ಕರಾವಳಿ

ಕಷ್ಟದಲ್ಲಿದ್ದ ಮಹಿಳೆಗೆ ಸಹಾಯ ಹಸ್ತ ನೀಡಿ ಮಾನವೀಯತೆ ಮೆರೆದ ಎಸ್ಐ ಉಮೇಶ್ ಕುಮಾರ್

Pinterest LinkedIn Tumblr

ಮಂಗಳೂರು : ಕಷ್ಟದಲ್ಲಿದ್ದ ಮಹಿಳೆಗೆ ಸಹಾಯ ಹಸ್ತ ನೀಡುವ ಮೂಲಕ ಪಣಂಬೂರು ಎಸ್ಐ ಉಮೇಶ್ ಕುಮಾರ್ ಅವರು ಮಾನವೀಯತೆ ಮೆರೆದಿದ್ದಾರೆ.

ವೃತ್ತಿಯಲ್ಲಿ ಉಪನ್ಯಾಸಕಿ ಯಾಗಿದ್ದ ವಿಜಯಲಕ್ಷ್ಮಿ 59 ವಯಸ್ಸಿನ ವೃದ್ಧ ಮಹಿಳೆ ಉತ್ತರಭಾರತದಲ್ಲಿ ಯಾವುದೋ ಒಂದು ಶಾಲೆಯಲ್ಲಿ ಉಪನ್ಯಾಸಕಿಯಾಗಿ ಇದ್ದವರನ್ನು ಕೋರೋಣ ಕಾಯಿಲೆಯ ಕಾರಣದಿಂದಾಗಿ ಅಲ್ಲಿದ್ದ ನೌಕರರನ್ನು ತಮ್ಮ ತಮ್ಮ ಊರಿಗೆ ಕಳಿಸಿದ ಸಂದರ್ಭ ತಮ್ಮ ಊರಾದ ಚಿಕ್ಕಮಂಗಳೂರಿನಲ್ಲಿ ಯಾರು ಇಲ್ಲದ ಕಾರಣ ಧರ್ಮಸ್ಥಳಕ್ಕೆ ಬಂದಿದ್ದರು.

ಧರ್ಮಸ್ಥಳದಲ್ಲಿ ಎರಡು ದಿನ ಇದ್ದು ಅಲ್ಲಿಂದ ಮಂಗಳೂರಿಗೆ ಬಂದು ಮಂಗಳೂರಿನ ಕೆಎಸ್ಆರ್ಟಿಸಿ ಬಸ್ ಸ್ಟಾಂಡಿನಲ್ಲಿ ಸಾರ್ವಜನಿಕರಿಂದ ಮಾಹಿತಿ ಪಡೆದು ಕೆಲಸ ಹುಡುಕಿಕೊಂಡು ಅವರು ಬೈಕಂಪಾಡಿಗೆ ಬಂದಿದ್ದರು.

ಬೈಕಂಪಾಡಿಗೆ ಬಂದು ಬೈಕಂಪಾಡಿಯಲ್ಲಿ ಹಲವಾರು ಕಾರ್ಖಾನೆಗಳಿಗೆ ಕೆಲಸ ಕೇಳಿದಾಗ ಯಾರು ಕೆಲಸ ಕೊಡದಿದ್ದಾಗ ಅಸಹಾಯಕತೆಯಿಂದ ಸ್ಥಳೀಯರನ್ನು ಸಂಪರ್ಕಿಸಿದಾಗ ಸ್ಥಳೀಯರು ಪೋಲೀಸ್ ಕಂಟ್ರೋಲ್ ರೂಮಿಗೆ ತಿಳಿಸಿದರು.

ಕಂಟ್ರೋಲ್ ರೂಂ ನಿಂದ ಬಂದ ಮಾಹಿತಿಯಂತೆ ಉಮೇಶ್ ಕುಮಾರ್ ಅವರು ಮತ್ತು ಸಿಬ್ಬಂದಿಯವರು ಕೂಡಲೇ ಸ್ಥಳಕ್ಕೆ ಧಾವಿಸಿ ವಿಚಾರಿಸಿದಾಗ ನನಗೆ ಯಾರೂ ಕೆಲಸ ಕೊಡುವುದಿಲ್ಲ ನನ್ನನ್ನು ಧರ್ಮಸ್ಥಳಕ್ಕೆ ಕಳುಹಿಸಿ ಕೊಡಿ ಎಂದು ಬೇಡಿಕೊಂಡಾಗ ಪಿಎಸ್ಐ ಅವರು ತಮ್ಮ ಇಲಾಖಾ ಜೀಪಿನಲ್ಲಿ ಕೆಎಸ್ಆರ್ಟಿಸಿ ಬಸ್ ಸ್ಟ್ಯಾಂಡಿಗೆ ಕರೆದುಕೊಂಡು ಹೋಗಿ ಬಿಟ್ಟಿದ್ದಾರೆ.

ಈ ವೇಳೆ ನನ್ನಲ್ಲಿ ಬಸ್ಸಿಗೂ ಹಣವಿಲ್ಲಎಂದು ಮಹಿಳೆ ಹೇಳಿದಾಗ ಪಿಎಸ್ಐ ಅವರು ಮಹಿಳೆಗೆ ತಮ್ಮ ಕಿಸೆಯಿಂದ ಹಣ ಕೊಟ್ಟು ಕಳುಹಿಸಿ ಕೊಟ್ಟು ಮಾನವೀಯತೆ ಮೆರೆದಿದ್ದಾರೆ.

Comments are closed.