ಕರಾವಳಿ

‘ಸಖಿ ಒನ್ ಸ್ಟಾಪ್ ಕೇಂದ್ರ’ವನ್ನು ಉಡುಪಿಯಲ್ಲಿ ಉದ್ಘಾಟಿಸಲಿದ್ದಾರೆ ಕೇಂದ್ರ ಸಚಿವೆ ಮೇನಕ ಗಾಂಧಿ

Pinterest LinkedIn Tumblr

ಉಡುಪಿ: ನಿರ್ಭಯ ಪ್ರಕರಣದ ನಂತರ ,ಮಹಿಳೆಯರ ಸುರಕ್ಷತೆ ದೃಷ್ಟಿಯಿಂದ ಸಖಿ ಒನ್ ಸ್ಠಾಪ್ ಕೇಂದ್ರವನ್ನು ರಾಜ್ಯಕ್ಕೆ ಒಂದರಂತೆ ಪ್ರಾರಂಭಿಸಲು ನಿರ್ಧಾರ ಮಾಡಿತ್ತು. ರಾಜ್ಯದ ಮೊತ್ತ ಮೊದಲ ಮೊದಲ ಸಖಿ ಕೇಂದ್ರವನ್ನು ಉಡುಪಿಯಲ್ಲಿ ಸ್ಥಾಪನೆಯಾಗಿದೆ .ಈ ಕೇಂದ್ರವನ್ನು ಕೇಂದ್ರ ಸಚಿವೆ ಮೇನಕ ಗಾಂಧಿ ಮಾರ್ಚ್ 5 ರಂದು ಲೋಕಾರ್ಪಣೆ ಮಾಡಲಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ದೌರ್ಜನ್ಯಕ್ಕೋಳಗಾದ ಮಹಿಳೆಯರ ರಕ್ಷಣೆ, ಪೊಲೀಸರ ಮೂಲಕ ಕಾನೂನು ಸಹಾಯ ಹಸ್ತ ಹಾಗೂ ಮಾನಸಿಕವಾಗಿ ದೌರ್ಜನ್ಯಕ್ಕೋಳಗಾದ ಮಹಿಳೆಯರಿಗೆ ಸೂಕ್ತ ಕೌನ್ಸಿಲಿಂಗ್ ವ್ಯವಸ್ಥೆಯನ್ನ ಕಲ್ಪಿಸುವುದು ಹಾಗೂ ತಾತ್ಕಲಿಕ ಆಶ್ರಯ ಹಾಗೂ ಚಿಕಿತ್ಸಾ ವ್ಯವಸ್ಥೆಗಳನ್ನು ಈ ಕೇಂದ್ರದಲ್ಲಿ ಒದಗಿಸಲಾಗುವುದು ಎಂದು ತಿಳಿಸಿದ್ದಾರೆ. ಸಖಿ ಒನ್ ಸ್ಟಾಪ್ ಕೇಂದ್ರ ಇಡೀ ರಾಜ್ಯಕ್ಕೆ ಸಂಬಂದಪಟ್ಟಿದ್ದು,ರಾಜ್ಯದ ಯಾವುದೇ ಮೂಲೆಯಲ್ಲಿ ಮಹಿಳೆಯರಿಗೆ ಸಮಸ್ಯೆಗಳು ಉಂಟಾದಲ್ಲಿ ಈ ಕಾಲ್ ಸೆಂಟರ್ ಮೂಲಕ ದೂರನ್ನ ನೀಡುವ ವ್ಯವಸ್ಥೆಯನ್ನ ಕಲ್ಪಿಸಲಾಗಿದೆ ಎಂದರು.

ಇನ್ನೂ ಉಡುಪಿ ಜಿಲ್ಲೆಗೆ ಬಹು ಬೇಡಿಕೆಯಾಗಿದ್ದ ಪಾಸ್ಪೋರ್ಟ್ ಕಚೇರಿ ಕೂಡ ಮಂಜೂರಾಗಿದ್ದು, ಉಡುಪಿಯ ಬ್ರಹ್ಮಾವರದಲ್ಲಿ ಪಾಸಪೋರ್ಟ್ ಕಚೇರಿಯನ್ನು ಸ್ಥಾಪಿಸಲಾಗಿದೆ.ಈ ಕಚೇರಿಯನ್ನ ಕೂಡ ಕೇಂದ್ರ ಸಚಿವೆ ಮೇನಾಕ ಗಾಂಧಿ ಉದ್ಗಾಟಿಸಲಿದ್ದಾರೆ. ಈ ಮೂಲಕ ಕರಾವಳಿ ಜನರ ಬಹು ದೊಡ್ಡ ಬೇಡಿಕೆ ಈಡೇರಿದ್ದಂತಾಗಿದೆ ಎಂದು ಸಂಸದೆ ಶೋಬಾ ಕರಾಂದ್ಲಾಜೆ ಹೇಳಿದ್ದಾರೆ.

Comments are closed.