ಯುವಜನರ ವಿಭಾಗ

ಹುಡುಗಿಯರ ಇಂಥ ಹವ್ಯಾಸಗಳೇ ಹುಡುಗರು ಹೆಚ್ಚು ಇಷ್ಟ ಪಡುತ್ತಾರೆ !

Pinterest LinkedIn Tumblr

ಪುರುಷರಿಗೆ ಕೇವಲ ಮಹಿಳೆಯರ ಫಿಗರ್‌ ಮತ್ತು ಸೌಂದರ್ಯ ಆಕರ್ಷಕವಾಗಿ ಕಾಣೊದಲ್ಲ. ಇದರ ಜೊತೆಗೆ ಮಹಿಳೆಯರ ವಿವಿಧ ಹವ್ಯಾಸಗಳು ಪುರುಷರನ್ನು ಸೆಳೆಯುತ್ತದೆ. ಅಂತಹ ಹವ್ಯಾಸಗಳು ಯಾವುವು ಎಂದು ಮಹಿಳೆಯರಿಗೂ ಸಹ ಗೊತ್ತಾಗೋದಿಲ್ಲ.

ಮಹಿಳೆಯರು ಇಗ್ನೋರ್ ಮಾಡುವಂತಹ ಸಣ್ಣ ಪುಟ್ಟ ಹವ್ಯಾಸಗಳು ಹೆಚ್ಚಾಗಿ ಪುರುಷರಿಗೆ ಹುಚ್ಚು ಹಿಡಿಸಿ ಬಿಡುತ್ತದೆ. ಅಂತಹ ಹವ್ಯಾಸಗಳು ಯಾವುವು ನೋಡಿ….

ಲೂಸ್‌ ಡ್ರೆಸ್‌ : ನೀವು ಓವರ್‌ ಸೈಜ್‌ ಡ್ರೆಸ್‌ ಧರಿಸಿದರೆ ಚೆನ್ನಾಗಿ ಕಾಣಿಸೋದಿಲ್ಲ ಎಂದು ನೀವು ಅಂದುಕೊಂಡಿರಬಹುದು ಅಲ್ವಾ? ಆದರೆ ಈ ಲುಕ್‌ ಪುರುಷರಿಗೆ ಇಷ್ಟವಾಗುತ್ತದೆ. ನೀವು ಯಾವುದೆ ಲೂಸ್‌ ಶರ್ಟ್‌ ಮತ್ತು ಶಾರ್ಟ್ಸ್‌ ಧರಿಸಿದ್ದರೆ, ಮೇಕಪ್‌ ಧರಿಸದೆ ಇದ್ದರೂ ಸಹ ಪುರುಷರು ನಿಮಗೆ ಫಿದಾ ಆಗುತ್ತಾರೆ.

ಹರಡಿಕೊಂಡಿರುವ ಕೂದಲು ಅಥವಾ ಬನ್‌ : ಹುಡುಗಿಯರು ಕೂದಲನ್ನು ಸರಿಯಾಗಿ ಬಾಚಿ ಕಟ್ಟಿರೋದಕ್ಕಿಂತ ಬಾಚದೆ ಹಾಗೆಯೆ ಬಿಟ್ಟಿದ್ದರೆ, ಸುಮ್ಮನೆ ಕೂದಲನ್ನು ಒಟ್ಟಾಗಿ ಸೇರಿಸಿ ಮೇಲೋಂದು ಬನ್‌ ಮಾಡಿದ್ದರೆ ಆಲುಕ್‌ ಪುರುಷರಿಗೆ ತುಂಬಾನೆ ಇಷ್ಟವಾಗುತ್ತದೆ. ಇಂತಹ ಮೆಸ್ಸಿ ಲುಕ್‌ ಪುರುಷರಿಗೆ ಇಷ್ಟವಾಗುತ್ತದೆ. ಇನ್ನು ನೀವು ಸುಂದರವಾಗಿ ಕಾಣಲು ಸಹ ಮೆಸ್ಸಿ ಕೂದಲು ಪಡೆಯಬಹುದು.

