
ಮಂಗಳೂರು ಅಕ್ಟೋಬರ್ 19: ಚಂಡ ಮಾರುತಗಳಿಂದಾಗುವ ಅನಾಹುತಗಳನ್ನುತಪ್ಪಿಸಲು ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಕ್ರಿಯಾ ಯೋಜನೆಗಳು ರೂಪಿಸಿದಲ್ಲಿ ಶೀಘ್ರವಾಗಿ ರಕ್ಷಣಾ ಕಾರ್ಯಗಳನ್ನು ಕೈಗೊಳ್ಳಲು ಅನುಕೂಲವಾಗಲಿದೆಎಂದು ಹಸ್ಕೋಇಂಗ್ನಹರ್ಬನ್ ಪ್ಲಾನಿಂಗ್ಎಕ್ಸಪರ್ಟ್ಡಾ|| ರಮೇಶ್ ಹೆಚ್ ನಿಕಿಲ್ದೇಶಪಾಂಡೆ ತಿಳಿಸಿದರು.
ಅವರು ನಗರದ ಮಹಾನಗರಪಾಲಿಕೆಯ ಮಂಗಳಾ ಸಭಾಂಗಣದಲ್ಲಿ ನಡೆದ ನ್ಯಾಶನಲ್ ಸೈಕ್ಲೋನ್ ರಿಸರ್ಚ್ ಮಿಡಿಗೇಷನ್ ಪ್ರಾಜೆಕ್ಟ್-2 ವತಿಯಿಂದ ಆಯೋಜಿಸಿದ ಹೈಡ್ರೊ ಮೆಟಿರಿಯೊಲೋಜಿಕಲ್ರಿಸೈಲಿನ್ಸ್ಆಕ್ಷನ್ ಪ್ಲಾನ್ಸ್ತಯಾರಿಸುವಕುರಿತುಕಾರ್ಯಾಗಾರದಲ್ಲಿ ಮಾತನಾಡಿದರು.
ಚಂಡಮಾರುತದಿಂದ ಆಗುವ ಹೆಚ್ಚಿನ ಅನಾಹುತಗಳನ್ನು ತಪ್ಪಿಸುವುದುಹಾಗೂ ಶೀಘ್ರವಾಗಿ ಸ್ಪಂದಿಸಿ ಜನರನ್ನು ಸುರಕ್ಷತಾ ಸ್ಥಳಗಳಿಗೆ ಸ್ಥಳಾಂತರಿಸಿ ಅವರಿಗೆತಾತ್ಕಾಲಿಕ ಪುನರ್ ವಸತಿಕಲ್ಪಿಸುವುದು ಸೇರಿದಂತೆ ಸಾವು ನೋವುಗಳನ್ನು ತಪ್ಪಿಸಲು ಸರಕಾರದ ಹೈಡ್ರೊಮೆಟಿರಿಯೊಲೋಜಿಕಲ್ರಿಸೈಲಿನ್ಸ್ ಕ್ರಿಯಾಯೋಜನೆ ನಿರ್ದಿಷ್ಟ ನಗರ ಪ್ರದೇಶದ ಸಂದರ್ಭಕ್ಕೆಅನುಗುಣವಾಗಿ ನಿರ್ದಿಷ್ಟವಾದ ಸಮಸ್ಯೆಗಳು ಮತ್ತು ಆದ್ಯತೆಗಳನ್ನು ಗುರುತಿಸುತ್ತದೆಎಂದರು.
ನ್ಯಾಶನಲ್ ಸೈಕ್ಲೋನ್ ಮಿಡಿಗೇಷನ್ ಪ್ರಾಜೆಕ್ಟ್-2 ನಲ್ಲಿಕರ್ನಾಟಕ ಸೇರಿದಂತೆಆರು ರಾಜ್ಯಗಳಲ್ಲಿ ರಾಷ್ಟ್ರೀಯಚಂಡಮಾರುತಅಪಾಯತಗ್ಗಿಸುವಯೋಜನೆಯು ಈಗಾಗಲೇ ರೂಪಗೊಂಡಿದೆ.ಮಂಗಳೂರು ಸೇರಿದಂತೆ ಪ್ರತಿರಾಜ್ಯದಒಂದು ನಗರದ ಸ್ಥಿತಿಸ್ಥಾಪಕತ್ವವನ್ನು ಸುಧಾರಿಸಲು ಮತ್ತು ಉಳಿಸಿಕೊಳ್ಳಲು ಜಲ-ಹವಾಮಾನ ಸ್ಥಿತಿಸ್ಥಾಪಕ ಕ್ರಿಯಾ ಯೋಜನೆಗಳನ್ನು ಅಭಿವೃದ್ಧಿ ಪಡೆಸಲಾಗುವುದುಎಂದರು.
ಕ್ರಿಯಾ ಯೋಜನೆಗಳನ್ನು ರೂಪಿಸುವುದರಿಂದರಕ್ಷಣಾ ಕಾರ್ಯಗಳನ್ನು ಕೈಗೊಳ್ಳುವಾಗ ಯಾವುದೇ ರೀತಿಯ ಗೊಂದವಿಲ್ಲದೆತತಕ್ಷಣದಲ್ಲಿಯೇ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆನಗರದ ಸ್ಥಿತಿಸ್ಥಾಪಕತ್ವವನ್ನು ಸುಧಾರಿಸಲು ಮತ್ತು ಹೈಡ್ರೋಮೆಟ್ ಸಂಬಂಧಿತ ಅಪಾಯಗಳನ್ನು ಕಡಿಮೆ ಮಾಡಲು ಮಾರ್ಗದರ್ಶನ ನೀಡುವಲ್ಲಿಸಹಕಾರಿಯಾಗಿದೆಎಂದರು.
ಈ ಯೋಜನೆಯನ್ನುರಾಯಲ್ ಹಸ್ಕೋಇಂಗ್ಡಿ ಹೆಚ್ ವಿ ಹಾಗೂ ತರು ಲೀಂಡಿಗ್ಎಡ್ಜ್ ಸಂಸ್ಥೆವತಿಯಿಂದ ಮಾಡಲಾಗುತ್ತಿದೆ.ಇದೊಂದುಉತ್ತಮಕಾರ್ಯವಾಗಿದ್ದುಎಲ್ಲಾಇಲಾಖೆಯ ಅಧಿಕಾರಿಗಳು ಹಾಗೂ ಸಾರ್ವಜನಿಕರು ಸಹಕಾರ ನೀಡಿ ಕೈ ಜೋಡಿಸಬೇಕೆಂದರು.
ಕಾರ್ಯಾಗಾರದಲ್ಲಿ ಮಂಗಳೂರು ಮಹಾನಗರಪಾಲಿಕೆಆಯುಕ್ತಅಕ್ಷಯ್ ಶ್ರೀಧರ್ ಪಾಲಿಕೆ ಉಪಾಯುಕ್ತ ಸಂತೋಷಕುಮಾರ್, ವಿವಿಧಇಲಾಖೆಯ ಅಧಿಕಾರಿಗಳು ಮತ್ತಿತರು ಉಪಸ್ಥಿತರಿದ್ದರು.
Comments are closed.