ಕರಾವಳಿ

ಪ್ರಧಾನಮಂತ್ರಿ ಮಾತೃವಂದನಾ ಯೋಜನೆ : ಗರ್ಭಿಣಿ ಬ್ಯಾಂಕ್ ಖಾತೆಗೆ ರೂ.5000 ಜಮಾ

Pinterest LinkedIn Tumblr

ಮಂಗಳೂರು ಜೂನ್ 20 : ಪ್ರಧಾನ ಮಂತ್ರಿ ಮಾತೃವಂದನಾ ಯೋಜನೆ 2018 ಜನವರಿ 1 ರಿಂದ ಜಾರಿಗೆ ಬಂದಿರುತ್ತದೆ. ಸರಕಾರಿ ನೌಕರರಾಗಿರುವ ಮಹಿಳೆಯರನ್ನು ಹೊರತುಪಡಿಸಿ ಮೊದಲ ಬಾರಿ ಗರ್ಭಿಣಿ ಯರಾಗುವ ಪ್ರತಿಯೊಬ್ಬರೂ ಇದರ ಪ್ರಯೋಜನವನ್ನು ಪಡೆಯಬಹುದು.

ಅರ್ಹ ಫಲಾನುಭವಿಗಳಿಗೆ ಬ್ಯಾಂಕ್ ಖಾತೆಗೆ ರೂ 5000 ವನ್ನು ನೇರವಾಗಿ ಜಮಾ ಮಾಡಲಾಗುತ್ತದೆ. ಪ್ರಸ್ತುತ 2018 ಜೂನ್ 1 ರಿಂದ ಅರ್ಜಿ ಸಲ್ಲಿಸಲು ಬಾಕಿ ಇರುವ ಫಲಾನುಭವಿಗಳು ಕೂಡಾ ಈಗ ಅರ್ಜಿ ಸಲ್ಲಿಸಬಹುದು. ಎ.ಪಿ.ಎಲ್ ಪಡಿತರ ಚೀಟಿ ಇರುವವರೂ ಕೂಡ ಪ್ರಯೋಜನ ಪಡೆಯಬಹುದು ಅರ್ಜಿ ಸಲ್ಲಿಸಲು ಯಾವುದೇ ಆದಾಯದ ಮಿತಿ ಇರುವುದಿಲ್ಲ.

ದಕ್ಷಿಣ ಕನ್ನಡ ಜಿಲ್ಲೆಗೆ 2020-21 ನೇ ಸಾಲಿನಲ್ಲಿ ಗುರಿ ನಿಗದಿಪಡಿಸಲಾಗಿದ್ದು, ಮಂಗಳೂರು ನಗರ ಪ್ರದೇಶ ದಲ್ಲಿ ನಿರೀಕ್ಷಿತ ಫಲಾನುಭವಿಗಳು ಅರ್ಜಿ ಸಲ್ಲಿಸದಿರುವುದರಿಂದ ಅರ್ಹ ಫಲಾನುಭವಿಗಳು ಸಮೀಪದ ಅಂಗನವಾಡಿ ಕಾರ್ಯಕರ್ತೆಯರನ್ನು ಸಂಪರ್ಕಿಸಬಹುದು ದ.ಕ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃಧ್ದಿ ಇಲಾಖೆಯ ಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.

Comments are closed.