ತಮಾಷೆ ಮಾಡುವ ಹವ್ಯಾಸ : ಪುರುಷರಿಗೆ ನಗಿಸುವಂತಹ ಫನ್‌ ಲವ್ವಿಂಗ್‌ ಮಹಿಳೆಯರು ಹೆಚ್ಚು ಇಷ್ಟವಾಗುತ್ತಾರೆ. ನಿಮ್ಮಲ್ಲಿ ಈ ಹವ್ಯಾಸ ಇದ್ದರೆ ಅದು ಪುರುಷರನ್ನು ನಿಮ್ಮತ್ತ ಆಕರ್ಷಿಸಲು ಕಾರಣವಾಗುತ್ತದೆ. ಹಲವಾರು ಹುಡುಗಿಯರ ವಿಶೇಷ ಗುಣ ಎಂದರೆ ಅವರು ಕೆಟ್ಟ ಪರಿಸ್ಥಿತಿಯಲ್ಲೂ ಮುಖದ ಮೇಲೆ ಮಗುವನ್ನು ಇಟ್ಟುಕೊಂಡಿರುತ್ತಾರೆ. ಮನಸ್ಸು ಬಿಚ್ಚಿ ನಗುವಂತಹ ಮಹಿಳೆಯರು ಪುರುಷರಿಗೆ ಇಷ್ಟವಾಗುತ್ತಾರೆ.

ಇನ್ನೊಬ್ಬರನ್ನ ಫಾಲೋ ಮಾಡದೆ ಇರೋದು : ಏನಾದರು ನಿರ್ಧಾರ ತೆಗೆದುಕೊಳ್ಳುವ ಸಂದರ್ಭ ಬಂದರೆ ಯಾರನ್ನು ಕೇಳದೆ ತಾವೆ ನಿರ್ಧಾರ ತೆಗೆದುಕೊಳ್ಳುವ ಮಹಿಳೆಯರು ಅವರಿಗೆ ಇಷ್ಟವಾಗುತ್ತಾರೆ. ಯಾವ ಮಹಿಳೆ ಪುರುಷರಿಗೆ ತಮ್ಮನ್ನು ಕಂಟ್ರೋಲ್‌ ಮಾಡುವ ಹಕ್ಕು ಕೊಡುವುದಿಲ್ಲ. ಅಂತಹ ಮಹಿಳೆಯರು ಮಾಡರ್ನ್‌ ಪುರುಷರಿಗೆ ಇಷ್ಟವಾಗುತ್ತಾರೆ.

ತಮ್ಮದೆ ಸ್ಟೈಲ್‌ ಹೊಂದಿರುವವರು : ತಮ್ಮದೆ ಆದ ಸ್ಟೈಲ್‌ನ್ನು ಹೊಂದಿರುವ ಹುಡುಗಿಯರು ಪುರುಷರಿಗೆ ಇಷ್ಟವಾಗುತ್ತಾರೆ. ಜೊತೆಗೆ ತಮಗೆ ಏನು ಬೇಕು? ಹೇಗೆ ಎಲ್ಲವನ್ನೂ ಸಂಭಾಳಿಸಿಕೊಂಡು ಹೋಗುವುದು ಎಂದು ತಿಳಿದ ಮಹಿಳೆಯರ ಕ್ಯಾರೆಕ್ಟರ್‌ ಪುರುಷರನ್ನು ಆಕರ್ಷಿಸುತ್ತದೆ.

ಮೇಕಪ್‌ ಮಾಡದ ಹುಡುಗಿ : ಹೌದು ಪುರುಷರಿಗೆ ಮೇಕಪ್‌ ಮಾಡಿದ ಮಹಿಳೆಯರಿಗಿಂತ ಹೆಚ್ಚಾಗಿ ಮೇಕಪ್‌ ಇಲ್ಲದೆ ಇರುವ ಮಹಿಳೆ ಇಷ್ಟವಾಗುತ್ತಾಳೆ. ಹುಡುಗಿಯರ ನ್ಯಾಚುರಲ್‌ ಲುಕ್‌ಗೆ ಹುಡುಗರು ಫಿದಾ ಆಗುತ್ತಾರೆ.

Comments are closed.