ಕರಾವಳಿ

ಮೀನಿನ ಚಿಪ್ಸ್ , ಮೀನಿನಿಂದ ತಯಾರಿಸುವ ಮಸಾಲೆ ಪದಾರ್ಥಗಳಿಗೆ ಸಿಎಂ ಯಡಿಯೂರಪ್ಪ ಲೋಕಾರ್ಪಣೆ

Pinterest LinkedIn Tumblr

ಬೆಂಗಳೂರು: ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮ ನಿಯಮಿತ ವತಿಯಿಂದ ಮೀನಿನ ಖಾದ್ಯ ಪ್ರಿಯರಿಗಾಗಿ ಇದೇ ಮೊದಲ ಬಾರಿಗೆ ಮೀನಿನ ಚಿಪ್ಸ್, ಮೀನಿನಿಂದ ತಯಾರಿಸುವ ಮಸಾಲೆ ಪದಾರ್ಥಗಳನ್ನು ಮುಖ್ಯಮಂತ್ರಿ ಯಡಿಯೂರಪ್ಪ ಲೋಕಾರ್ಪಣೆ ಮಾಡಿದರು. ಗೃಹ ಸಚಿವ ಬಸವರಾಜ ಬೊಮ್ಮಾಯಿ, ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್‌, ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ಎಂ.ಡಿ. ಎಮ್.ಎಲ್. ದೊಡ್ಡಮನಿ, ಮತ್ಸ್ಯ ಬಂಧನ ಸಂಸ್ಥೆಯ ನಿರ್ದೇಶಕರಾದ ಗೋವಿಂದ ಬಾಬು ಪೂಜಾರಿ, ಅರುಣ್ ಧನಪಾಲ್ ಈ ಸಂದರ್ಭ ಇದ್ದರು.

ಶುಕ್ರವಾರ ವಿಧಾನಸೌಧದ ಕೊಠಡಿಯಲ್ಲಿ ಮೀನುಗಾರಿಕೆ ಇಲಾಖೆಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮೀನಿನ ಮೌಲ್ಯವರ್ಧಿತ ಉತ್ಪನ್ನಗಳನ್ನು ಬಿಡುಗಡೆ ಮಾಡಿದ ಅವರು, ಮೀನು ಪ್ರಿಯರು ಬೇಡಿಕೆ ಸಲ್ಲಿಸಿದ ಹಿನ್ನೆಲೆಯಲ್ಲಿ ನಿಗಮದಿಂದ ‘ಮತ್ಸ್ಯ ಬಂಧನ’ ಸಂಸ್ಥೆ ಸಹಭಾಗಿತ್ವದಲ್ಲಿ ಮೀನಿನ ಚಿಪ್ಸ್ ಮತ್ತು ಮಸಾಲೆ ಪದಾರ್ಥಗಳನ್ನು ಸಿದ್ಧಪಡಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ರಾಜ್ಯದಲ್ಲಿ ಮೀನುಗಾರಿಕೆ ಉದ್ಯಮದಲ್ಲಿ ತೊಡಗಿಸಿಕೊಂಡಿರುವ ಆದಿಮೆದಾರರಿಗೆ ಮೀನು ಹಾಗೂ ಮೀನಿನ ಮೌಲ್ಯವರ್ಧಿತ ಉತ್ಪನ್ನಗಳ ಉತ್ಪಾದನೆ ಮತ್ತು ಮಾರಾಟಕ್ಕೆ ಅವಶ್ಯ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಮೀನಿನ ಚಿಪ್ಸ್ ಗಳನ್ನು ತಯಾರಿಸಲಾಗುತ್ತಿದೆ. ದೇಶದಲ್ಲಿ ಮೀನುಗಾರಿಕೆ ಕ್ಷೇತ್ರದಲ್ಲಿ ಜಗತ್ತಿನ ಎರಡನೇ ಅತಿ ದೊಡ್ಡ ಮೀನುಗಾರಿಕಾ ಉತ್ಪಾದನಾ ರಾಷ್ಟ್ರವಾಗಿದೆ. ರಾಜ್ಯದಲ್ಲಿ ಸಹ ಮೀನುಗಾರಿಕೆಗೆ ವಿಪುಲ ಅವಕಾಶ ಇದ್ದು, ರಾಜ್ಯದಲ್ಲಿ ಜಲ ಸಂಪನ್ಮೂಲಗಳ ಸದ್ಬಳಕೆ ಮಾಡಿಕೊಳ್ಳಬೇಕಾದ ಅಗತ್ಯವಿದೆ. ಮುಂದಿನ ದಿನದಲ್ಲಿ ಮೀನಿನ ಹೊಸ ಉತ್ಪನ್ನಗಳನ್ನು ಉತ್ಪಾದಿಸುವ ಚಿಂತನೆ ಇದೆ. ಮೀನುಗಾರಿಕೆಯನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಮೀನಿನ ಮೌಲ್ಯವರ್ಧನರೆ ಪ್ರಮುಖವಾಗಲಿದೆ. ಮೀನಿನ ಚಿಪ್ಸ್ ನಂತಹ ಉತ್ಪನ್ನಗಳನ್ನು ಉತ್ಪಾದಿಸಿ ಹೊಸ ಮಾರುಕಟ್ಟೆ ಕಲ್ಪಿಸುವ ಮೂಲಕ ಮೀನುಗಾರಿಕೆ ಉದ್ಯಮವಾಗಿ ಬೆಳೆಸುವ ಚಿಂತನೆ ಇದೆ ಎಂದರು.

