ಇತ್ತೀಚೆಗೆ ಯಾರ ಬಳಿ ಮೊಬೈಲ್ ಇಲ್ಲ ಹೇಳಿ ಅದರಲ್ಲೂ ಎಲ್ಲರ ಬಳಿ ಇರುವುದು ಸ್ಮಾರ್ಟ್ ಫೋನ್ ಇದೊಂದು ಕೈಯಲ್ಲಿ ಇದ್ದು ಬಿಟ್ಟರೆ ಸಾಕು ತಮ್ಮನ್ನೇ ತಾವು ಮರೆತು ಬಿಡುತ್ತಾರೆ ಅಷ್ಟರ ಮಟ್ಟಿಗೆ ಪೋನ್ ಮತ್ತು ಮನುಷ್ಯನ ಸಂಭಂದ ಅಂಟಿಕೊಂಡಿದೆ. ಒಂದು ಒತ್ತಿನ ಊಟವನ್ನು ಬಿಟ್ಟರು ಕೂಡ ಫೋನ್ ಅನ್ನು ಮಾತ್ರ ಬಿಡುವುದಿಲ್ಲ ಬೆಳಿಗ್ಗೆ ಇಂದ ರಾತ್ರಿ ಮಲಗುವ ತನಕ ಕೂಡ ಕೈಯಲ್ಲಿ ಮೊಬೈಲ್ ಕಿವಿಯಲ್ಲಿ ಇಯರ್ ಫೋನ್ ಇದ್ದೆ ಇರುತ್ತದೆ. ಸ್ಮಾರ್ಟ್ ಫೋನ್ ಅಲ್ಲಿ ಸಮಯಕ್ಕೆ ಸರಿಯಾಗಿ ವಾಟ್ಸ್ ಆಪ್. ಫೇಸ್ ಬುಕ್ ನಲ್ಲಿ ಗುಡ್ ಮಾರ್ನಿಂಗ್ ಗುಡ್ ನೈಟ್ ಫಾರ್ವರ್ಡ್ ಮೆಸೇಜ್ಗಳು ಸ್ಟೇಟಸ್ ಗಳು ಮಾತ್ರ ಯಾವುದೇ ಕಾರಣಕ್ಕೂ ಕೂಡ ಮಿಸ್ ಆಗುವುದಿಲ್ಲ.
ಇತ್ತೀಚೆಗೆ ನಿಮ್ ಬೆಸ್ಟ್ ಫ್ರೆಂಡ್ ಯಾರು ಎಂದರೆ ಎಲ್ಲರೂ ಹೇಳುವುದು ಫೋನ್ ಎಂದು ಫೋನ್ ಅನ್ನು ಬಳಕೆ ಮಾಡುವಾಗ ಕೆಲವೊಮ್ಮೆ ಫೋನ್ ನ ಸ್ಪೀಡ್ ಕಡಿಮೆ ಆಗುತ್ತದೆ ಅದು ವರ್ಕ್ ಆಗುತ್ತಿರುವುದನ್ನು ನೋಡಿ ಫೋನ್ ಅನ್ನೇ ಎಸೆದುಬಿಡುವಸ್ಟು ಕೋಪ ಬರುತ್ತದೆ. ಹಾಗಾದರೆ ಈ ರೀತಿ ಮೊಬೈಲ್ ಸ್ಪೀಡ್ ಕಡಿಮೆ ಆದಾಗ ಏನು ಮಾಡಬೇಕು ಎಂದು ತಿಳಿದುಕೊಳ್ಳೋಣ ಬನ್ನಿ. ಸ್ಮಾರ್ಟ್‌ಫೋನ್ ಬಳಸುವ ಅಭ್ಯಾಸ ಹಾಗೂ ಬ್ರೌಸಿಂಗ್ ಮಾಡುವ ಮಾರ್ಗದಲ್ಲಿ ಒಂದಷ್ಟು ಶಿಸ್ತನ್ನು ರೂಢಿಸಿಕೊಂಡರೆ ನಮ್ಮ ಇಂಟರ್ನೆಟ್ ವೇಗವನ್ನು ಹೆಚ್ಚಿಸಿಕೊಳ್ಳಬಹುದು
