ಯುವಜನರ ವಿಭಾಗ

ರೊಮ್ಯಾಂಟಿಕ್‌ ಲೈಫ್‌ ನಿಮ್ಮದಾಗಬೇಕೇ….? ಈ ಸೂತ್ರಗಳನ್ನು ಪಾಲಿಸಿ…!

Pinterest LinkedIn Tumblr

ಪ್ರೀತಿ, ಸ್ನೇಹ, ಸಂಬಂಧ ಇವುಗಳು ನಮ್ಮ ಜೀವನದಲ್ಲಿ ಪ್ರಮುಖವಾಗಿ ಇರಲೇ ಬೇಕಾದಂತಹ ಅಂಶಗಳು. ಪ್ರೀತಿ, ಸಂಬಂಧ ಇಲ್ಲದೇ ಯಾವುದೇ ಜೀವಿಯೂ ಇರಲಾರದು. ನಿಮ್ಮ ಸಂಬಂಧ ಗಟ್ಟಿಯಾಗಿರಬೇಕಾದರೆ ಹೀಗೆ ಮಾಡಿ..

ಸಂಬಂಧಗಳಲ್ಲಿ ಕೋರಿಕೆ ಅಂದರೆ ಪ್ಲೀಸ್, ಥ್ಯಾಂಕ್ಯೂ, ವೆಲ್‍ಕಮ್ ಎಂಬ ಪದಗಳನ್ನು ಹೆಚ್ಚಾಗಿ ಉಪಯೋಗಿಸಿ ಇದರಿಂದ ಸಂಬಂಧ ಹೆಚ್ಚುಕಾಲ ಉಳಿಯುತ್ತದೆ.

ಒಳ್ಳೆಯ ಕೇಳುಗರಾಗಿ, ತಮ್ಮ ಪ್ರೀತಿ ಪಾತ್ರರ ಮಾತುಗಳಿಗೆ ಕಿವಿಯಾದರೆ ಅವರು ಎಂದಿಗೂ ಸಂತಸದಿಂದಿರುತ್ತಾರೆ.

ಮಕ್ಕಳು, ಕುಟುಂಬ, ಅಡುಗೆ ಮನೆ, ಕಾರ್ಯಕ್ರಮಗಳ ಹೊರತಾಗಿ ಪತಿಗಾಗಿ ಹೆಚ್ಚಿನ ಸಮಯವನ್ನು ಮೀಸಲಿಡಿ.

ಪತಿಯ ಅಥವಾ ಪ್ರಿಯಕರನ ನಡವಳಿಕೆಯ ಮೇಲೆ ಸಂಶಯಾಸ್ಪದ ನೋಟ ಬೀರಬೇಡಿ. ಬದಲಾಗಿ ಮುಕ್ತವಾಗಿ ಮಾತುಕತೆ ನಡೆಸಿ. ಮುಕ್ತ ಮಾತುಕತೆ ಸಂಬಂಧಗಳನ್ನು ಬೆಸೆಯುವಲ್ಲಿ ಸಹಾಯಕವಾಗುತ್ತದೆ.

ಸಂತಸದ ವಿಷಯವಾಗಲಿ, ಬೇಸರದ ವಿಷಯವಾಗಲಿ ಅಥವಾ ಯಾರಾದರು ಹೇಳಿದರೆಂಬ ಮಾತ್ರಕ್ಕೆ ತಮ್ಮ ಪ್ರೀತಿಪಾತ್ರರ ಮೇಲೆ ಸಂಶಯ ಪಡಬೇಡಿ. ಬದಲಾಗಿ ಎಲ್ಲಾ ವಿಷಯವನ್ನು ಮುಖತಃ ಭೇಟಿ ನೀಡಿ ಚರ್ಚೆ ಮಾಡಿ.

ಪ್ರೀತಿ ಪಾತ್ರರಿಗೆ ಆಗಾಗ ಏನಾದರೊಂದು ಸರ್‍ಪ್ರೈಸ್ ಗಿಫ್ಟ್ ಅಥವಾ ಪಾರ್ಟಿಯನ್ನು ಏರ್ಪಡಿಸಿ ಅವರನ್ನು ಸಂತಸಗೊಳಿಸಿ.

ಆರೋಗ್ಯಯುತ ಸಂಬಂಧ ಬೆಳೆಸಿಕೊಳ್ಳಿ. ಯಾವುದೇ ಕಾರಣಕ್ಕೂ ಒಬ್ಬರು ಮತ್ತೊಬ್ಬರ ಮೇಲೆ ಒತ್ತಡ ಹೇರುವುದು ಸರಿಯಲ್ಲ.

ಹಳೆ ಸಂಬಂಧದ ಕುರಿತಾಗಲಿ ಅಥವಾ ಹಳೆಯ ವಿಷಯದ ಕುರಿತಾಗಲಿ ಪದೇ ಪದೇ ಕೆದಕಬೇಡಿ. ಇದರಿಂದ ಹೊಸ ಸಂಬಂಧ ಹಾಳಾಗುವ ಸಾಧ್ಯತೆ ಹೆಚ್ಚಿದೆ.

