ಕರಾವಳಿ

ಬೈಂದೂರಿನಲ್ಲಿ ಎಸೆಸೆಲ್ಸಿ ಪರೀಕ್ಷೆ ಬರೆದ ವಿದ್ಯಾರ್ಥಿನಿಗೆ ಕೊರೋನಾ ಸೋಂಕು ದೃಢ

Pinterest LinkedIn Tumblr

ಉಡುಪಿ: ಜಿಲ್ಲೆಯಲ್ಲಿ ಎಸೆಸೆಲ್ಸಿ ಪರೀಕ್ಷೆ ಬರೆಯುತ್ತಿರುವ ಮೂರನೇ ವಿದ್ಯಾರ್ಥಿನಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ನಿನ್ನೆ ಸಂಜೆ ಉಪ್ಪುಂದದ ಎಸೆಸೆಲ್ಸಿ ವಿದ್ಯಾರ್ಥಿನಿಯೋರ್ವರಿಗೆ ಕೊರೊನಾ ದೃಢ ಪಟ್ಟಿದೆ ಎನ್ನಲಾಗಿದೆ.

ಬೈಂದೂರಿನ ಎಸೆಸೆಲ್ಸಿ ಪರೀಕ್ಷಾ ಕೇಂದ್ರದಲ್ಲಿ ಶನಿವಾರದ ತನಕ ಎರಡು ಪರೀಕ್ಷೆಗಳನ್ನು ಬರೆದಿರುವ ವಿದ್ಯಾರ್ಥಿನಿಗೆ ಶನಿವಾರ ಸಂಜೆ ಬೆನ್ನುನೋವು ಕಾಣಿಸಿಕೊಂಡಿತ್ತು. ಸೋಮವಾರ ಪರೀಕ್ಷೆ ಇದ್ದ ಕಾರಣ ಪ್ರಾಂಶುಪಾಲರಿಗೆ ಈ ವಿಚಾರ ತಿಳಿಸಿದ್ದರು. ಸೋಮವಾರ ಪರೀಕ್ಷೆಗೆ ಈ ವಿದ್ಯಾರ್ಥಿನಿ ಹಾಜರಾಗಿರಲಿಲ್ಲ. ಸೋಮವಾರ ಆಕೆಯ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಮಂಗಳವಾರ ಸಂಜೆ ವರದಿ ಬಂದಿದ್ದು ಪಾಸಿಟಿವ್ ದೃಢ ಪಟ್ಟಿದೆ.

ಈ ವಿದ್ಯಾರ್ಥಿನಿಗೆ ಹೇಗೆ ಕೊರೋನಾ ಬಂತು ಎನ್ನುವುದು ನಿಗೂಢವಾಗಿದೆ. ಆದರೆ ಕೆಲವು ದಿನಗಳ ಹಿಂದೆ ಇವರ ಮನೆಯ ಆಸುಪಾಸಿನಲ್ಲಿ ಮಹಾರಾಷ್ಟ್ರದಿಂದ ಬಂದವರಿದ್ದರು ಎನ್ನಲಾಗಿದೆ.

Comments are closed.