4ಜಿ ಇಂಟರ್ನೆಟ್ ಕನೆಕ್ಷನ್ ಇದ್ದರೂ ಕೂಡ ಸ್ಮಾರ್ಟ್‌ಫೋನ್‌ನ ಬ್ರೌಸಿಂಗ್ ವೇಗ ಮಾತ್ರ 2ಜಿಗಿಂತಲು ಕಡಿಮೆ ಇರುತ್ತದೆ ಎಂಬುದು ಹಲವಾರು ಹೇಳುವ ದೂರುಗಳು ಅದಕ್ಕಾಗಿ ಎಷ್ಟೇ ದುಬಾರಿ ಸ್ಮಾರ್ಟ್‌ಫೋನ್ ತೆಗೆದುಕೊಂಡರು ಇಂಟರ್ನೆಟ್‌ನ ವೇಗವು ಸ್ಥಳ ಮತ್ತು ಕಾಲಕ್ಕೆ ತಕ್ಕಂತೆ ಬದಲಾಗುತ್ತಿರುತ್ತದೆ ಅಲ್ಲವೇ. ಸ್ಮಾರ್ಟ್‌ಫೋನ್ ಬಳಸುವ ನಿಮ್ಮ ಅಭ್ಯಾಸ ಹಾಗೂ ಬ್ರೌಸಿಂಗ್ ಮಾಡುವ ಮಾರ್ಗದಲ್ಲಿ ಒಂದಷ್ಟು ಶಿಸ್ತು ರೂಢಿಸಿಕೊಂಡರೆ ನಿಮ್ಮ ಇಂಟರ್ನೆಟ್ ವೇಗ ಹೆಚ್ಚಿಸಬಹುದು.
ಹಾಗಾದರೆ ನಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಬ್ರೌಸಿಂಗ್ ವೇಗವನ್ನು ಹೆಚ್ಚಿಸಿಕೊಳ್ಳಲು ಕೆಲವು ಸುಲಭ ಸಲಹೆಗಳನ್ನು ನೋಡೋಣ ಬನ್ನಿ.ಬ್ರೌಸಿಂಗ್ ವೇಗವು ನಾವು ಯಾವ ಬ್ರೌಸರ್ ಅನ್ನು ಬಳಸುತ್ತಿದ್ದೀವೇ ಎಂಬುದನ್ನೂ ಅವಲಂಬಿಸಿರುತ್ತದೆ ಹೇಗೆಂದರೆ ಈಗ ಹಲವಾರು ಸ್ಮಾರ್ಟ್‌ಫೋನ್‌ಗಳಲ್ಲಿ ಗೂಗಲ್ ಕ್ರೋಮ್ ಬ್ರೌಸರ್ ಬಳಸುವುದು ಸಾಮಾನ್ಯ, ಗೂಗಲ್ ಕ್ರೋಮ್ ಉತ್ತಮ ಬ್ರೌಸರ್ ಆದರೂ ಕೂಡ ಅದರ ಮೂಲಕ ಬ್ರೌಸ್ ಮಾಡುವಾಗ ಬ್ರೌಸಿಂಗ್ ವೇಗ ಕಡಿಮೆ ಆಗುತ್ತದೆ.
