ಕರ್ನಾಟಕ

ಚುನಾವಣೆಗೆ ನಿಲ್ಲದಂತೆ ಕಾಂಗ್ರೆಸ್ ಮುಖಂಡರಿಂದ ಬೆದರಿಕೆ; ಪ್ರೆಸ್ ಕ್ಲಬ್ ನಲ್ಲಿ ವಿಷ ಸೇವಿಸಿದ ಬಾಂಬ್ ನಾಗ

Pinterest LinkedIn Tumblr

ಬೆಂಗಳೂರು: ಚುನಾವಣೆಗೆ ನಿಲ್ಲಬಾರದೆಂದು ಕಾಂಗ್ರೆಸ್ ಮುಖಂಡರು, ಅವರ ಬೆಂಬಲಿಗರು ನನಗೆ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಿರುವ ಬಾಂಬ್ ನಾಗ ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲೇ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಕಾಂಗ್ರೆಸ್ ಮುಖಂಡರಾದ ದಿನೇಶ್ ಗುಂಡೂರಾವ್ ಮತ್ತು ಕೆ‌.ಜೆ ಜಾರ್ಜ್ ಅವರುಗಳ ಬೆಂಬಲಿಗರು ನನಗೆ ಬೆದರಿಕೆಯೊಡ್ಡಿದ್ದಾರೆ. ಎಂದ ಬಾಂಬ್ ನಾಗ ಪ್ರೆಸ್ ಕ್ಲಬ್ ನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯ ವೇಳೆ ಕಾಂಗ್ರೆಸ್ ಮುಖಂಡರ ವಿರುದ್ಧ ಹರಿಹಾಯ್ದಿದ್ದಾರೆ.

“ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್‌, ಸಚಿವ ಕೆ.ಜೆ. ಜಾರ್ಜ್‌ ಅವರುಗಳಿಂದ ನನಗೆ ಅನ್ಯಾಯವಾಗಿದೆ, ನನ್ನ ಸಾವಿಗೆ ಅವರೇ ಕಾರಣ, ಸಿದ್ದರಾಮಯ್ಯ ಸರ್ಕಾರ ನನಗೆ ಅನ್ಯಾಯ ಮಾಡಿದೆ. ಕಾಂಗ್ರೆಸ್ ಸರ್ಕಾರ ಪ್ರೇರಿತ ಪೊಲೀಸರು ಪದೇ ಪದೇ ದಾಳಿ ನಡೆಸಿ ನಮಗೆ ಕಿರುಕುಳ ನೀಡುತ್ತಿದ್ದಾರೆ” ಬಾಂಬ್ ನಾಗ ಆರೋಪಿಸಿದ್ದಾರೆ.

ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ದಿನೇಶ್ ಗುಂಡೂರಾವ್ ಮತ್ತು ಕೆ‌.ಜೆ ಜಾರ್ಜ್ ಅವರಿಗೆ ಮತ ಹಾಕಬೇಡಿ ಎಂದು ನಾಗ ಮನವಿ ಮಾಡಿಕೊಂಡಿದ್ದಾರೆ.

ಪ್ರೆಸ್ ಕ್ಲಬ್ ನಲ್ಲಿ ನಡೆಸಿದ್ದ ಪತ್ರಿಕಾಗೋಷ್ಠಿಯಲ್ಲಿಯೇ ತಿಗಣೆ ಔಷಧಿ ಸೇವಿಸಿದ್ದ ನಾಗ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸಧ್ಯ ಅಸ್ವಸ್ಥಗೊಂಡಿರುವ ಬಾಂಬ್ ನಾಗ ಅವರನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Comments are closed.