ಕರ್ನಾಟಕ

ಕಾವೇರಿ ವಿವಾದ ಸಂಬಂಧಿಸಿದಂತೆ ತಮಿಳುನಾಡು ಬಂದ್; ರಾಜ್ಯದಿಂದ ತೆರಳುವ ಕೆಎಸ್ಆರ್’ಟಿಸ್ ಬಸ್ ಸಂಚಾರ ಸ್ಥಗಿತ

Pinterest LinkedIn Tumblr

ಬೆಂಗಳೂರು: ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಕಾವೇರಿ ನಿರ್ವಹಣಾ ಮಂಡಳಿ ರಚಿಸುವಂತೆ ಆಗ್ರಹಿಸಿ ಇಂದು ತಮಿಳುನಾಡು ರಾಜ್ಯದ್ಯಂತ ಬಂದ್ ಆಚರಿಸಲಾಗುತ್ತಿದ್ದು, ಈ ಹಿನ್ನಲೆಯಲ್ಲಿ ರಾಜ್ಯದಿಂದ ತಮಿಳುನಾಡಿಗೆ ತೆರಳುವ ಎಲ್ಲಾ ಕೆಎಸ್ಆರ್’ಟಿಸಿ ಬಸ್ ಸೇರಿದಂತೆ ಸರಕು ಸಾಗಣೆ ಲಾರಿಗಳು, ವಾಣಿಜ್ಯ ವಾಹನಗಳು, ಪ್ರವಾಸಿ ವಾಹನಗಳು ಹಾಗೂ ಎಲ್ಲಾ ರೀತಿಯ ವಾಹನಗಳ ಸಂಚಾರಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ತಿಳಿದುಬಂದಿದೆ.

ಬೆಂಗಳೂರು ಸೇರಿದಂತೆ ರ್ಜಾಯದ ನಾನು ಕಡೆಗಳಿಂದ ಪ್ರತಿನಿತ್ಯ ಸುಮಾರು 250 ಕೆಎಸ್ಆರ್’ಟಿಸಿ ಬಸ್ ಗಳು ತಮಿಳುನಾಡಿಗೆ ಸಂಚರಿಸುತ್ತವೆ. ಅಂತೆಯೇ ಸುಮಾರು 12 ಸಾವಿರ ಸರಕು ಸಾಗಣೆ ವಾಹನಗಳು ಸಂಚರಿಸುತ್ತವೆ. ಬಂದ್ ಹಿನ್ನಲೆಯಲ್ಲಿ ಎಲ್ಲಾ ವಾಹನಗಳ ಸಂಚಾರ ಸ್ಥಗಿತಗೊಳಿಸಲು ಸರಕು ಸಾಗಣೆ ಲಾರಿ ಮಾಲೀಕರ ಸಂಘಟನೆಗಳು ನಿರ್ಧರಿಸಿವೆ.

ತಮಿಳುನಾಡು ಬಂದ್ ನಿಂದಾಗಿ ಆಹಾಗ ಸಾಮಾಗ್ರಿಗಳು, ದವಸ ಧಾನ್ಯ, ಹಣ್ಣು, ತರಕಾರಿ ಸೇರಿತೆದೆ ಇತರೆ ನಿತ್ಯದ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆಗಳಿವೆ. ಉಭಯ ರಾಜ್ಯಗಳ ನಡುವೆ ಸಂಚರಿಸುವ ಪ್ರಯಾಣಿಕರಿಗೂ ಕೊಂಚ ಸಮಸ್ಯೆ ಎದುರಾಗಲಿದೆ.

ಮುನ್ನೆಚ್ಚರಿಕಾ ಕ್ರಮವಾಗಿ ಬಸ್ ಗಳ ಸಂಚಾರವನ್ನು ಸ್ಥಗಿತಗೊಳಿಸಲು ಸರ್ಕಾರ ತೀರ್ಮಾನಿಸಿದೆ. ಬಂದ್ ವೇಳೆ ಕಿಡಿಗೇಡಿಗಳು ವಾಹನಗಳ ಮೇಲೆ ಕಲ್ಲು ತೂರಾಟ ನಡೆಸುವ ಅಥವಾ ಬೆಂಕಿ ಹಚ್ಚುವ ಸಾಧ್ಯತೆಗಳಿದ್ದು, ಪರಿಸ್ಥಿತಿ ಅವಲೋಕಿಸಿ ಬಸ್ ಗಳ ಕಾರ್ಯಾಚರಣ ಆರಂಭಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಯಾಣಿಕರ ಹಾಗೂ ವಾಹನಗಳ ಸುರಕ್ಷತೆ ಹಿನ್ನಲೆಯಲ್ಲಿ ಇಂದು ಪ್ರವಾಸಿ ವಾಹನಗಳ ಸಂಚಾರವನ್ನೂ ಸ್ಥಗಿತಗೊಳಿಸಲಾಗಿದೆ ಎಂದು ಬೆಂಗಳೂರು ಪ್ರವಾಸಿ ವಾಹನಗಳ ಸಂಘದ ಅಧ್ಯಕ್ಷ ರಾಧಾಕೃಷ್ಣಹೊಳ್ಳ ಅವರು ತಿಳಿಸಿದ್ದಾರೆ.

Comments are closed.