ಕರಾವಳಿ

ರಾತ್ರಿ ಹೊತ್ತು ಈ ಕೆಲಸವನ್ನು ಯಾವಾತ್ತು ಮಾಡಬೇಡಿ.. ಯಾಕೆ ಗೋತ್ತೆ?

Pinterest LinkedIn Tumblr

ನಮ್ಮ ಪೂರ್ವಜರು ಈ ಹಿಂದೆ ಯಾವುದೇ ಸಲಹೆಯನ್ನು ನೀಡಿದ್ದರೂ ಕೂಡ ಅದರ ಹಿಂದೆ ಸಾವಿರ ಮಹತ್ವಗಳು ಇರುತ್ತವೆ ಮತ್ತು ಇವತ್ತಿಗೂ ಕೂಡ ಕೆಲವು ಮನೆಯಲ್ಲಿ ಪೂರ್ವಜರಿ ಮಾಡಿಕೊಂಡು ಬಂದಿರುವ ಕೆಲವು ಶಾಸ್ತ್ರ ಸಂಪ್ರದಾಯಗಳನ್ನು ಕಟ್ಟುನಿಟ್ಟಾಗಿ ಆಚರಿಸುತ್ತಾರೆ, ಕರಣ ಅವರಿಗೆ ಅದರ ಮಹತ್ವ ಗೊತ್ತು. ಮನೆಯ ಹಿರಿಯರು ಒಮ್ಮೊಮ್ಮೆ ಹೇಳುವ ಮಾತುಗಳು ಈಗಿನ ಯುವ ಪೀಳಿಗೆಗೆ ಇರಿಸು ಮುರಿಸು ಉಂಟು ಮಾಡಿದರೂ ಕೂಡ ಅದರ ಹಿಂದಿನ ಸತ್ಯ ಮಾತ್ರ ಯಾವತ್ತಿದ್ದರೂ ಸತ್ಯವೇ. ಆಗಿನ ಕಾಲದ ಜನಜೀವನಕ್ಕೂ ಈಗಿನ ಕಾಲದ ಆಧುನಿಕ ಯುಗಕ್ಕೂ ಬಹಳ ವ್ಯತಾಸವಿದೆ ನಿಜ, ಆಗಿನವರ ದ್ರಷ್ಟಿಕೋನ ಹಾಗು ಈಗಿನ ಪೀಳಿಗೆಯ ದ್ರಷ್ಟಿಕೋನಕ್ಕೆ ಬಹಳ ವ್ಯತ್ಯಾಸಗಳಿವೆ.

ಇನ್ನು ನೀವು ಮನೆಯಲ್ಲಿ ಕೆಲವು ಹಿರಿಯರು ಗುರುವಾರ ತಲೆ ಸ್ನಾನ ಮಾಡಬೇಡಿ, ರಾತ್ರಿ ವೇಳೆ ಉಗುರುಗಳನ್ನು ಕತ್ತರಿಸಬೇಡಿ ಹೀಗೆ ಸುಮಾರು ಸಲಹೆ ನೀಡುತ್ತಾರೆ. ಆದರೆ ಇದರ ಹಿಂದಿನ ಮಹತ್ವ ಮಾತ್ರ ನಿಮಗೆ ತಿಳಿದಿರಬೇಕು. ಇಷ್ಟಕ್ಕೂ ರಾತ್ರಿ ವೇಳೆಯಲ್ಲಿ ಉಗುರನ್ನು ಯಾಕೆ ಕಟ್ ಮಾಡಬಾರದು ಎಂದು ಹಿರಿಯರು ಹೇಳಿದ್ದಾರೆ, ಇದರ ಹಿಂದಿನ ರಹಸ್ಯವೇನು ಎನ್ನುವುದನ್ನು ತಿಳಿಯೋಣ. ಸ್ನೇಹಿತರೆ ರಾತ್ರಿಯ ಸಮಯದಲ್ಲಿ ಉಗುರುಗಳನ್ನ ಏಕೆ ಕಟ್ ಮಾಡಬಾರದು ಅನ್ನುವುದಕ್ಕೆ ವೈಜ್ಞಾನಿಕವಾಗಿ ಮತ್ತು ಪುರಾಣಿಕವಾಗಿ ಎರಡು ಕಾರಣಗಳು ಇವೆ, ಮೊದಲ ಕಾರಣ ಎಂದರೆ ಉಗುರುಗಳು ನಮ್ಮ ಬೆರಳುಗಳ ಮೇಲೆ ಬಲವಾದ ಪದರವಾಗಿದ್ದು ಇದು ನಮ್ಮ ಮೃದುವಾದ ಬೆರಳುಗಳನ್ನು ಬಹಳ ರಕ್ಷಿಸುತ್ತದೆ, ಇನ್ನು ರಾತ್ರಿಯ ಸಮಯದಲ್ಲಿ ಈ ಪದರಗಳು ಸಡಿಲ ಆಗುತ್ತದೆ ಮತ್ತು ರಾತ್ರಿಯ ಸಮಯದಲ್ಲಿ ಉಗುರುಗಳನ್ನ ಕಟ್ ಮಾಡುವಾಗ ಈ ಪದರಕ್ಕೆ ಪೆಟ್ಟು ಬಿದ್ದರೆ ನಮ್ಮ ಬೆರಳಿಗೆ ಹಾನಿ ಆಗುವ ಸಾಧ್ಯತೆ ಜಾಸ್ತಿ ಇರುತ್ತದೆ ಮತ್ತು ಇದು ವೈಜ್ಞಾನಿಕವಾಗಿ ಕೂಡ ಸತ್ಯವಾಗಿದೆ.

