ಕರಾವಳಿ

ಕಂಕಣ ಸೂರ್ಯಗ್ರಹಣದ ಅವಧಿ ಹಾಗೂ ಮಾಡಬೇಕಾದ ಮುನ್ನೆಚ್ಚರಿಕೆ ಕ್ರಮಗಳು

Pinterest LinkedIn Tumblr

ಕಂಕಣ ಸೂರ್ಯಗ್ರಹಣ: ಖಂಡಗ್ರಾಸ ಸೂರ್ಯಗ್ರಹಣ ಎಂದರೆ ಶೇಕಡ 99 ಭಾಗ ಗ್ರಹಣ ಇದೆ.ಜೂನ್.21ರ ಭಾನುವಾರ ಅಪರೂಪದ ಕಂಕಣ ಸೂರ್ಯಗ್ರಹಣ ಹಾಗೂ ಪಾರ್ಶ್ವ ಸೂರ್ಯಗ್ರಹಣ ಸುಮಾರು ಮೂರೂವರೆ ಗಂಟೆಗಳ ಕಾಲ ಸಂಭವಿಸಲಿದ್ದು, 90 ವರ್ಷದ ನಂತರ ಇಂತಹ ಗ್ರಹಣ ಕಣ ಸಿಗುವುದು. ಕಳೆದ ವರ್ಷ ಡಿಸೆಂಬರ್​ನಲ್ಲಿ ಸೂರ್ಯಗ್ರಹಣ ಕಂಕಣಾಕೃತಿಯಲ್ಲಿ ಬಂದಿತ್ತು. ಅದಾದ ನಂತರವೇ ಕರೊನಾ ಕಂಡಿದ್ದು. ಈ ಗ್ರಹಣ ಜ್ಯೇಷ್ಠ ಮಾಸ, ಗ್ರೀಷ್ಮ ಋತು, ಕೃಷ್ಣ ಪಕ್ಷ ಹಾಗೂ ಅಮಾವಾಸ್ಯೆ ದಿನ ಸಂಭವಿಸುತ್ತಿದೆ.

ಭಾರತ, ಆಫ್ರಿಕಾ, ಚೀನಾ, ಯುರೋಪ್, ಆಸ್ಟ್ರೇಲಿಯಾಗಳಲ್ಲಿ ಗ್ರಹಣ ಗೋಚರಿಸಲಿದ್ದು, ಬೆಳಗ್ಗೆ 10 ಗಂಟೆ 4 ನಿಮಿಷಕ್ಕೆ ಗ್ರಹಣ ಆರಂಭವಾಗಲಿದ್ದು, ಮಧ್ಯಾಹ್ನ 1 ಗಂಟೆ 22 ನಿಮಿಷಕ್ಕೆ ಕೊನೆಯಾಗಲಿದೆ. ಬೆಳಗ್ಗೆ 11 ಗಂಟೆ 37 ನಿಮಿಷ ಗ್ರಹಣದ ಗರಿಷ್ಠ ಸಮಯವಾಗಿರುತ್ತದೆ. ಒಟ್ಟು 3 ಗಂಟೆ 18 ನಿಮಿಷದ ಗ್ರಹಣದ ಅವಧಿಯಲ್ಲಿ ಬರಿ ಕಣ್ಣಿನಿಂದ ನೋಡಿದರೆ ದೃಷ್ಟಿದೋಷ ಉಂಟಾಗಬಹುದು.

ಮೃಗಶಿರಾ ನಕ್ಷತ್ರದಲ್ಲಿ ಗ್ರಹಣ ಬಂದಿರುವುದು ವಿಷಾದಕರ. ಇನ್ನು ಧಾರ್ಮಿಕ ಆಚರಣೆಯಂತೆ ಗ್ರಹಣದ ವೇಳೆ ಮಠ-ಮಂದಿರಗಳಲ್ಲಿ ಪೂಜಾ ಕಾರ್ಯಗಳಲ್ಲಿ ವ್ಯತ್ಯಾಸವಾಗಲಿದೆ. ಗ್ರಹಣ ಕಾಲದಲ್ಲಿ ದೇವಾಲಯಗಳನ್ನು ಬಂದ್ ಮಾಡಲಾಗುವುದು. ಇನ್ನು ಗ್ರಹಣದ ವೇಳೆ ಆಹಾರ ಸೇವನೆ ನಿಷಿದ್ಧವೆಂದು ಜ್ಯೋತಿಷಿಗಳು ಹೇಳಿದ್ದಾರೆ.

