ಕುಂದಾಪುರ: ಗಂಗೊಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜೂ.10ರಂದು ತಡರಾತ್ರಿ ಪೆರಾಜೆ ಬಾರಿನ ಸಮೀಪ ರಸ್ತೆಯ ಬದಿಯಲ್ಲಿಮೂವರು ಗೋಕಳ್ಳರು ಬಿಡಾಡಿ ದನಗಳನ್ನು ಕಳವುಗೈದ ಪ್ರಕರಣಕ್ಕೆ ಸಂಬಂದಿಸಿದಂತೆ ಪ್ರಮುಖ ಆರೋಪಿಯನ್ನು ಗಂಗೊಳ್ಳಿ ಪೊಲೀಸರು ಬಂದಿಸಿದ್ದಾರೆ.
ಮೊಹಮ್ಮದ್ ಹನೀಫ್ ಬಂಧಿತ ಆರೋಪಿಯಾಗಿದ್ದು ಆತನನ್ನು ಗಂಗೊಳ್ಳಿ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಕಾಪುವಿನಲ್ಲಿ ಬಂಧಿಸಿದ್ದಾರೆ.
ಅಂದು ರಾತ್ರಿ ಯಾರೋ 3 ಜನ ಕಳ್ಳರು ಬೀದಿ ದನವನ್ನು ಕಳವು ಮಾಡಿಕೊಂಡು ಕಾರಿನಲ್ಲಿ ತುಂಬಿಕೊಂಡು ತ್ರಾಸಿ ಕಡೆಗೆ ಹೋಗಿದ್ದು ಸಿಸಿ ಟಿವಿಯಲ್ಲಿ ಈ ದ್ರಶ್ಯಾವಳಿಗಳು ದಾಖಲಾಗಿದ್ದು ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಹಿರಿಯ ಅಧಿಕಾರಿಗಳ ಮಾರ್ಗದರ್ಶನದಂತೆ ಗಂಗೊಳ್ಳಿ ಪೊಲಿಸ್ ಠಾಣಾ ಪಿ.ಎಸ್.ಐ ಭೀಮಾಶಂಕರ ಸಿನ್ನೂರ ಸಂಗಣ್ಣ ಹಾಗೂ ಸಿಬ್ಬಂದಿಗಳಾದ ಶ್ರೀಧರ, ಚಂದ್ರಶೇಖರ, ಪ್ರಿನ್ಸ್ , ಸಂತೋಷ್. ಆರ್ ಡಿ ಸೆಲ್ ವಿಬಾಗದ ಶಿವಾನಂದ ಮೊದಲಾದವರ ತಂಡವು ಆರೋಪಿ ಪತ್ತೆಯ ಬಗ್ಗೆ ಮಾಹಿತಿ ಕಲೆ ಹಾಕಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಇಂದು ಬೆಳಿಗ್ಗೆ ಕಾಪುವಿನಲ್ಲಿ ಆಪಾದಿತ ಮೊಹಮ್ಮದ್ ಹನೀಫ್ ಎಂಬುವವನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
Comments are closed.