ಕರ್ನಾಟಕ

ಅಂತರ್ ಜಾತಿಯ ಹುಡುಗನನ್ನು ಮದುವೆಯಾಗಿದ್ದಕ್ಕೆ ಸ್ವಂತ ಅಕ್ಕನನ್ನೇ ಹತ್ಯೆ ಮಾಡಿದ ತಮ್ಮ ! ಮರ್ಯಾದಾ ಹತ್ಯೆ ಪ್ರಕರಣ ಬೇಧಿಸಿದ ಪೊಲೀಸರು

Pinterest LinkedIn Tumblr

ಕೊಪ್ಪಳ: ಅಂತರ್ ಜಾತಿಯ ಹುಡುಗನನ್ನು ಮದುವೆಯಾಗಿದ್ದಕ್ಕೆ ಸಹೋದರನೇ ಅಕ್ಕನನ್ನು ಕೊಲೆ ಮಾಡಿದ್ದು, ಪ್ರಕರಣ ಇದೀಗ ಮರ್ಯಾದಾ ಹತ್ಯೆ ಎಂಬುದು ಬಹಿರಂಗವಾಗಿದೆ.

ಜಿಲ್ಲೆಯ ಕಾರಟಗಿ ನಗರದಲ್ಲಿ ದಂಪತಿ ಮೇಲೆ ರಾಡ್​ನಿಂದ ಹಲ್ಲೆ ಮಾಡಿ ಮಹಿಳೆ ಹತ್ಯೆ ಮಾಡಲಾಗಿತ್ತು. ಮೂಲತಃ ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ 31 ವರ್ಷದ ವಿನೋದ್ ತನಗಿಂತ ವಯಸ್ಸಿನಲ್ಲಿ ಸೀನಿಯರ್ ಆಗಿದ್ದ 34 ವರ್ಷದ ತ್ರಿವೇಣಿಯನ್ನು 7 ತಿಂಗಳ ಹಿಂದೆ ಮದುವೆಯಾಗಿದ್ದ. ಅಂತರ್ ಜಾತಿ ಎಂಬ ಕಾರಣಕ್ಕೆ ಮದುವೆಗೆ ವಿರೋಧಿಸಿದ್ದ ಮೃತ ತ್ರಿವೇಣಿಯ ಸಹೋದರನೇ ಹತ್ಯೆ ಮಾಡಿದ್ದಾನೆ. ಕೃತ್ಯ ನಡೆದ ಕೆಲವೇ ಗಂಟೆಯಲ್ಲಿ ಪ್ರಕರಣದ ಪ್ರಮುಖ ಆರೋಪಿಯನ್ನು ವಶಕ್ಕೆ ಪಡೆಯುವಲ್ಲಿ ಕೊಪ್ಪಳ ಎಸ್ಪಿ ಟಿ.ಶ್ರೀಧರ ನೇತೃತ್ವದ ಪೊಲೀಸ್ ತಂಡ ಯಶಸ್ವಿಯಾಗಿದ್ದು, ಮೃತಳ ತಮ್ಮನೇ ಕೃತ್ಯದ ರೂವಾರಿ ಎಂದು ಪೊಲೀಸ್ ಮೂಲಗಳು ದೃಢಪಡಿಸಿವೆ.

ಘಟನೆಯಲ್ಲಿ ಸೋದರಿ ತ್ರಿವೇಣಿ ಸ್ಥಳದಲ್ಲಿ ಸಾವನ್ನಪ್ಪಿದ್ದು, ಗಂಭೀರವಾಗಿ ಗಾಯಗೊಂಡಿರುವ ತ್ರಿವೇಣಿ ಪತಿ ವಿನೋದ್ ಬಳ್ಳಾರಿಯ ವಿಮ್ಸ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಅವಿನಾಶ್ ಸೋದರಿಯನ್ನ ಕೊಲೆಗೈದ ಕ್ರೂರಿ ತಮ್ಮ. ಮುಧೋಳ ತಾಲೂಕಿನ ನಿವಾಸಿಗಳಾಗಿದ್ದ ವಿನೋದ್ (30) ಮತ್ತು ತ್ರಿವೇಣಿ (35) ಒಂದೇ ಕಾಲೇಜಿನಲ್ಲಿ ಓದುತ್ತಿದ್ದರು. ಐದು ವರ್ಷ ಸೀನಿಯರ್ ಆಗಿದ್ದ ತ್ರಿವೇಣಿ ತಮ್ಮ ಜೂನಿಯರ್ ವಿನೋದ್ ಅವರನ್ನ ಪ್ರೀತಿಸುತ್ತಿದ್ದರು. ಇಬ್ಬರ ಪ್ರೀತಿಗೆ ವಯಸ್ಸು ಅಡ್ಡಿಯಾಗಿರಲಿಲ್ಲ. ಆದ್ರೆ ಮದುವೆ ಎರಡೂ ಕುಟುಂಬಗಳು ವಿರೋಧ ವ್ಯಕ್ತಪಡಿಸಿದ್ದವು. ಇದರಿಂದ ಆರು ತಿಂಗಳ ಹಿಂದೆ ವಿನೋದ್ ಮತ್ತು ತ್ರಿವೇಣಿ ಗಂಗಾವತಿಯಲ್ಲಿ ರಿಜಿಸ್ಟರ್ ಮದುವೆ ಆಗಿದ್ದರು.

