ಉಡುಪಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಹಲವು ವಿಚಾರದಲ್ಲಿ ನಂಬರ್ ಒನ್ ಸ್ಥಾನದಲ್ಲಿದ್ದಾರೆಂದು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಉಡುಪಿಯಲ್ಲಿ ಠೀಕಾ ಪ್ರಹಾರ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಭ್ರಷ್ಟಾಚಾರದಲ್ಲಿ ನಂಬರ್ ಒನ್, ಕ್ರೈಂನಲ್ಲಿ ನಂಬರ್ ಒನ್, ಕೆಲಸ ಮಾಡದಿರುವುದರಲ್ಲಿ ನಂ.ಒನ್, ಸುಳ್ಳು ಹೇಳುವುದರಲ್ಲಿ ಸಿದ್ದರಾಮಯ್ಯ ನಂ.ಒನ್, ಕಾನೂನು ಸುವ್ಯವಸ್ಥೆ ಕೆಟ್ಟ ನಿರ್ವಹಣೆಯಲ್ಲಿ , ಕೀಳು ಮಟ್ಟದ ಮಾತಿನಲ್ಲಿ, ದುರಹಂಕಾರ, ಉಡಾಫೆಯಲ್ಲಿ ಸಿಎಂ ನಂಬರ್ ಒನ್ ಅಲ್ಲದೇ ಕೆಟ್ಟ ಬಾಡಿ ಲ್ಯಾಂಗ್ವೆಜಲ್ಲಿ ಸಿಎಂ ನಂ 1 ಎಂದು ವಾಗ್ದಾಳಿ ಮಾಡಿದ್ದಾರೆ.
ಕಾಂಗ್ರೆಸ್ ಇತಿಹಾಸಕ್ಕೆ ಸಿದ್ದರಾಮಯ್ಯ ಮಾರಕವಾಗಿದ್ದು ಸಿಎಂ ಒಮ್ಮೆ ತಿರುಗಿ ತಮ್ಮ ಬೆನ್ನು ನೋಡಬೇಕು. ಹೂಡಿಕೆದಾರರು ನಮ್ಮ ರಾಜ್ಯಕ್ಕೆ ಬಂದೇ ಇಲ್ಲ, ಸುಳ್ಳು ಬೋರ್ಡ್ ಹಾಕಿಕೊಂಡು ಸಿಎಂ ಓಡಾಡುತ್ತಿದ್ದಾರೆ. ಕರ್ನಾಟಕಕ್ಕೆ ಮಸಿ ಬಳೆಯುವ ಪ್ರಕರಣ ನಡೆದಿದೆ. ಭೈರತಿ ಬಸವರಾಜ್ ಸಿಎಂ ಅವರ ಫೈನಾನ್ಶಿಯರ್ ಆಗಿದ್ದು ಭೈರತಿ ಬಂಟ ನಾರಾಯಣ ಸ್ವಾಮಿ ಬಿಬಿಎಂಪಿಗೆ ಬೆಂಕಿ ಹಚ್ಚಲು ಮುಂದಾಗಿದ್ದರು. ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಹತೋಟಿಗೆ ಬರುತ್ತಿದೆ, ಗೂಂಡಾಗಳು ಜೈಲಲ್ಲೇ ಇರಬೇಕು. ರಾಜ್ಯದಲ್ಲಿ ಪಿಎಫ್ ಐ ಬ್ಯಾನ್ ಆಗಬೇಕಾಗಿದ್ದು ಇದೇ ಕಾರಣಕ್ಕೆ ಪಿಎಫ್ ಐ ವಿರುದ್ಧ ಹೋರಾಟ ಮಾಡುತ್ತಿದ್ದೇವೆ ಎಂದರು.
ರಾಜ್ಯದಲ್ಲಿ 25 ಕಾರ್ಯಕರ್ತರ ಹತ್ಯೆಯಾಗಿದ್ದು ಇವೆಲ್ಲವೂ ಜಿಹಾದಿಗಳು ಮತ್ತು ರಾಜಕೀಯ ಪ್ರೇರಿತ ಹತ್ಯೆಗಳಿವೆ. ಜಿಹಾದಿಗಳ ಹತ್ಯೆಯನ್ನು ಕರಪತ್ರದಲ್ಲಿ ಮುದ್ರಿಸಲಾಗಿದೆ, ರಾಜಕೀಯ ಹತ್ಯೆಗಳನ್ನು ಸೇರಿಸಿಲ್ಲ. ಬಿಜೆಪಿ ಕಾರ್ಯಕರ್ತರಲ್ಲದ ಜನರ ಹತ್ಯೆಯಾಗಿದ್ದು ಶಾಂತಿಪ್ರಿಯ ಕರ್ನಾಟಕ ಸುರಕ್ಷಿತವಾಗಿಲ್ಲ ಎಂಬ ಭಾವನೆ ಮೂಡಿದೆ. ರಾಜ್ಯದ ಅಶಾಂತಿಗೆ ಜನ ಹೆದರಿದ್ದಲ್ಲದೇ ಕರ್ನಾಟಕ ಸುರಕ್ಷಿತವಲ್ಲ ಎಂಬ ಭಾವನೆ ಮೂಡಿದೆ, ವಿದೇಶಿ ಪ್ರವಾಸಿಗರ ಸಂಖ್ಯೆ ಇಳಿಕೆಯಾಗಿದೆ ಎಂದು ಕರಂದ್ಲಾಜೆ ಕಿಡಿಕಾರಿದರು.
ಮಾ.೩ರಿಂದ ಜನ ಸುರಕ್ಷಾ ಯಾತ್ರೆ ಆರಂಭವಾಗಲಿದೆ. ಮಂಗಳೂರು ಚಲೋ ಅಭಿಯಾನ ನಡೆಯಲಿದೆ. ಅಂಕೋಲಾ,ಕುಶಾಲನಗರದಿಂದ ಯಾತ್ರೆ ಹೊರಡಲಿದೆ. ಇದರ ಸಮಾರೋಪದಲ್ಲಿ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾಗವಹಿಸಲಿದ್ದಾರೆ. ಸಚಿವೆ ಮೇನಕಾ ಗಾಂಧಿ ಮಾರ್ಚ್ 5 ರಂದು ಪಾದಯಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ. 6 ರಂದು ಮಂಗಳೂರಿನಲ್ಲಿ ಪಾದಯಾತ್ರೆ ಕೊನೆಗೊಳ್ಳಲಿದೆ, ನಾವು ಶಾಂತಿಯುತ ಪಾದಯಾತ್ರೆ ಮಾಡುತ್ತೇವೆ. ಧ್ವಜ ಮತ್ತು ನೀರಿನ ಬಾಟಲ್ ಮಾತ್ರ ಕೈಯ್ಯಲ್ಲಿರುತ್ತದೆ. ಪೊಲೀಸರು ಯಾತ್ರೆಯ ಬಗ್ಗೆ ತಲೆ ಕೆಡಿಸುವುದು ಬೇಡ ಎಂದು ಶೋಭಾ ಹೇಳಿದರು.