ಕರ್ನಾಟಕ

ರಾಹುಲ್ ಗಾಂಧಿ ಕೊರಳು ಸೇರಿತು ಅಭಿಮಾನಿ ದೂರದಿಂದ ಎಸೆದ ಹೂಮಾಲೆ; ತಬ್ಬಿಬ್ಬಾದ ರಾಹುಲ್! (ವಿಡಿಯೋ)

Pinterest LinkedIn Tumblr

ತುಮಕೂರು: ಅಭಿಮಾಯೊಬ್ಬ ಎಸೆದ ಹಾರ ನೇರವಾಗಿ ಎಐಸಿಸಿ ಅಧ್ಯಕ್ಷ ರಾಹುಲ್ ಕೊರಳಿಗೆ ಬಿದ್ದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಲಲ್ಲಿ ವೈರಲ್ ಆಗಿದೆ.

ತುಮಕೂರಿನಲ್ಲಿ ಸಿದ್ದಗಂಗಾ ಶ್ರೀಗಳ ಆಶೀರ್ವಾದ ಪಡೆದ ಬಳಿಕ ಭದ್ರತೆಯೊಂದಿಗೆ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ತೆರೆದ ವಾಹನದಲ್ಲಿ ರೋಡ್ ಶೋ ನಡೆಸುತ್ತಿದ್ದ ವೇಳೆ ರಾಹುಲ್ ಗಾಂಧಿ ಜೊತೆಗೆ ಭದ್ರತಾ ಸಿಬ್ಬಂದಿಗಳು ಇದ್ದರು. ಅಭಿಮಾನಿಗಳು, ಕಾರ್ಯಕರ್ತರು ಇಕ್ಕೆಲಗಳಲ್ಲಿ ನಿಂತು ರಾಹುಲ್ ಗಾಂಧಿಗೆ ಜಯಘೋಷ ಹಾಕುತ್ತಿದ್ದರು. ಇದೇ ವೇಳೆ ದೂರದಲ್ಲಿ ನಿಂತಿದ್ದ ವ್ಯಕ್ತಿ ರಾಹುಲ್ ಗಾಂಧಿ ಅವರಿಗೆ ದೂರದಿಂದ ಹೂವಿನ ಹಾರ ಎಸೆದಿದ್ದರು. ಅದು ಸಲೀಸಾಗಿ ರಾಹುಲ್ ಕೊರಳಿಗೆ ಬಿದ್ದಿತ್ತು.

ತಬ್ಬಿಬ್ಬಾದ ರಾಹುಲ್ ಗಾಂಧಿ!
ಕೊರಳಿಗೆ ಹೂವಿನ ಮಾಲೆ ಬೀಳುತ್ತಲೇ ಒಂದು ಕ್ಷಣ ರಾಹುಲ್ ಗಾಂಧಿ ತಬ್ಬಿಬ್ಬಾಗಿದ್ದು ಒಮ್ಮೆಲೆ ಸುಧಾರಿಸಿಕೊಂಡು ಹಾರವನ್ನು ಕತ್ತಿನಿಂದ ತೆಗೆದು ಮತ್ತೆ ಜನರತ್ತ ಕೈಬೀಸಿದರು.

ರಮ್ಯಾ ಟ್ವೀಟ್..!
ಈ ವಿಡಿಯೋದ ತುಣಕನ್ನು ಶೇರ್ ಮಾಡಿರುವ ರಮ್ಯಾ, ‘Karnataka’s got talent!’ ಟ್ಯಾಗ್ ಲೈನ್ ಮೂಲಕ ಟ್ವೀಟ್ ಮಾಡಿದ್ದಾರೆ.

Comments are closed.