ಕರಾವಳಿ

ಮಾಸ್ಕ್ ಇಲ್ಲದೆ ಬಸ್ ಹತ್ತಿದ ಪ್ರಯಾಣಿಕರಿಬ್ಬರಿಗೆ ಕ್ಲಾಸ್ ತೆಗೆದುಕೊಂಡ ಕಂಡಕ್ಟರ್..! (Video)

Pinterest LinkedIn Tumblr

ಕುಂದಾಪುರ: ಕುಂದಾಪುರದಿಂದ ಉಡುಪಿಗೆ ಸಾಗುವ ಖಾಸಗಿ ಬಸ್ಸೊಂದಕ್ಕೆ ಮಾಸ್ಕ್ ಧರಿಸದೇ ಹತ್ತಿದ ಇಬ್ಬರು‌ ಪ್ರಯಾಣಿಕರಿಗೆ ಬಸ್ ಕಂಡಕ್ಟರ್ ಸಖತ್ ಕ್ಲಾಸ್ ತೆಗೆದುಕೊಂಡು ಕೆಳಗಿಳಿಸಿದ ಘಟನೆ ನಡೆದಿದ್ದು ಸದ್ಯ ಆ ವಿಡಿಯೋ ವೈರಲ್ ಆಗಿದೆ.

ಕುಂದಾಪುರದಲ್ಲಿ ಮಂಗಳವಾರ ರಾತ್ರಿ ಈ ಘಟನೆ ನಡೆದಿದೆ ಎನ್ನಲಾಗುತ್ತಿದ್ದು ಕುಂದಾಪುರದಿಂದ ಉಡುಪಿಗೆ ತೆರಳುವ ಬಸ್ಸಿಗೆ ಇಬ್ಬರು ಪ್ರಯಾಣಿಕರು ಹತ್ತಿದ್ದಾರೆ. ಆದರೆ ಇಬ್ಬರು ಮಾಸ್ಕ್ ಧರಿಸದ ಕಾರಣ ಬಸ್ ನಿರ್ವಾಹಕ ಆಕ್ಷೇಪಿಸಿದ್ದಾನೆ. ಆದರೆ ಇಬ್ಬರು ಪ್ರಯಾಣಿಕರು ಕಂಡಕ್ಟರ್ ಜೊತೆ ವಾಗ್ವಾದಕ್ಕಿಳಿದಿದ್ದಾರೆ.ಆದರೆ ಕಂಡಕ್ಟರ್ ಸಹಕಾರಕ್ಕೆ ಬಂದ ಸಹ ಪ್ರಯಾಣಿಕರು ಮಾಸ್ಕ್ ಧರಿಸದ ಪ್ರಯಾಣಿಕರಿಗೆ ಚೆನ್ನಾಗಿಯೇ ಕ್ಲಾಸ್ ತೆಗೆದುಕೊಂಡು ಬಸ್ಸಿನಿಂದ ಕೆಳಗಿಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸದ್ಯ ಈ ವಿಡಿಯೋ ಬಾರೀ ವೈರಲ್ ಆಗಿದ್ದು ಕಂಡಕ್ಟರ್ ಹಾಗೂ ಸಹ‌ ಪ್ರಯಾಣಿಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

(ವರದಿ- ಯೋಗೀಶ್ ಕುಂಭಾಸಿ)

Comments are closed.