ಕರಾವಳಿ

ಬಾನಂಗಳದಲ್ಲಿ ನೆರಳು-ಬೆಳಕಿನಾಟ : ಲಕ್ಷಾಂತರ ಮಂದಿಯಿಂದ ರಾಹುಗ್ರಸ್ತ ಚೂಡಾಮಣಿ ಸೂರ್ಯಗ್ರಹಣ ವೀಕ್ಷಣೆ

Pinterest LinkedIn Tumblr

ಮಂಗಳೂರು, ಜೂನ್.21: ಇಂದು ಕರ್ನಾಟಕ ಸೇರಿದಂತೆ ದೇಶಾದ್ಯಂತ ಈ ವರ್ಷದ ಅತಿದೊಡ್ಡ ರಾಹುಗ್ರಸ್ತ ಚೂಡಾಮಣಿ ಸೂರ್ಯಗ್ರಹಣ ಗೋಚರವಾಗಿದೆ.

18 ವರ್ಷಗಳ ಬಳಿಕ ಬಾನಂಗಳದಲ್ಲಿ ಕಂಡು ಬಂದ ನೆರಳು-ಬೆಳಕಿನಾಟ ಕಂಕಣ ಸೂರ್ಯಗ್ರಹಣದ ಚೂಡಾಮಣಿ ಚಮತ್ಕಾರವನ್ನು ಲಕ್ಷಾಂತರ ಮಂದಿ ಕಣ್ತುಂಬಿಕೊಂಡರು. ರಾಜ್ಯದಲ್ಲೂ ಹಲವೆಡೆಗಳಲ್ಲಿ ಸೂರ್ಯಗ್ರಹಣ ಗೋಚರಿಸಿದ್ದು, ಈ ವರ್ಷದ ಮೊದಲ ಸೂರ್ಯಗ್ರಹಣದ ಚಮತ್ಕಾರ ಕಂಡು ಜನರು ಬೆರಗಾಗಿದ್ದಾರೆ.

ಮೋಡ ಮುಸುಕಿದ ಹಾಗೂ ಮಳೆಯ ವಾತಾವರಣದಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಂಕಣ ಸೂರ್ಯ ಗ್ರಹಣ ಕೌತುಕ ವೀಕ್ಷಣೆಗೆ ಸ್ವಲ್ಪ ಮಟ್ಟಿನ ಅಡ್ಡಿಯಾತ್ತು. ಭಾನುವಾರ ಬೆಳಗ್ಗೆ 10 ಗಂಟೆ 5 ನಿಮಿಷಕ್ಕೆ ಆರಂಭಗೊಂಡ ಈ ಖಂಡಗ್ರಾಸ ಗ್ರಹಣ ಮಧ್ಯಾಹ್ನ 1.31ರವರೆಗೆ ಗೋಚರಿಸಿದೆ.

ಈ ವರ್ಷದ ಮೊದಲ ಸೂರ್ಯಗ್ರಹಣ ಇದಾಗಿದೆ. ಉತ್ತರ ಭಾರತದ ಹಲವೆಡೆ ಕಂಕಣ ದರ್ಶನವಾಗಿದೆ. ಕರ್ನಾಟಕದಲ್ಲಿ ಪಾರ್ಶ್ವ ಸೂರ್ಯಗ್ರಹಣ ದರ್ಶನವಾಗಿದ್ದು, ಬೆಂಗಳೂರು, ಹಾಸನ, ಮಂಡ್ಯ, ಮಡಿಕೇರಿ, ಶಿವಮೊಗ್ಗ, ಕೋಲಾರ, ರಾಯಚೂರು, ಹಾವೇರಿ, ಚಿತ್ರದುರ್ಗ, ಹುಬ್ಬಳಿ ಸೇರಿದಂತೆ ಹಲವೆಡೆ ಸೂರ್ಯಗ್ರಹಣ ಗೋಚರವಾದರೆ, ತುಮಕೂರು, ಚಿತ್ರದುರ್ಗ, ಮಂಗಳೂರು, ಕಲಬುರ್ಗಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸೂರ್ಯಗ್ರಹಣ ವೀಕ್ಷಣೆಗೆ ಮೋಡ ಅಡ್ಡಿಯಾಗಿದೆ.

ಸೂರ್ಯಗ್ರಹಣ ಹಿನ್ನೆಲೆಯಲ್ಲಿ ನಗರದ ಬಹುತೇಕ ರಸ್ತೆಗಳು ಖಾಲಿ ಖಾಲಿಯಾಗಿದ್ದವು. ಗ್ರಹಣದ ಭೀತಿಯಿಂದ ಜನರು ಮನೆಯಿಂದ ಹೊರಬಾರದ ಹಿನ್ನೆಲೆಯಲ್ಲಿ ರಸ್ತೆಗಳು ಬಿಕೋ ಎನ್ನುತ್ತಿತ್ತು. ಸೂರ್ಯಗ್ರಹಣ ಹಿನ್ನೆಲೆಯಲ್ಲಿ ಬಹುತೇಕ ಎಲ್ಲಾ ದೇವಾಲಯಗಳ ಬಾಗಿಲು ಮುಚ್ಚಿದ್ದವು. ಗ್ರಹಣದ ಬಳಿಕ ದೇವಾಲಯ ಬಾಗಿಲು ತೆರೆದು ಶುದ್ಧಿ ಮಾಡಿ ಪೂಜೆ ಮಾಡಲಾಯಿತು.

ಭಾರತ ಹೊರತುಪಡಿಸಿ ಈ ಸೂರ್ಯಗ್ರಹಣ ಕಾಂಗೋ, ಸೂಡಾನ್, ಇಥಿಯೋಪಿಯಾ, ಯೆಮೆನ್, ಸೌದಿ ಅರೇಬಿಯಾ, ಓಮಾನ್, ಪಾಕಿಸ್ತಾನ ಹಾಗೂ ಚೀನಾದಲ್ಲಿಯೂ ಗೋಚರವಾಗಿದೆ ಎಂದು ತಿಳಿದು ಬಂದಿದೆ.

ನಾಳೆ ರಾಹುಗ್ರಸ್ತ ಚೂಡಾಮಣಿ ಸೂರ್ಯಗ್ರಹಣ : ಅಮಾವಾಸ್ಯೆ ಹಾಗೂ “ರವಿ”ವಾರವೇ ಬಂದಿರುವ ಗ್ರಹಣದ ಬಗ್ಗೆ ಇಲ್ಲಿದೆ ಎಲ್ಲಾ ಮಾಹಿತಿ

Comments are closed.