ಕರಾವಳಿ

ಬಾರ್ಕೂರಿನಲ್ಲಿ ಕೆರೆಗೆ ಹಾರಿದ ಕಾರು; ವಕ್ವಾಡಿಯ ಉದ್ಯಮಿ ಸಾವು; ಯುವತಿ ಗಂಭೀರ

Pinterest LinkedIn Tumblr
ಉಡುಪಿ: ಕಾರೊಂದು ನಿಯಂತ್ರಣ ತಪ್ಪಿ ಬಾರಕೂರು ರಸ್ತೆ ಬದಿಯ ಇತಿಹಾಸ ಪ್ರಸಿದ್ಧ ಚೌಳಿಕೆರೆಗೆ ಬಿದ್ದ ಪರಿಣಾಮ ಉದ್ಯಮಿಯೊಬ್ಬರು ಮೃತಪಟ್ಟು, ಕಾರಿನಲ್ಲಿದ್ದ ಯುವತಿ ಗಂಭೀರವಾಗಿ ಗಾಯಗೊಂಡ ಘಟನೆ ಭಾನುವಾರ ಮಧ್ಯಾಹ್ನ ಸುಮಾರಿಗೆ ನಡೆದಿದೆ. ಮೃತರನ್ನು ಬೀಜಾಡಿಯ ಫ್ಲೈವುಡ್ ಅಂಗಡಿ ಮಾಲಕ, ವಕ್ವಾಡಿ ನಿವಾಸಿ ಸಂತೋಷ ಶೆಟ್ಟಿ(40) ಎಂದು ಗುರುತಿಸಲಾಗಿದೆ. ಗಂಭೀರ ಸ್ಥಿತಿಯಲ್ಲಿರುವ 23 ವರ್ಷ ಪ್ರಾಯದ ಯುವತಿ ಬ್ರಹ್ಮಾವರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಸದ್ಯ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.
 
ಬಾರಕೂರು ಕಡೆಯಿಂದ ಸಾಬರಕಟ್ಟೆ ಕಡೆ ಹೋಗುತ್ತಿದ್ದ ಕ್ರೇಟಾ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯ ಚೌಳಿಕೆರೆಗೆ ಉರುಳಿ ಬಿತ್ತೆನ್ನಲಾಗಿದೆ. ಇದರಿಂದ ಕಾರಿನಲ್ಲಿದ್ದ ಇವರಿಬ್ಬರು ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಗಂಭೀರ ವಾಗಿ ಅಸ್ವಸ್ಥಗೊಂಡರೆನ್ನಲಾಗಿದೆ. ಕೂಡಲೇ ಸ್ಥಳೀಯರು ಕಾರಿನಲ್ಲಿದ್ದ ಸಂತೋಷ ಶೆಟ್ಟಿ ಹಾಗೂ ಯುವತಿಯನ್ನು ರಕ್ಷಿಸುವ ಪ್ರಯತ್ನ ಮಾಡಿದರು. ಆದರೆ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಅವರು ಮೃತಪಟ್ಟರೆನ್ನಲಾಗಿದೆ. ಮೃತ ಸಂತೋಷ್ ಶೆಟ್ಟಿ ಬೀಜಾಡಿಯಲ್ಲಿ ಶ್ರೀ ಲಕ್ಷ್ಮೀ ಗ್ಲಾಸ್ ಹೆಸರಿನ ಗ್ಲಾಸ್ ಆಂಡ್ ಫ್ಲೈಯುಡ್ ಅಂಗಡಿ ನಡೆಸುತ್ತಿದ್ದ. ಸಂತೋಷ್ ವಿವಾಹಿತನಾಗಿದ್ದು ನಾಲ್ಕು ವರ್ಷದ ಮಗುವಿದೆ. ಅಲ್ಲದೇ ಪತ್ನಿ ತುಂಬು ಗರ್ಭಿಣಿಯಾಗಿದ್ದಾರೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Aa

Comments are closed.