ಶನಿವಾರ ರಾತ್ರಿ 10 ಗಂಟೆ ನಂತರ ಗ್ರಹಣ ಕಾಲ ಮುಗಿಯುವವರೆಗೂ ಆಹಾರ ಸ್ವೀಕರಿಸುವಂತಿಲ್ಲ. ರೋಗಿಗಳು, ಗರ್ಭಿಣಿಯರು, ಮಕ್ಕಳು, ಅಶಕ್ತರು, ಹಿರಿಯರಿಗೆ ವಿನಾಯಿತಿ ಇರುತ್ತದೆ. ಗ್ರಹಣದ ಕಾರಣ ರಾಶಿ ಅನುಸಾರ ಶುಭ, ಅಶುಭ, ಮಿಶ್ರ ಫಲ ಇರುತ್ತದೆ ಎನ್ನಲಾಗಿದೆ.

ಸೂರ್ಯಗ್ರಹಣ ಸಂಧರ್ಭ ಮಾಡಬೇಕಾದ ಮುನ್ನೆಚ್ಚರಿಕೆ ಕ್ರಮಗಳು
ದೇಶದ ಕೆಲವೆಡೆ ಖಂಡಗ್ರಾಸ, ಮತ್ತೆ ಕೆಲವೆಡೆ ಭಾಗಶಃ ಸೂರ್ಯಗ್ರಹಣ ಗೋಚರಿಸಲಿದೆ. ಇದನ್ನು ಬರಿಗಣ್ಣಿನಿಂದ ನೋಡಲೇಬಾರದು. ಸುರಕ್ಷಾ ಕನ್ನಡಕ ಧರಿಸಿ ಅಥವಾ ಪರೋಕ್ಷ ವೀಕ್ಷಣಾ ವಿಧಾನಗಳನ್ನು ಅನುಸರಿಸಿಯೇ ಈ ಗ್ರಹಣವನ್ನು ಕಣ್ತುಂಬಿಕೊಳ್ಳಬಹುದು.

ಗ್ರಹಣ ಗೋಚರ ಸಮಯ
ಬೆಂಗಳೂರು
ಬೆಳಗ್ಗೆ 10.12 ನಿಮಿಷಕ್ಕೆ ಸೂರ್ಯಗ್ರಹಣ ಆರಂಭ
ಬೆಳಗ್ಗೆ 11.45 ಕ್ಕೆ ಗ್ರಹಣದ ಸಂಪೂರ್ಣತೆ
ಮಧ್ಯಾಹ್ನ 1.13 ಕ್ಕೆ ಗ್ರಹಣದ ಮೋಕ್ಷಕಾಲ

ಮೈಸೂರು
ಮೈಸೂರಿನಲ್ಲಿ ಬೆಳಗ್ಗೆ 10.10ಕ್ಕೆ ಗ್ರಹಣ ಆರಂಭ
ಬೆಳಗ್ಗೆ 11.42ಕ್ಕೆ ಗ್ರಹಣದ ಸಂಪೂರ್ಣತೆ
ಮಧ್ಯಾಹ್ನ 1.26ಕ್ಕೆ ಗ್ರಹಣದ ಮೋಕ್ಷಕಾಲ

ಮಂಗಳೂರು
ಬೆಳಗ್ಗೆ 10.04ಕ್ಕೆ ಗ್ರಹಣ ಆರಂಭಕ್ಕೆ
11.36ಕ್ಕೆ ಗ್ರಹಣದ ಸಂಪೂರ್ಣತೆ
ಮಧ್ಯಾಹ್ನ 1.21ಕ್ಕೆ ಗ್ರಹಣದ ಮೋಕ್ಷಕಾಲ

Comments are closed.