ಉಡುಪಿ: ಉಡುಪಿ ಜಿಲ್ಲೆಯ ಮಣಿಪಾಲದಲ್ಲಿ ಬಣ್ಣದ ಹಬ್ಬ ಹೊಳಿ ಸಂಭ್ರಮ ಜೋರಾಗಿಯೇ ಇತ್ತು . .ಮಣಿಪಾಲದ ವಿವಿ ಕ್ಯಾಂಪಸ್ ವಿದ್ಯಾರ್ಥಿಗಳು ಹೊಳಿ ಹಬ್ಬವನ್ನ ಸಕತ್ತಾಗಿ ಆಚರಣೆ ಮಾಡಿ ಸಂಭ್ರಮಿಸಿದರು .
ಎಂಐಟಿ ಹಾಕಿ ಮೈದಾನದಲ್ಲಿ ಸೇರಿದ್ದ ಸಾವಿರಾರು ವಿದ್ಯಾರ್ಥಿಗಳು ಒಬ್ಬರಿಗೊಬ್ಬರು ಬಣ್ಣಗಳೆನ್ನೆರುಚ್ಚುತ್ತಾ, ಹೊಳಿ ಹಬ್ಬದ ಶುಭಾಶಯಗಳನ್ನ ವಿನಿಮಯ ಮಾಡಿಕೊಂಡ್ರು.ಸಾಲದೆಂಬಂತೆ ಬಣ್ಣದ ನೀರೋಕುಳಿಯಲ್ಲಿ ಮಿಂದೆದ್ದು ಹೋಳಿ ಸಂಭ್ರಮದಲ್ಲಿ ತೇಲಾಡಿದರು. ಇನ್ನೂ ಡಿಜೆ ಪ್ಲೇ ಮಾಡುತ್ತಿದ್ದ ಹಾಡಿಗೆ, ವಿದ್ಯಾರ್ಥಿಗಳು ಬಣ್ಣಗಳ ಎರಚುತ್ತಾ ಸಖತ್ ಸ್ಟೆಪ್ ಹಾಕಿ ಕುಣಿದಾಡಿ ಎಂಜಾಯ್ ಮಾಡಿದ್ರು.
ಉತ್ತರ ಭಾರತ ಸೇರಿದಂತೆ ವಿವಿಧ ದೇಶಗಳ ವಿದ್ಯಾರ್ಥಿಗಳು ಮಣಿಪಾಲದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ ಹೀಗಾಗಿ ವಿದ್ಯಾರ್ಥಿಗಳಾಗಾಗಿಯೇ ವಿವಿ ಹೋಳಿ ಹಬ್ಬವನ್ನು ಪ್ರತಿ ವರುಷ ಎರ್ಪಡಿಸುತ್ತಾರೆ.ವರುಷಕ್ಕೊಮ್ಮೆ ಬರೋ ಈ ಸಂಭ್ರಮಾಚರಣೆಯಲ್ಲಿ ವಿದ್ಯಾರ್ಥಿಗಳು ಬಣ್ಣದ ಹಬ್ಬವನ್ನು ಸಖತ್ತಾಗಿಯೇ ಎಂಜಾಯ್ ಮಾಡ್ತಾರೆ.