮಲಗಿದರೆ ಎಲ್ಲವೂ ಒಳ್ಳೆಯದೇ ಎಂದು ಸಮೀಕ್ಷೆ ಹೇಳಿದ್ದೇಕೆ ಗೊತ್ತೇ…?

Pinterest LinkedIn Tumblr

ದಂಪತಿ ಪರಸ್ಪರ ದೂರ ಮಲಗಿದರೆ ದೇಹಕ್ಕೂ ಆರಾಮ, ಸಂಬಂಧಕ್ಕೂ ಒಳ್ಳೆಯದು ಎಂದಿದೆ ಇತ್ತೀಚಿನ ಅಧ್ಯಯನ. ಸಾವಿರಾರು ದಂಪತಿಗಳನ್ನು ಸಮೀಕ್ಷೆಗೆ ಒಳ ಪಡಿಸಿದಾಗ ತಿಳಿದು ಬಂದ ಅಂಶವೇನೆಂದರೆ ಅರ್ಧದಷ್ಟು ಮಂದಿ ಜತೆಗೆ ಮಲಗುವುದಿಲ್ಲ. ಅದಕ್ಕೆ ಕಾರಣಗಳು ಇಬ್ಬರ ನಡುವೆ ವೈಮನಸ್ಸು ಅಂತಲ್ಲ. ಸಂಗಾತಿಯ ಗೊರಕೆಯೇ ಇದಕ್ಕೆಲ್ಲ ಕಾರಣ ಎಂದಿದ್ದಾರೆ. ಇನ್ನೂ ಹಲವರು ಸಂಗಾತಿಯ ದೇಹ ಶಾಖದ ನೆಪ ಹೇಳುತ್ತಾರೆ. ಕಿರಿಕಿರಿ ಭಾವವೂ ಇರಬಹುದು. ಆದರೆ ಹೋಗೆ ಕೆಲವು ಸಮಯ ಪರಸ್ಪರ ದೂರವೇ ಇರುವುದರಿಂದ ದೈಹಿಕ ಆರೋಗ್ಯಕ್ಕೆ ಮಾತ್ರ ಒಳ್ಳೆಯದಲ್ಲ. ಸಂಬಂಧದ ಸೆಳೆತ ಕೂಡ ಇರುತ್ತದೆಯಂತೆ.

ವರ್ಚುವಲ್‌ ವರ್ಲ್ಡ್‌ಗೆ ಸಂಬಂಧ ವರ್ಗಾವಣೆ
ಸೋಷಿಯಲ್‌ ಮೀಡಿಯಾಕ್ಕೆ ಅಂಟಿಕೊಳ್ಳುವ ಮಂದಿ ತಮ್ಮ ನೈಜ ಬದುಕಿನ ಸಂಬಂಧವನ್ನು ವರ್ಚುವಲ್‌ ಜಗತ್ತಿಗೆ ವರ್ಗಾಯಿಸಿದ್ದಾರಂತೆ. ಸಮೀಕ್ಷೆಯೊಂದರ ಪ್ರಕಾರ, ಸಾಮಾಜಿಕ ತಾಣಗಳಿಗೆ ಆ್ಯಡಿಕ್ಟ್ ಆದವರ ನೈಜ ಬದುಕಿನ ಸಂಬಂಧಗಳ ಜತೆಗಿನ ಸಂವಹನವೇ ತಪ್ಪಿ ಹೋಗುತ್ತದೆ ಎನ್ನಲಾಗಿದೆ.

ಕುಟುಂಬಕ್ಕೆ ಇರಲಿ ಪ್ರಾಮುಖ್ಯ
ಕುಟುಂಬಕ್ಕೆ ಸಮಯ ನೀಡುವ ಸಂದರ್ಭದಲ್ಲಿ ನಿಮ್ಮ ಲೋಕದಲ್ಲಿ ನೀವು ಡಿಜಿಟಲ್‌ ಡಿವೈಸ್‌ಗಳೊಂದಿಗೆ ವಿಹರಿಸುತ್ತಿದ್ದೀರ? ಹಾಗಾದರೆ ಅದು ನಿಮ್ಮ ಕೌಟುಂಬಿಕ ಬದುಕಿನ ವಾತಾವರಣಕ್ಕೆ ಒಳ್ಳೆಯದಲ್ಲ. ವಿಶೇಷವಾಗಿ ನಿಮ್ಮ ಹಾಗೂ ನಿಮ್ಮ ಮಕ್ಕಳ ಸಂಬಂಧದ ಮೇಲೆ ಮಾರಕ ಪರಿಣಾಮ ಬೀಳುತ್ತದೆಯಂತೆ. ಅಂದರೆ ನಿಮ್ಮ ಮಕ್ಕಳು ಪಕ್ಕದಲ್ಲಿದ್ದರೂ ಅವರ ಚಟುವಟಿಕೆ ಮೇಲೆ ಗಮನ ಹರಿಸದಿದ್ದರೆ, ಅವರ ಮಾತುಗಳನ್ನು ಕೇಳಿಸಿಕೊಳ್ಳದಿದ್ದರೆ ದೀರ್ಘಾವಧಿಯಲ್ಲಿ ನಿಮ್ಮ ಹಾಗೂ ಮಕ್ಕಳ ಸಂಬಂಧದ ಬೇರು ಸಡಿಲವಾಗುವುದು ಎಂದು ಎಚ್ಚರಿಸಿದೆ ಸಮೀಕ್ಷೆ.

Comments are closed.