ಯುವಜನರ ವಿಭಾಗ

ಮದುವೆಯಾಗುವುದಕ್ಕಿಂತ ಮುಂಚೆ ನೀವು ಇದನ್ನು ತಪ್ಪದೆ ಮಾಡಲೇಬೇಕು…!

Pinterest LinkedIn Tumblr

ಇದು ಸ್ಪೆಷಲ್‌ ಆಗಿ ಮದುವೆಯಾಗಲು ರೆಡಿಯಾಗುತ್ತಿರುವ ಪುರುಷರಿಗಾಗಿಯೇ ನೀಡಿರುವ ಸಲಹೆಗಳಾಗಿವೆ. ಮದುವೆ ಆಗುವ ಮುನ್ನ ನೀವು ಏನೆಲ್ಲಾ ಮಾಡಬೇಕು, ಯಾಕೆ ಮಾಡಬೇಕು ಅನ್ನೋದನ್ನು ನಾವು ನಿಮಗೆ ತಿಳಿಸುತ್ತೇವೆ. ಇದನ್ನೆ ನೀವು ಮಾಡಿ. ಮಾಡಲೇಬೇಕು. ಇಲ್ಲವಾದರೆ ನಿಮ್ಮ ಲೈಫ್‌ ವೇಸ್ಟ್‌ ಆಗೋದರಲ್ಲಿ ಸಂಶಯವಿಲ್ಲ.

ಗ್ಯಾಜೆಟ್‌ ಖರೀದಿ ಮಾಡಿ : ನಿಮಗೆ ಏನೆಲ್ಲಾ ಗ್ಯಾಜೆಟ್‌ ಖರೀದಿ ಮಾಡಬೇಕು, ಅದನ್ನೆಲ್ಲಾ ಮದುವೆಗು ಮುನ್ನವೇ ಖರೀದಿ ಮಾಡಿ. ಮದುವೆಯ ನಂತರ ಅದನ್ನೆಲ್ಲ ಖರೀದಿ ಮಾಡುವ ಅವಕಾಶವನ್ನು ಪತ್ನಿ ನೀಡಲಾರಳು.

ಆಕ್ಷನ್‌ ಮೂವಿ ನೋಡಿ : ಎಲ್ಲಾ ರೀತಿಯ ಆಕ್ಷನ್‌ ಮೂವಿಗಳನ್ನು ನೋಡಿ. ಮದುವೆಯ ನಂತರ ಮೂವಿ ನೋಡುವ ನಿಮ್ಮ ಅಭಿರುಚಿ ಪತ್ನಿಯ ಅಭಿರುಚಿಯಂತೆ ಬದಲಾಗಬಹುದು.

ಆಣೆ – ಪ್ರಮಾಣ ಮಾಡುವುದನ್ನು ನಿಲ್ಲಿಸಿ : ಇವತ್ತಿನಿಂದಲೇ ಆಣೆ -ಪ್ರಮಾಣ ಮಾಡುವುದನ್ನು ನಿಲ್ಲಿಸಿ. ಇದನ್ನು ನೀವು ಮದುವೆಯ ನಂತರ ಮುಂದುವರೆಸಿಕೊಂಡು ಹೋದರೆ ನಿಮ್ಮ ಪೂರೈಸಲಾಗದ ಆಣೆ ಪ್ರಮಾಣಗಳು ಸಂಸಾರ ಯುದ್ಧಕ್ಕೆ ಕಾರಣವಾಗಬಹುದು.

ಬಾಲ್ಯ ಸ್ನೇಹಿತರೊಂದಿಗೆ ಪಾರ್ಟಿ : ನಿಮ್ಮ ಶಾಲೆ -ಕಾಲೇಜಿನ ಫ್ರೆಂಡ್ಸ್‌ಗಳನ್ನು ಭೇಟಿ ಮಾಡಿ ಪಾರ್ಟಿ ಮಾಡಿ ಎಂಜಾಯ್‌ ಮಾಡಿ. ಹೋಗುವಾಗ ವೆಡ್ಡಿಂಗ್‌ ಕಾರ್ಡ್‌ ನೀಡಲು ಮರೆಯಬೇಡಿ.

ಒಂದು ಬ್ರೇಕ್‌ ಅಪ್‌ ಇರಲಿ : ಇದು ಯಾಕೆ ಎಂದರೆ ಮುಂದೆ ನಿಮ್ಮ ಪತ್ನಿ ಜೊತೆ ಮಾತನಾಡಿ ಜಗಳವಾಗಿ ಮನಸ್ಸು ಮುರಿದು ಹೋಗುವ ಚಾನ್ಸ್‌ ಇದೆ. ಅದರ ಅನುಭವ ಮೊದಲೆ ಆದರೆ ಉತ್ತಮ.

ಮಹಿಳೆಯರನ್ನು ಹ್ಯಾಂಡಲ್‌ ಮಾಡೋದನ್ನು ಕಲಿಯಿರಿ : ಇದನ್ನೆಲ್ಲ ನೀವು ಮೊದಲೆ ಕಲಿಯದೆ ಇದ್ದರೆ ಮದುವೆಯ ನಂತರ ತುಂಬಾ ಕಷ್ಟವಾಗಬಹುದು. ನಂತರ ನಿಮ್ಮನ್ನು ಹೆಂಡತಿಯ ಗುಲಾಮ ಎಂದು ಹೇಳಿದರೆ ತಪ್ಪಿಲ್ಲ.

ಅಡುಗೆ ಮಾಡಲು ಕಲಿಯಿರಿ : ಇದು ನಿಮ್ಮ ವೈಫ್‌ನ್ನು ಇಂಪ್ರೆಸ್‌ ಮಾಡುವ ವಿಧಾನ ಅಲ್ಲ, ಕೆಲವೊಮ್ಮೆ ಆಕೆ ಜಗಳ ಮಾಡಿ ನಿಮ್ಮ ಜೊತೆ ಮಾತು ಬಿಟ್ಟು ಅಡುಗೆ ಮನೆಗೆ ರಜೆ ಘೋಷಿಸಿದಾಗ ನಿಮ್ಮ ಲೈಫ್‌ ಸೇವರ್‌ ಆಗಿ ಕಾರ್ಯ ನಿರ್ವಹಿಸುತ್ತದೆ.

ಹಣಕಾಸು ನಿರ್ವಹಣೆ : ಇದು ಮುಖ್ಯವಾಗಿ ನೀವು ಗಮನಿಸಬೇಕಾದ ವಿಷಯ. ಆರ್ಥಿಕ ವ್ಯವಸ್ಥೆ ಸುಧಾರಣೆ ಮಾಡಲು ಪ್ರಯತ್ನಿಸಿ. ಬ್ಯಾಂಕ್‌ನಲ್ಲಿ ಸೇವಿಂಗ್‌ ಮಾಡಲು ಪ್ರಯತ್ನಿಸಿ.

ಒಬ್ಬಂಟಿ ಟ್ರಾವೆಲ್‌ ಮಾಡಿ : ಮದುವೆಯಾಗುವ ಮುನ್ನ ಒಬ್ಬರೆ ನಿಮಗೆ ಬೇಕಾದ ಕಡೆಗಳಲ್ಲೆಲ್ಲಾ ಟ್ರಾವೆಲ್ ಮಾಡಿ. ಇದು ನಿಮಗೆ ಜೀವನ ಪರ್ಯಂತ ಬೆಸ್ಟ್‌ ಅನುಭವ ನೀಡುತ್ತದೆ.

Comments are closed.