ಕರಾವಳಿ

ನಾಳೆ ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳು ಜಿಲ್ಲೆಗೆ : ಮೂರು ದಿನ ವಿವಿಧ ತಾಲೂಕುಗಳಲ್ಲಿ ದೂರು ಸ್ವೀಕಾರ

Pinterest LinkedIn Tumblr

ಮಂಗಳೂರು ಜೂನ್ 21 : ದಕ್ಷಿಣ ಕನ್ನಡ ಜಿಲ್ಲೆಯ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಜೂನ್ 22, 23 ಮತ್ತು 24 ರಂದು ಜಿಲ್ಲೆಯ ವಿವಿಧ ತಾಲೂಕುಗಳಿಗೆ ಭೇಟಿ ನೀಡಿ ಸಾರ್ವಜನಿಕರಿಂದ ಭ್ರಷ್ಟಾಚಾರಕ್ಕೆ ಸಂಬಂಧಪಟ್ಟ ದೂರುಗಳನ್ನು ಸ್ವೀಕರಿಸಲಿದ್ದಾರೆ.

ದೂರುಗಳನ್ನು ಸ್ವೀಕರಿಸುವ ಸ್ಥಳ ಮತ್ತು ದಿನಾಂಕ ಇಂತಿವೆ:

ಬೆಳ್ತಂಗಡಿ ಸರ್ಕಾರಿ ನಿರೀಕ್ಷಣಾ ಮಂದಿರದ ತಾಲೂಕು ಕೇಂದ್ರದಲ್ಲಿ ಜೂನ್ 22 ರಂದು ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆ, ಬಂಟ್ವಾಳ ಸರ್ಕಾರಿ ನಿರೀಕ್ಷಣಾ ಮಂದಿರದ ತಾಲೂಕು ಕೇಂದ್ರದಲ್ಲಿ ಜೂನ್ 22ರಂದು ಮಧ್ಯಾಹ್ನ 2.30 ಗಂಟೆಯಿಂದ ಸಂಜೆ 4.30 ಗಂಟೆ, ಸುಳ್ಯ ಸರ್ಕಾರಿ ನಿರೀಕ್ಷಣಾ ಮಂದಿರದ ತಾಲೂಕು ಕೇಂದ್ರದಲ್ಲಿ ಜೂನ್ 23 ರಂದು ಬೆಳಿಗ್ಗೆ 11 ಗಂಟೆಯಿಂದ ಮದ್ಯಾಹ್ನ 1 ಗಂಟೆ, ಪುತ್ತೂರು ಸರ್ಕಾರಿ ನಿರೀಕ್ಷಣಾ ಮಂದಿರದ ತಾಲೂಕು ಕೇಂದ್ರದಲ್ಲಿ ಜೂನ್ 23 ರಂದು ಮದ್ಯಾಹ್ನ 2.30 ಗಂಟೆಯಿಂದ ಸಂಜೆ 4.30 ಗಂಟೆ, ಮೂಡಬಿದ್ರೆ ಸರ್ಕಾರಿ ನಿರೀಕ್ಷಣಾ ಮಂದಿರದ ತಾಲೂಕು ಕೇಂದ್ರದಲ್ಲಿ ಜೂನ್ 24 ರಂದು ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಸಾರ್ವಜನಿಕರಿಂದ ದೂರು ಸ್ವೀಕರಿಸುವರು.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 0824-2483000 ಸಂಪರ್ಕಿಸಲು ಮಂಗಳೂರು ಎ.ಸಿ.ಬಿ ಪೊಲೀಸ್ ಠಾಣೆ ಪ್ರಕಟಣೆ ತಿಳಿಸಿದೆ.

Comments are closed.