ಕರಾವಳಿ

ನವದುರ್ಗೆಯರ ರೂಪದಲ್ಲಿ ಮಿಂಚಿದ ಬಾಲೆ : ವಿಷ್ಣು ಅಭಿಮಾನಿ ಕುಟುಂಬದಿಂದ ನವರಾತ್ರಿ ಕೊಡುಗೆ

Pinterest LinkedIn Tumblr

ಮಂಗಳೂರು : ನವರಾತ್ರಿ ಸಂದರ್ಭ ನವವಿಧ ವಸ್ತ್ರ ವೈವಿಧ್ಯ , ಪೂಜೆಗಳಲ್ಲಿ ತೊಡಗಿಸಿಕೊಳ್ಳುವುದನ್ನು ಸಾಂಪ್ರದಾಯಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು ಇದು ಎಲ್ಲೆಡೆ ಕಂಡು ಬರುವಂತಹ
ಆದೇ ರೀತಿ ಕೆಲವರು ನವರಾತ್ರಿಯ ಸಡಗರಕ್ಕೆ ಮೆರುಗು ನೀಡಲು ವಿಧವಿಧ ದೇವಿ-ದುರ್ಗೆಯರ ವೇಷಭೂಷಣಗಳನ್ನು ಧರಿಸಿ ಸಂಭ್ರಮ ಪಡುವುದು ಕಂಡು ಬರುತ್ತದೆ.

ಇದಕ್ಕೆ ಪೂರಕವೆಂಬಂತೆ ಮಂಗಳೂರಿನ ಈ ಪುಟ್ಟ ಬಾಲೆಯು ನವದುರ್ಗೆಯ ವಿವಿಧ ರೂಪಗಳನ್ನು ಧರಿಸುವ ಮೂಲಕ ಹಲವರ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ. ನವದುರ್ಗೆಯರ ವೇಷಭೂಷಣಗಳನ್ನು ಧರಿಸಿ ದಸರಾ ಸಂಭ್ರಮ ಆಚರಿಸಿದ ಈಕೆಯ ಚಿತ್ರವನ್ನು ನಗರದ ಖ್ಯಾತ ಛಾಯಾಗ್ರಾಹಕ ಪುನೀತ್ ಶೆಟ್ಟಿ ತಮ್ಮ ಕ್ಯಾಮರ ಕಣ್ಣಿನಲ್ಲಿ ಸೆರೆ ಹಿಡಿದಿದ್ದಾರೆ.

ಈ ಬಾಲೆಯ ಹೆಸರು ವಿಷ್ಣುಪಿಯ. ಈಕೆ ಬಂಟ್ವಾಳದ ವರದರಾಯ ಪೈ ಹಾಗೂ ಸಂಧ್ಯಾ ಪೈ ದಂಪತಿಗಳ ಪುತ್ರಿ. ಈಕೆಗೆ ವಿಷ್ಣುಪಿಯ ಎನ್ನುವ ಹೆಸರು ಬರಲು ಕಾರಣ ಕನ್ನಡ ಚಿತ್ರರಂಗದ ಖ್ಯಾತ ನಟ ದಿ. ಸಾಹಸ ಸಿಂಹ ವಿಷ್ಣುವರ್ಧನ್ ಅವರು.

ಬಂಟ್ವಾಳದ ಯಜಮಾನ ಉಪ್ಪಿನಕಾಯಿ ಸಂಸ್ಥೆಯ ಮಾಲ್ಹಕರಾದ ಬಂಟ್ವಾಳದ ವರದರಾಯ ಪೈಯವರು ವಿಷ್ಣುವರ್ಧನ್ ಅವರ ಬಹುದೊಡ್ಡ ಅಭಿಮಾನಿ. ಹಾಗಾಗಿ ಯಜಮಾನ ಸಿನಿಮಾನ ಬಿಡುಗಡೆಗೊಂಡ ಬಳಿಕ ತಮ್ಮ ಸಂಸ್ಥೆಗೆ ಯಜಮಾನ ಎಂದೇ ಹೆಸರು ಇಟ್ಟಿದ್ದರು. ಮಾತ್ರವಲ್ಲದೇ ತಮ್ಮ ಸಂಸ್ಥೆಗೆ ವಿಷ್ಣುವರ್ಧನ್ ಅವರು ಬೇಟಿ ನೀಡುವಂತೆ ಮಾಡುವಲ್ಲಿಯೂ ಯಶಸ್ವಿಯಾಗಿದ್ದರು.