ಏನಿದು ಮೀನು ಚಿಪ್ಸ್…
ಮೀನಿನಿಂದ ತಯಾರಿಸಲ್ಪಟ್ಟ ಚಿಪ್ಸ್ ಗಳಲ್ಲಿ ಅತೀ ಹೆಚ್ಚಿನ ಪೌಷ್ಟಿಕಾಂಶಗಳು ಇವೆ. ಮೀನಿನ ಫ್ಯಾಟ್‌ ಅಂಶ ಗಳನ್ನು ತೆಗೆದು, ಅದರಲ್ಲಿರುವ ನೈಜ ಪೌಷ್ಟಿಕಾಂಶಗಳನ್ನು ಉಳಿಸಿಕೊಂಡು ಚಿಪ್ಸ್‌ ಸಿದ್ಧ ಪಡಿಸ ಲಾಗುತ್ತದೆ. ಒಮೆಗಾ-3 ಕೊಬ್ಬು, ವಿಟಮಿನ್‌ ಡಿ ಮತ್ತು ಬಿ2 ಕೂಡ ಇರಲಿದೆ. ಸಾಮಾನ್ಯ ಚಿಪ್ಸ್‌ ಗಳಂತೆ ಇದು ಜಂಕ್‌ ಫ‌ುಡ್‌ ಆಗಿರುವುದಿಲ್ಲ. ಇದೊಂದು ಪೌಷ್ಟಿಕಾಂಶಯುಕ್ತ ಆಹಾರವಾಗಿರಲಿದೆ ಎಂದು ಮತ್ಸ್ಯ ಬಂಧನ ಸಂಸ್ಥೆಯ ನಿರ್ದೇಶಕರುಗಳಾದ ಅರುಣ್‌ ಧನಪಾಲ್‌ ಹಾಗೂ ಗೋವಿಂದ ಬಾಬು ಪೂಜಾರಿ ಹೇಳುತ್ತಾರೆ.

ಚಿಪ್ಸ್‌ನಲ್ಲಿ ಮೀನಿನ ವಾಸನೆ ಸ್ವಲ್ಪವೂ ಇರುವುದಿಲ್ಲ. ಬದಲಾಗಿ ಪಾಲಕ್‌, ಕ್ಯಾರೆಟ್‌, ಟೊಮೊಟೊ, ಮೆಣಸಿನ ಕಾಯಿ ಮಸಾಲ ಮೊದಲಾದ ಪ್ಲೇವರ್‌ಗಳಲ್ಲಿ ಲಭ್ಯವಾಗಲಿದೆ. ಕೆಎಫ್ಡಿಸಿಯ ಎಲ್ಲ ಮಳಿಗೆಗಳಲ್ಲೂ ಹಾಗೂ ಮತ್ಸ್ಯ ದರ್ಶಿನಿಗಳಲ್ಲಿ ಚಿಪ್ಸ್‌ಗಳು ಲಭ್ಯವಿರುತ್ತವೆ. ಮುಂದಿನ ಒಂದು ವಾರ ದಲ್ಲಿ ಬಗೆ ಬಗೆಯ ಮೀನಿನ ಚಿಪ್ಸ್‌ ಮಾರು ಕಟ್ಟೆಗೆ ಬರಲಿದೆ. ಪ್ಯಾಕ್‌ ದರ 30 ರೂ. ನಿಗದಿ ಪಡಿಸಲಾಗಿದೆ.

Comments are closed.