ರಾಷ್ಟ್ರೀಯ

ಶಿಕ್ಷಕಿಯೊಂದಿಗಿನ ಸೆಕ್ಸ್ ಸಂಬಂಧವನ್ನು ಪ್ರಶ್ನಿಸಿದ ತಾಯಿಯನ್ನೇ ಹೊಡೆದು ಕೊಂದ ಸಲಿಂಗಿ ಮಗಳು !

Pinterest LinkedIn Tumblr

ಘಾಜಿಯಾಬಾದ್: ಶಿಕ್ಷಕಿ ಜೊತೆ ಸೆಕ್ಸ್ ರಿಲೇಶನ್ ಶಿಪ್ ನಲ್ಲಿ ಇದ್ದಿದ್ದನ್ನು ಪ್ರಶ್ನಿಸಿದ ತಾಯಿಯನ್ನು ಕೊಲೆಗೈದಿರುವ ಘಟನೆ ದೆಹಲಿಯ ಕವಿ ನಗರದಲ್ಲಿ ನಡೆದಿದೆ.

ಪುಷ್ಪಾದೇವಿ ರಾಣಾ ಮಗಳಿಂದಲೇ ಕೊಲೆಯಾದ ತಾಯಿ. 21 ವರ್ಷದ ಮಗಳು ರಶ್ಮಿ ರಾಣಾ ತನ್ನ ಶಿಕ್ಷಕಿ ನಿಶಾ ಗೌತಮ್ ಎಂಬಾಕೆ ಜೊತೆ ಸೆಕ್ಸ್ ರಿಲೇಶನ್ ಶಿಪ್ ನಲ್ಲಿದ್ದಳು. ಮಗಳ ವಿಷಯ ತಿಳಿದ ತಾಯಿ ಸಲಿಂಗ ಕಾಮದಿಂದ ದೂರ ಉಳಿಯುವಂತೆ ತಿಳಿಹೇಳಿದ್ದರು. ತನ್ನ ಸಂಬಂಧಕ್ಕೆ ತಾಯಿ ಅಡ್ಡವಾಗುತ್ತಾಳೆಂದು ತಿಳಿದ ರಶ್ಮಿ ತನ್ನ ಸಂಗಾತಿ ನಿಶಾ ಜೊತೆ ಕಬ್ಬಿಣದ ಸಲಾಕೆಯಿಂದ ಹೊಡೆದು ಪುಷ್ಪಾರನ್ನು ಕೊಂದಿದ್ದಾರೆ. ತಲೆಯ ಭಾಗಕ್ಕೆ ತೀವ್ರವಾದ ಗಾಯಗೊಂಡಿದ್ದರಿಂದ ಪುಷ್ಪಾ ಸಾವನ್ನಪ್ಪಿದ್ದಾರೆ.

ಪುಷ್ಪಾದೇವಿಯ ಕೊಲೆಯ ಬಳಿಕ ಪತಿ ಸತೀಶ್ ರಾಣಾ ಮಾರ್ಚ್ 09ರಂದು ಕವಿ ನಗರ ಪೊಲೀಸ್ ಠಾಣೆಯಲ್ಲಿ ರಶ್ಮಿ ಮತ್ತು ನಿಶಾ ವಿರುದ್ಧ ದೂರು ದಾಖಲಿಸಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ಘಾಜಿಯಾಬಾದ್ ರೈಲ್ವೇ ನಿಲ್ದಾಣದಲ್ಲಿ ರಶ್ಮಿ ಮತ್ತು ನಿಶಾ ಇಬ್ಬರನ್ನು ಬಂಧಿಸಿದ್ದಾರೆ. ಪೊಲೀಸ್ ವಿಚಾರಣೆಯಲ್ಲಿ ರಶ್ಮಿ ತಾಯಿಯ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾಳೆ.

ರಶ್ಮಿ ಮತ್ತು ನಿಶಾ ಕೆಲವು ದಿನಗಳಿಂದ ಸಂಬಂಧದಲ್ಲಿದ್ದರು. ಮಗಳ ಅನೈತಿಕ ಸಂಬಂಧದ ವಿಷಯ ತಿಳಿದ ತಾಯಿ ನಿಶಾಳಿಂದ ದೂರ ಉಳಿಯುವಂತೆ ಒತ್ತಡ ಹಾಕುತ್ತಿದ್ದರು. ನಿಶಾ ಜೊತೆಗಿನ ಸಂಬಂಧ ಕಳೆದುಕೊಳ್ಳಲು ಇಚ್ಛಿಸದ ರಶ್ಮಿ ತಂದೆ ಮನೆಯಲ್ಲಿರದ ವೇಳೆಯಲ್ಲಿ ಕಬ್ಬಿಣದ ಸಲಾಕೆಯಿಂದ ಹೊಡೆದು ತಾಯಿಯನ್ನು ಕೊಂದಿದ್ದಾಳೆ ಅಂತಾ ಪೊಲೀಸ್ ಅಧೀಕ್ಷಕ ಆಕಾಶ್ ತೊಮರ್ ಹೇಳಿದ್ದಾರೆ. ಸದ್ಯ ರಶ್ಮಿ ಮತ್ತು ನಿಶಾ ಇಬ್ಬರನ್ನು ಜೈಲಿಗೆ ಕಳುಹಿಸಲಾಗಿದೆ.

Comments are closed.