ಈ ಕಾರಣದಿಂದ ರಾತ್ರಿಯ ಸಮಯದಲ್ಲಿ ನಾವು ಉಗುರುಗಳನ್ನು ಕತ್ತರಿಸುವಾಗ, ನಮ್ಮ ಬೆರಳುಗಳಿಗೆ ಯಾವುದೇ ರೀತಿಯಲ್ಲಿ ಹಾನಿಯಾಗದಂತೆ ನಾವು ವಿಶೇಷ ಕಾಳಜಿ ವಹಿಸಬೇಕು, ಇದಕ್ಕೆ ಉಗುರುಗಳನ್ನ ಕಟ್ ಮಾಡಲು ರಾತ್ರಿ ಸರಿಯಾದ ಸಮಯವಲ್ಲ. ಆಗಿನ ಕಾಲದಲ್ಲಿ ಎಲ್ಲಾ ಮನೆಗಳಲ್ಲಿ ವಿದ್ಯುತ್ ಬೆಳಕು ಅಥವಾ ದೀಪದ ವ್ಯವಸ್ಥೆ ಇರಲಿಲ್ಲ ಹಳೆಯ ಕಾಲದಲ್ಲಿ ಜನರು ತಮ್ಮ ಎಲ್ಲಾ ಕೆಲಸಗಳನ್ನು ಸೂರ್ಯನ ಬೆಳಕಿಗೆ ಅನುಗುಣವಾಗಿ ಮಾಡುತ್ತಿದ್ದರು, ಅದಕ್ಕಾಗಿಯೇ ಯಾವುದೇ ರೀತಿಯ ನಷ್ಟವಾಗದಂತೆ ಹಗಲಿನ ವೇಳೆಯಲ್ಲಿ ಉಗುರುಗಳನ್ನು ಕತ್ತರಿಸಬೇಕು ಎಂದು ಹೇಳಲಾಗಿತ್ತು. ಇನ್ನೊಂದು ಮುಖ್ಯ ಕಾರಣ ಎಂದರೆ ಪ್ರಾಚೀನ ಕಾಲದಲ್ಲಿ ಈಗಿನ ಮಾರ್ಕೆಟ್ ಗಳಲ್ಲಿ ದೊರಕುವಂತಹ ಉಗುರು ಕತ್ತರಿಸುವ ಸಾಧನ ಜನರಿಗೆ ಲಭ್ಯವಿರಲಿಲ್ಲ, ಆ ಸಮಯದಲ್ಲಿ ಜನರು ಚಾಕುವಿನಿಂದ ಅಥವಾ ತೀಕ್ಷ್ಣವಾದ ಉಪಕರಣದಿಂದ ಉಗುರುಗಳನ್ನು ಕತ್ತರಿಸುತ್ತಿದ್ದರು.

