ಆರೋಗ್ಯ

ಕೊರೋನಾದಿಂದ ಮೃತಪಟ್ಟ ತೆಕ್ಕಟ್ಟೆ ವ್ಯಕ್ತಿಯ ಪತ್ನಿ, ಮಗಳಿಗೂ ಪಾಸಿಟಿವ್: ಕೋವಿಡ್ ಆಸ್ಪತ್ರೆಗೆ ಶಿಪ್ಟ್

Pinterest LinkedIn Tumblr

ಕುಂದಾಪುರ: ಮಹಾರಾಷ್ಟ್ರದಿಂದ ಬಂದು ಗುರುವಾರ ಸಂಜೆ ಮನೆಯಲ್ಲಿಯೇ ಮೃತಪಟ್ಟು ಕೊರೋನಾ ಪರೀಕ್ಷಾ ವರದಿಯಲ್ಲಿ ಪಾಸಿಟಿವ್ ಎಂದು ದೃಢಗೊಂಡಿದ್ದ ತೆಕ್ಕಟ್ಟೆಯ 54 ವರ್ಷದ ವ್ಯಕ್ತಿಯ ಪತ್ನಿ ,ಪುತ್ರಿಗೂ ಕೊರೋನಾ ಪಾಸಿಟಿವ್ ವರದಿ ಬಂದಿದೆ.

ಗುರುವಾರ ಮಧ್ಯಾಹ್ನ ಪತ್ನಿ, ಪುತ್ರಿ ಹಾಗೂ ಇನ್ನೊಬ್ಬರ ಜೊತೆ ವ್ಯಕ್ತಿ ಕುಂದಾಪುರಕ್ಕೆ ಆಗಮಿಸಿದ್ದರು. ಉಡುಪಿಯಲ್ಲಿ ನಾಲ್ವರಿಗೂ ಥರ್ಮಲ್ ಸ್ಕ್ಯಾನರ್ ಮೂಲಕ ತಪಾಸಣೆ ಮಾಡಿದ್ದು ಯಾವುದೇ ಕೊರೋನಾ ಲಕ್ಷಣಗಳಿಲ್ಲದ ಕಾರಣ ಮನೆಗೆ ಕಳಿಸಿ ಹೋಂ ಕ್ವಾರೆಂಟೈನ್ ಮಾಡಲಾಗಿತ್ತು. ಆದರೆ ಗುರುವಾರ ಸಂಜೆ 54 ವರ್ಷ ಪ್ರಾಯದ ವ್ಯಕ್ತಿ ಮನೆಯಲ್ಲಿಯೇ ಮೃತಪಟ್ಟಿದ್ದರು. ಅವರ ಕೊರೋನಾ ತಪಾಸಣೆ ವೇಳೆ ಪಾಸಿಟಿವ್ ಎಂದು ದೃಡವಾಗಿತ್ತು. ಮೃತ ವ್ಯಕ್ತಿಯ ಪತ್ನಿ, ಪುತ್ರಿಯ ಕೊರೋನಾ ಪರೀಕ್ಷೆ ನಡೆಸಿದ್ದು ಶುಕ್ರವಾರ ಇಬ್ಬರಿಗೂ ಪಾಸಿಟಿವ್ ವರದಿ ಬಂದಿದೆ. ಇಬ್ಬರನ್ನೂ ಕುಂದಾಪುರ ಕೋವಿಡ್ ಆಸ್ಪತ್ರೆಗೆ ಆರೋಗ್ಯ ಇಲಾಖೆ ದಾಖಲಿಸಿದೆ.

ಸೋಂಕಿನಿಂದ ಮೃತ ವ್ಯಕ್ತಿಯ ಮರಣೋತ್ತರ ಪರೀಕ್ಷೆ ನಡೆಸಿದ್ದು ಸದ್ಯ ಪೋಸ್ಟ್ ಮಾರ್ಟಂ ಆಗಿ ಮೃತದೇಹವನ್ನು ಜಿಲ್ಲಾಸ್ಪತ್ರೆಯಲ್ಲಿರಿಸಲಾಗಿದ್ದು ಅಂತಿಮ ಸಂಸ್ಕಾರದ ಬಗ್ಗೆ ಇಂದು ನಿರ್ಧಾರ ಮಾಡಲಾಗುತ್ತದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಸುಧೀರ್ ಚಂದ್ರ ಸೂಡ ಮಾಹಿತಿ ನೀಡಿದ್ದಾರೆ.

Comments are closed.