ನಿಮ್ಮ ಕಚೇರಿ ಸಮಸ್ಯೆಯಾಗಲಿ ಅಥವಾ ಇತರ ಯಾವುದೇ ಸಮಸ್ಯೆಯನ್ನಾಗಲಿ ನಿಮ್ಮ ಪ್ರಿಯಕರ ಅಥವಾ ಪತಿಯ ಮೇಲೆ ತೋರ್ಪಡಿಸಬೇಡಿ.

ಪ್ರೀತಿ ಪಾತ್ರರಿಗೆ ಸಣ್ಣ ಪುಟ್ಟ ವಿಷಯದಲ್ಲಾದರೂ ತಮ್ಮ ಗುಣ, ಅಭಿಲಾಶೆಗಳನ್ನು ಬದಲಾಯಿಸಿ, ಅವರಿಗೆ ಹೊಂದಿಕೊಳ್ಳುವಂತೆ ನೋಡಿಕೊಳ್ಳಿ. ಜಗಳ ಮಾಡುವುದನ್ನು ಕಡಿಮೆಗೊಳಿಸಲು ನೀವಾಗಿ ಏನಾದರು ತಮಾಷೆಯ ಸಂದರ್ಭವನ್ನು ಉಂಟುಮಾಡಿ, ಸಮಸ್ಯೆಯನ್ನು ತಿಳಿಗೊಳಿಸಿ. ಆದರೆ, ಆ ವಿನೋದವು ಇನ್ನೊಬ್ಬರ ಮನಸನ್ನು ನೋಯಿಸದಿರಲಿ.

ಜೆಲಸೀ ಎಂಬುದು ನಿಜವಾದ ಪ್ರೀತಿಯ ಲಕ್ಷಣವಾಗಿದೆ. ಆದರೆ, ಅದೇ ಜೆಲಸೀ ಫೀಲಿಂಗ್ ಅತಿಯಾದರೆ ಸಂಬಂಧ ಹಳಸಿ ಹೋಗಬಹುದು.

ಸಂಬಂಧಗಳು ಎಂದಿಗೂ ಶಾಶ್ವತವಾಗಿರಬೇಕಾದರೆ ಇಬ್ಬರಲ್ಲಿ ಒಬ್ಬರಾದರೂ ತಮ್ಮ ದೋಷಗಳನ್ನು ತಿದ್ದಿಕೊಂಡು ಬದಲಾವಣೆ ತಂದುಕೊಂಡು ಬಾಳಬೇಕು.

ನೀವು ಮಾಡಿದ್ದು ತಪ್ಪು ಎಂದಾದಾಗ ನಿಮ್ಮ ಪ್ರಿಯಕರನಲ್ಲಿ ಕ್ಷಮಿಸಿ ಎಂದು ಕೇಳಲು ಹಿಂಜರಿಯಬೇಡಿ. ಕ್ಷಮೆ ಕೇಳುವುದರಿಂದ ಯಾರು ಚಿಕ್ಕವರಾಗುವುದಿಲ್ಲ ಬದಲಾಗಿ ಸಂಬಂಧ ಭದ್ರವಾಗುತ್ತದೆ.

ಪ್ರತಿದಿನ ಎನಾದರೂ ಸಣ್ಣ ಪುಟ್ಟ ಕೆಲಸಗಳನ್ನು ನಿಮ್ಮ ಪ್ರೀತಿ ಪಾತ್ರರಿಗಾಗಿ ಮಾಡುತ್ತಾ ಬನ್ನಿ. ನಿಮ್ಮ ಚಿಕ್ಕ ಕೇರಿಂಗ್‍ನಲ್ಲೂ ಅವರು ಸಮುದ್ರದಷ್ಟು ಆನಂದವನ್ನು ಹೊಂದಬಹುದು.

ಜತೆಯಾಗಿರುವಾಗ ಬರುವ ಜೀವನದ ಎಲ್ಲಾ ಸುಖ ಸಂತಸಗಳನ್ನು ಸರಿಯಾಗಿ ಸ್ವೀಕರಿಸಿ, ಯಾವುದಕ್ಕೂ ಹಾತೊರೆಯಬೇಡಿ.

ಪ್ರಿಯಕರನ ಪಾಸಿಟಿವ್ ಗುಣಗಳ ಬಗ್ಗೆ ಮಾತ್ರ ಸರಿಯಾಗಿ ಅರಿತು ಹೆಚ್ಚಾಗಿ ಅದರ ಕುರಿತಾಗಿ ಮಾತನಾಡಿ. ನೆಗೆಟಿವ್ ಗುಣಗಳನ್ನು ಕೆದಕಲು ಹೋಗಬೇಡಿ.