ಮೊದಲೇ ನಾವು ಹೇಳಿದಂತೆ ಆಗಿನ ಕಾಲದಲ್ಲಿ ವಿದ್ಯುತ್ ಇರಲಿಲ್ಲ ಆದ್ದರಿಂದ ಹಿಂದಿನ ಜನರು ತಮ್ಮ ಕೈಗಳಿಗೆ ಯಾವುದೇ ರೀತಿಯ ಹಾನಿಯಾಗದಂತೆ ರಾತ್ರಿಯ ಕತ್ತಲೆಯಲ್ಲಿ ಉಗುರುಗಳನ್ನು ಕತ್ತರಿಸುವುದನ್ನು ನಿಷೇಧ ಮಾಡಿದ್ದರು. ಇನ್ನು ಕೆಲವು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಆಗಿನ ಅನರು ದೇವರ ಭಯ ಎನ್ನುವುದನ್ನು ನಂಬಿಕೆಗೆ ಸೇರಿಸುತ್ತಿದ್ದರು, ರಾತ್ರಿ ವೇಳೆ ಉಗುರು ಕತ್ತರಿಸುವುದು ಅಶುಭವೇ ಎಂದು ಹೆಚ್ಚು ಹೆಚ್ಚು ಬಿಂಬಿಸಲಾಗಿತ್ತು. ಇನ್ನು ಕೂಡ ನಾವು ಮನೆಗಳಲ್ಲಿ ಸಂಜೆಯಾಗುತ್ತಿದ್ದಂತೆ ಸಾಲ ನೀಡುವುದು, ಹಾಗು ಉಗುರುಗಳನ್ನು ಕತ್ತರಿಸುವ ಪದ್ಧತಿ ಇಲ್ಲ, ಇದರಿಂದ ಹಣದ ತಾಪತ್ರೆ ಬರುತ್ತದೆ ಎನ್ನುವುದು ಒಂದು ನಂಬಿಕೆ ಕೂಡ ಇತ್ತು.

ಇನ್ನು ರಾತ್ರಿಯ ಸಮಯದಲ್ಲಿ ವಾಮಾಚಾರ ಮತ್ತು ಮತಾಚಾರಗಳು ಜಾಸ್ತಿ ನಡೆಯುವುದರಿಂದ ನಿಮ್ಮ ಉಗುರು ಅಂತಹ ಕೆಟ್ಟ ಕೆಲಸ ಮಾಡುವವರ ಕೈಗೆ ಸಿಕ್ಕರೆ ಅವರು ಅದನ್ನ ಹಿಡಿದುಕೊಂಡು ಮಾಟ ಮಾಡುತ್ತಾರೆ ಅನ್ನುವ ಕಾರಣಕ್ಕೆ ರಾತ್ರಿಯ ಸಮಯದಲ್ಲಿ ಉಗುರು ತಗೆಯಬಾರದು ಎಂದು ಪುರಾಣಗಳಲ್ಲಿ ಹೇಳಲಾಗಿದೆ. ಇನ್ನು ರಾತ್ರಿಯ ಸಮಯದಲ್ಲಿ ಉಗುರುಗಳನ್ನ ಕಟ್ ಮಾಡುವುದರಿಂದ ಸಂಸಾರದಲ್ಲಿ ತೊಂದರೆ ಮತ್ತು ಮನೆಯಲ್ಲಿ ಇರುವ ನೆಮ್ಮದಿ ಹಾಳಾಗುತ್ತದೆ ಎಂದು ಶಾಸ್ತ್ರಗಳಲ್ಲಿ ಉಲ್ಲೇಖ ಮಾಡಲಾಗಿದೆ. ಇನ್ನು ರಾತ್ರಿಯ ಸಮಯದಲ್ಲಿ ಉಗುರುಗಳನ್ನ ಕಟ್ ಮಾಡುವುದರಿಂದ ನಮ್ಮ ಮೇಲೆ ದುಷ್ಟ ಶಕ್ತಿಯ ಪ್ರಭಾವ ಬೀಳುವ ಸಾಧ್ಯತೆ ಇದೆ ಎಂದು ಹೇಳುತ್ತಿದೆ ಜ್ಯೋತಿಷ್ಯ ಶಾಸ್ತ್ರ

Comments are closed.