ರಾಷ್ಟ್ರೀಯ

ತೆಲಂಗಾಣದ ನಲ್ಗೊಂಡದಲ್ಲಿ ಕಾಲುವೆಗೆ ಉರುಳಿ ಬಿದ್ದ ಟ್ರ್ಯಾಕ್ಟರ್: 9 ಮಂದಿ ಸಾವು

Pinterest LinkedIn Tumblr

ತೆಲಂಗಾಣ: ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್‌‌ ಕಾಲುವೆಗೆ ಉರುಳಿ ಬಿದ್ದ ಪರಿಣಾಮ 9 ಮಂದಿ ಕೂಲಿ ಕಾರ್ಮಿಕರು ಮೃತಪಟಿರುವ ಘಟನೆ ನಲ್ಗೊಂಡ ಜಿಲ್ಲೆಯಲ್ಲಿ ನಡೆದಿದೆ.

ಶುಕ್ರವಾರ ಬೆಳಗ್ಗೆ 30 ಮಹಿಳಾ ಕಾರ್ಮಿಕರನ್ನು ಕೆಲಸಕ್ಕೆ ಕರೆದೊಯ್ಯುತ್ತಿದ್ದ ವೇಳೆ ಅಲಿಮಿನೆತಿ ಮಾಧವ ರೆಡ್ಡಿ ಯೋಜನೆ (ಎಎಂಆರ್‌ಪಿ) ನೀರಾವರಿ ಕಾಲುವೆಗೆ ಟ್ರ್ಯಾಕ್ಟರ್‌‌ ಬಿದ್ದಿದೆ.

ಮೃತರನ್ನು ರಾಮಾವತ್‌ ಸೋನಾ(70), ರಾಮಾವತ್‌ ಜೆಲಾ(65), ಜರುಲುಲಾ ದ್ವಾಲಿ(30), ರಾಮಾವತ್‌ ಕೇಲಿ(50), ಬಾನಾವತ್ ಬೆರಿ(55), ರಾಮಾವತ್‌ ಭಾರತಿ(35), ರಾಮಾವತ್‌ ಲಕ್ಷ್ಮೀ (50), ರಾಮಾವತ್‌ ಕಾಸ್ಲ್ಮಿ(50) ಮತ್ತು ರಾಮಾವತ್‌ ಸುನೀತಾ(30) ಎಂದು ಗುರುತಿಸಲಾಗಿದೆ.

ಮೃತದೇಹಗಳನ್ನು ನೀರಿನಿಂದ ಹೊರತೆಗೆದಿದ್ದು, 15 ಮಂದಿಯನ್ನು ರಕ್ಷಿಸಲಾಗಿದೆ ಉಳಿದವರ ಪತ್ತೆಗಾಗಿ ಕಾರ್ಯಾಚರಣೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

Comments are closed.