ಮದುವೆ ಬಳಿಕ ತ್ರಿವೇಣಿ ವಾಟ್ಸಪ್ ಸೇರಿದಂತೆ ಸೋಶಿಯಲ್ ಮೀಡಿಯಾದಲ್ಲಿ ಪತಿ ಜೊತೆಗಿನ ಫೋಟೋಗಳನ್ನು ಹಂಚಿಕೊಂಡಿದ್ದರು. ಗ್ರಾಮದಲ್ಲಿ ತ್ರಿವೇಣಿ ಮದುವೆ ಫೋಟೋ ನೋಡಿದ್ದ ಜನರು ಮಾತನಾಡಕೊಳ್ಳಲಾರಂಭಿಸಿದ್ದರು. ಇದರಿಂದ ಅವಮಾನಿತನಾದ ಅವಿನಾಶ್, ಅಕ್ಕ ಮತ್ತು ಮಾವನ ಕೊಲೆಗೆ ನಿರ್ಧರಿಸಿ, ಎರಡು ದಿನಗಳ ಹಿಂದೆ ಸ್ನೇಹಿತರ ಜೊತೆ ಕಾರಟಗಿ ಬಂದಿದ್ದನು. ಎರಡು ದಿನ ಅಕ್ಕನ ಚಲನವಲನ ಗಮನಿಸಿ ಶನಿವಾರ ದಾಳಿ ನಡೆಸಿ ಕೊಲೆಗೈದಿದ್ದಾನೆ.

ಸದ್ಯ ಪೊಲೀಸರು ಆರೋಪಿ ಅವಿನಾಶ್ ನನ್ನು ಬಂಧಿಸಿ, ಇನ್ನಿಬ್ಬರು ಪರಾರಿಯಾಗಿದ್ದಾರೆ. ತಮ್ಮನೇ ಅಕ್ಕನನ್ನು ಕೊಲೆ ಮಾಡಿದ್ದರಿಂದ ತ್ರಿವೇಣಿ ಶವವನ್ನ ವಶಕ್ಕೆ ಪಡೆಯಲು ಯಾರು ಮುಂದಾಗಿಲ್ಲ.

ಇಬ್ಬರು ಬ್ಯಾಂಕ್ ಉದ್ಯೋಗಿಗಳಾಗಿದ್ದು, ಕಾರಟಗಿಯಲ್ಲಿ ವಾಸವಾಗಿದ್ದರು. ವಿನೋದ್ ಕಾರಟಗಿಯ ಐಡಿಎಫ್‍ಸಿ ಬ್ಯಾಂಕ್ ಮ್ಯಾನೇಜರ್ ಆಗಿದ್ದು, ತ್ರಿವೇಣಿ ಬಳ್ಳಾರಿ ಸಿರಗುಪ್ಪದ ಬಿರೇಶ್ವರ ಪತ್ತಿನ ಬ್ಯಾಂಕ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಶನಿವಾರ ಸಂಜೆ ತಮ್ಮ ಕೆಲಸ ಮುಗಿಸಿಕೊಂಡು ದಂಪತಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ಬೈಕಿನಲ್ಲಿ ಬಂದ ಮೂವರು ರಾಡ್ ನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು. ಹಲ್ಲೆಯ ಪರಿಣಾಮ ತ್ರೀವೇಣಿ ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ. ಗಾಯಾಳು ವಿನೋದ್ ಅವರನ್ನ ಹೆಚ್ಚಿನ ಚಿಕಿತ್ಸೆಗಾಗಿ ಗಂಗಾವತಿಯಿಂದ ಬಳ್ಳಾರಿಗೆ ರವಾನಿಸಲಾಗಿದೆ.

Comments are closed.