ಬಳಿಕ ಎರಡೂ ಕುಟುಂಬಗಳ ನಡುವೆ ಉತ್ತಮ ಬಾಂಧವ್ಯ ಬೆಳೆದಿದ್ದು, ಇದೇ ಬಾಂಧವ್ಯ ವರದರಾಯ ಪೈ ದಂಪತಿಗಳಿಗೆ ತಮ್ಮ ಮಗುವಿಗೆ ವಿಷ್ಣುಪ್ರಿಯ ಹೆಸರು ಇಡುವಲ್ಲಿ ಪ್ರೇರಣೆಯಾಯಿತು. ಮೊದಲಿಗೆ ತಿರುಪತಿ ದೇವರ ಸನ್ನಿಧಾನದಲ್ಲಿ ನಾಮಕರಣ ಮಾಡಲು ನಿರ್ದರಿಸಿದ್ದ ಕುಟುಂಬ ಬಳಿಕ ಶ್ರೀಮತಿ ಭಾರತೀ ವಿಷ್ಣುವರ್ಧನ್ ಅವರ ಆಶೀರ್ವಾದದೊಂದಿಗೆ ನಾಮಕರಣ ಮಾಡಲಾಯಿತು ಎನ್ನುತ್ತಾರೆ ವಿಷ್ಣುಪ್ರಿಯ ತಾಯಿ ಸಂಧ್ಯಾ ಪೈಯವರು.

ವರದರಾಯ ಪೈ ಹಾಗೂ ಸಂಧ್ಯಾ ಪೈ ದಂಪತಿಗಳಿಗೆ ಇಬ್ಬರು ಮಕ್ಕಳು. ಮೊದಲ ಮಗು ವಿಷ್ಣುಪಿಯಾ ಈಗ ನಾಲ್ಕನೇ ತರಗತಿ ವಿದ್ಯಾರ್ಥಿನಿ. ಎರಡನೇಯ ಮಗುವಿನ ಹೆಸರು ಬಾಲಾಜಿ, ಈತ ಎರಡನೇ ತರಗತಿ ವಿದ್ಯಾರ್ಥಿ.

ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಗುರುತಿಸಿಕೊಂಡಿರುವ ವಿಷ್ಣುಪ್ರಿಯಾ ಶಾಲೆಯಲ್ಲೂ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಭಾರೀ ಹೆಸರು ಮಾಡಿರುತ್ತಾಳೆ. ಮೂಡುಬಿದ್ರೆಯ ರೋಟರಿ ಇಂಗ್ಲಿಷ್ ಮೀಡಿಯಂ ಸೆಂಟ್ರಲ್ ಸ್ಕೂಲ್‌ನಲ್ಲಿ ನಾಲ್ಕನೇ ತರಗತಿ ವಿದ್ಯಾರ್ಥಿನಿಯಗಿರುವ ಈಕೆ ಕೊಯಂಬತ್ತೂರಿನಲ್ಲಿ ನಡೆದ ಸ್ಪಲ್ ಬಿ ‘ ಎನ್ನುವ ರಾಷ್ಟ್ರ ಮಟ್ಟದ ಮಕ್ಕಳ ಸ್ಪರ್ಧೆಯಲ್ಲಿ 47 ನೇ ರ್‍ಯಾಂಕ್ ಪಡೆದಿದ್ದಾಳೆ.