ಪ್ರತಿಯೊಬ್ಬರಿಗೂ ಅವರದೇ ಆದ ಗುಣ ವಿಶೇಷತೆ ಇರುತ್ತದೆ. ಎಲ್ಲರೂ ಒಂದೇ ತರಹ ಇರಲು ಅಥವಾ ಯೋಚಿಸಲು ಸಾಧ್ಯವಿಲ್ಲ. ಅದಕ್ಕಾಗಿ ತಮ್ಮ ಪ್ರೀತಿ ಪಾತ್ರರೂ ನಮ್ಮಂತೆ ಇರಬೇಕು ಯೋಚಿಸಬೇಕು ಎಂಬುದನ್ನು ಬಿಟ್ಟು ಅವರು ಯಾವ ರೀತಿ ಇರುತ್ತಾರೋ ಆ ರೀತಿಯಾಗಿ ಅವರನ್ನು ಸ್ವೀಕರಿಸಿ.

ಭವಿಷ್ಯದ ಕುರಿತಾಗಿ ಸರಿಯಾದ ಯೋಜನೆಯನ್ನು ರೂಪಿಸಿ ಅದರಂತೆ ನಡೆದುಕೊಳ್ಳಿ. ಇದರಿಂದ ಸಂಬಂಧ ವೃದ್ಧಿಸುತ್ತದೆ.

ಸಂಗಾತಿಯ ಎಲ್ಲಾ ಚಟುವಟಿಕೆಗಳಲ್ಲೂ ಅವರಿಗೆ ಬೆಂಬಲಿಗರಾಗಿ ನಿಲ್ಲಿ. ಅವರನ್ನು ಟೀಕಿಸಬೇಡಿ. ಬದಲಾಗಿ ಸಲಹೆಗಳನ್ನು ನೀಡಿ.

ಆರೋಗ್ಯಯುತ ದೈಹಿಕ ಸಂಬಂಧವನ್ನು ಬೆಳೆಸಿಕೊಳ್ಳಿ. ಒಂದು ಮುತ್ತು ಅಥವಾ ಪ್ರೀತಿಯ ಅಪ್ಪುಗೆ ಸಂಗಾತಿಯ ದಿನವನ್ನು ಸಂತಸವಾಗಿಡುತ್ತದೆ.

ಉತ್ತಮ ಸಂಗಾತಿಯಾಗುವ ಮೊದಲು ಉತ್ತಮ ಸ್ನೇಹಿತರಾಗಿ. ಆಗ ಒಬ್ಬರನ್ನೊಬ್ಬರು ಅರಿಯಲು ಸುಲಭವಾಗುತ್ತದೆ.

ಹುಟ್ಟು ಹಬ್ಬ ಮತ್ತು ಮದುವೆ ದಿನ ಅಥವಾ ಫಸ್ಟ್ ಮೀಟಿಂಗ್ ಡೇ ಯನ್ನು ಎಂದಿಗೂ ಮರೆಯಬೇಡಿ. ಆ ದಿನ ಅವರಿಗೆ ಹೆಚ್ಚು ಸರ್‍ಪ್ರೈಸ್‍ಗಳನ್ನು ಕೊಡಿ, ಗಿಫ್ಟ್ ನೀಡಿ ಸಂತಸ ಪಡಿಸಿ.

ವಾರಕ್ಕೊಮ್ಮೆ ಅಥವಾ ತಿಂಗಳಿಗೊಮ್ಮೆಯಾದಾರು ಯಾವುದಾದರು ಸುಂದರವಾದ ಪ್ರಕೃತಿ ಧಾಮಕ್ಕೆ ಪ್ರವಾಸ ಹೋಗಿ ಬನ್ನಿ. ಇದರಿಂದ ಮನಸ್ಸಿಗೂ ಸಂತಸ, ನವ ಚೈತನ್ಯ ಹಾಗೂ ಪ್ರೀತಿ ಹೆಚ್ಚುತ್ತದೆ.

ಸಂಗಾತಿಯನ್ನು ಇಷ್ಟಪಡುತ್ತೇನೆ ಅಥವಾ ಎಷ್ಟು ಪ್ರೀತಿಸುತ್ತೇನೆ ಎಂದು ಹೇಳುವುದನ್ನು ಎಂದಿಗೂ ಮರೆಯಬೇಡಿ. ಅವಕಾಶ ಸಿಕ್ಕಿದಾಗಲೆಲ್ಲಾ ನಿಮ್ಮ ಪ್ರೀತಿಯನ್ನು ತೋರ್ಪಡಿಸಿ ಹಾಗೂ ಅವರ ಒಳ್ಳೆಯ ಗುಣಗಳ ಕುರಿತು ಪ್ರಶಂಸೆ ಮಾಡಿ.

ನಿಮ್ಮ ಸಂಗಾತಿಗಾಗಿ ನೀವೆ ಒಂದು ಸುಂದರವಾದ ಪ್ರೀತಿಯ ಹೆಸರಿಟ್ಟು ಅದರಲ್ಲೇ ಅವರನ್ನು ಕರೆಯಿರಿ ಇದರಿಂದ ಪ್ರೀತಿ ಇಮ್ಮಡಿಯಾಗುತ್ತದೆ.

Comments are closed.