ಇದಕ್ಕೆ ಕಾರಣ ಏನೆಂದರೆ ಬ್ರೌಸಿಂಗ್ ವೇಳೆ ಬಳಸುವ ಪಾಸ್‌ವರ್ಡ್, ಬುಕ್‌ಮಾರ್ಕ್ ಹಾಗೂ ಹಿಸ್ಟರಿಯನ್ನು ಕ್ರೋಮ್ ನೆನಪಿಟ್ಟುಕೊಳ್ಳುವುದು, ಕ್ರೋಮ್‌ನ ಈ ಸ್ಮರಣಗುಣದ ಕಾರಣದಿಂದ ನಾವು ಹಿಸ್ಟರಿ ಕ್ಲಿಯರ್ ಮಾಡದೆ ಬ್ರೌಸಿಂಗ್ ಮಾಡಿದರೆ ವೇಗ ಹೆಚ್ಚಾಗುವುದು ಹೀಗಾಗಿ ಪ್ರತಿ ಬಾರಿ ಬ್ರೌಸ್ ಮಾಡುವ ಮುನ್ನ ಬ್ರೌಸಿಂಗ್ ಡೇಟಾ ಕ್ಲಿಯರ್ ಮಾಡಬೇಕು. ನಮ್ಮ ಸ್ಮಾರ್ಟ್‌ಫೋನ್‌ನ ಇತರೆ ಆ್ಯಪ್‌ಗಳ ಕ್ಯಾಚ್ ಕ್ಲಿಯರ್ ಮಾಡದೇ ಇರುವುದು ಕೂಡ ಬ್ರೌಸಿಂಗ್ ವೇಗ ಕಡಿಮೆ ಆಗಲು ಕಾರಣವಾಗುತ್ತದೆ. ಹೀಗಾಗಿ ಆ್ಯಪ್ ಗಳನ್ನು ಕ್ಯಾಚ್ ಕ್ಲಿಯರ್ ಮಾಡಬೇಕು.
ಇದಕ್ಕೆ ಏನು ಮಾಡಬೇಕು ಎಂದರೆ ಮೊಬೈಲ್‌ನ ಸೆಟ್ಟಿಂಗ್ಸ್‌ಗೆ ಹೋಗಿ ಆ್ಯಪ್ ಮೇಲೆ ಕ್ಲಿಕ್ ಮಾಡಬೇಕು ನಂತರ ನಾವು ಯಾವ ಆ್ಯಪ್‌ನ ಕ್ಯಾಚ್ ಕ್ಲಿಯರ್ ಮಾಡಬೇಕೋ ಅದರ ಮೇಲೆ ಕ್ಲಿಕ್ ಮಾಡಿ, ನಂತರ ಸ್ಟೋರೇಜ್ ಮೇಲ್ ಕ್ಲಿಕ್ಕಿಸಬೇಕು, ಅಲ್ಲಿ ಕಾಣುವ ಕ್ಲಿಯರ್ ಕ್ಯಾಚ್ ಮೇಲೆ ಕ್ಲಿಕ್ ಮಾಡಿದರೆ ಆ ಆ್ಯಪ್‌ನ ಕ್ಯಾಚ್ ಕ್ಲಿಯರ್ ಆಗುತ್ತದೆ, ಇದಲ್ಲದೆ ಫೋನ್‌ನ ಸೆಟ್ಟಿಂಗ್‌ನಲ್ಲಿ ಸ್ಟೋರೇಜ್‌ಗೆ ಹೋಗಿ ಅಲ್ಲಿ ಕ್ಯಾಚ್ ಕ್ಲಿಯರ್ ಆಯ್ಕೆ ಮಾಡಿದರೆ ಸ್ಮಾರ್ಟ್‌ಫೋನ್‌ನ ಎಲ್ಲಾ ಕ್ಯಾಚ್ ಕ್ಲಿಯರ್ ಆಗುತ್ತದೆ. ಹೀಗೆ ಮಾಡಿದರೆ ಸ್ಮಾರ್ಟ್ ಫೋನ್ ಸ್ಪೀಡ್ ಹೆಚ್ಚಾಗುತ್ತದೆ ಹಾಗೂ ಮೊಬೈಲ್ ಕೂಡ ಹೆಚ್ಚು ದಿನ ಬಳಕೆ ಆಗುತ್ತದೆ.
Comments are closed.