ವೆಂಕಟಕೃಷ್ಣ ಭಟ್ ಅವರ ಬಳಿ ಕರ್ನಾಟಕ ಸಂಗೀತ ಮತ್ತು ಬಾಲಕೃಷ್ಣ ಮಂಜೇಶ್ವರ ಅವರಿಂದ ಭರತನಾಟ್ಯವನ್ನು ಅಭ್ಯಾಸ ಮಾಡುತ್ತಿರುವ ವಿಷ್ಣುಪ್ರಿಯಾ ತಂದೆಯ ಬಳಿಯಲ್ಲೇ ಇಲೆಕ್ಕಿಲ್ ಆರ್ಗನ್ ಕಲಿಯುತ್ತಿದ್ದಾಳೆ.

ಇಂಥಹ ಬಹುಮುಖ ಪ್ರತಿಭೆಯನ್ನು ಇರಿಸಿಕೊಂಡು ನವದುರ್ಗೆಯರ ರೂಪ ನೀಡಿ ನೊಡುವ ಆಕಾಂಕ್ಷೆ ಮಾತಾಪಿತರಲ್ಲಿ ಮೂಡಿದೆ . ಶ್ರದ್ದಾ ಅಶ್ವಿನ್ ಪ್ರಭು ಅವರ ನಡೆಸಿದ ಮೇಲೋವರ್ ಗೆ ಸ್ಥಿರಚಿತ್ರ ರೂಪ ನೀಡಲು ಮಂಗಳೂರಿನ ಖ್ಯಾತ ಛಾಯಾಗ್ರಾಹಕ ಪುನೀತ್ ಶೆಟ್ಟಿ ಕೈ ಜೋಡಿಸಿದ್ದಾರೆ .

ಸಿನಿಮಾ ನಿರ್ದೇಶಕರು ಕೂಡ ಆಗಿರುವ ಪುನೀತ್ ಶೆಟ್ಟಿಯವರಿಗೆ ಮಕ್ಕಳನ್ನು ವಿವಿಧ ಭಂಗಿಗಳಲ್ಲಿ ಚಿತ್ರೀಕರಿಸುವ ಛಾಯಾಗ್ರಹಣದ ಕಲೆ ಸಿದ್ದಿಸಿದೆ . ಹಾಗಾಗಿ ಎರಡೇ ದಿನದಲ್ಲಿ ನವದುರ್ಗೆಯರ ರೂಪದ ಛಾಯಾಗ್ರಹಣ ಪೂರ್ತಿಯಾಗಿದೆ .

ಅಂದಹಾಗೆ ವಿಷ್ಣುಪ್ರಿಯ ಸದ್ಯಕ್ಕೆ ಶಾಲಾ ವಿದ್ಯಾರ್ಥಿನಿಯಾದರೂ ಬಾಲನಟಿಯಾಗಬಹುದಾದ ಎಲ್ಲ ಲಕ್ಷಣಗಳನ್ನು ಹೊಂದಿದ್ದಾಳೆ . ಕನ್ನಡ ಚಿತ್ರರಂಗದಲ್ಲಿ ಅಂತಹ ಒಂದು ಅವಕಾಶ ದೊರೆತರೆ ಅದು ವಿಷ್ಣುವರ್ಧನ್ ಅವರ ಆಶೀರ್ವಾದದ ಪಲ ಎಂದು ನಂಬುವ ಕುಟುಂಬ ಇವರದ್ದಾಗಿದೆ . ಎಲ್ಲಾ ಕಲಾ ಆರಾಧಕರ ಜೊತೆಗೆ , ದೇವಿಭಕ್ತರ , ವಿಷ್ಣುವರ್ಧನ್ ಅಭಿಮಾನಿಗಳ ಹಾರೈಕೆ ಈ ಕಂದನಿಗಿರಲಿ ಎಂಬ ಆಶಯ ನಮ್ಮದು.

Comments are closed.