ಕರಾವಳಿ

ಮಾರ್ಚ್.6ರಂದು “ಇಂಗ್ಲಿಷ್” ತುಳು ಚಿತ್ರದ ಟ್ರೈಲರ್ ಬಿಡುಗಡೆ: ಸಂಜೆ 7.30ಕ್ಕೆ ಯುಟ್ಯುಬ್‌ನಲ್ಲಿ ಪ್ರಸಾರ

Pinterest LinkedIn Tumblr

ಮಂಗಳೂರು.ಮಾರ್ಚ್.04: ಅಕ್ಮೆ ಮೂವೀಸ್ ಇಂಟರ್‌ನ್ಯಾಷನಲ್ ಲಾಂಛನದಲ್ಲಿ ತಯಾರಾಗಿರುವ ದುಬೈಯ ಖ್ಯಾತ ಉದ್ಯಮಿ, ಮಾರ್ಚ್ – 22, ಕನ್ನಡ ಚಲನಚಿತ್ರದ ನಿರ್ಮಾಪರಾದ ಹರೀಶ್ ಶೇರಿಗಾರ್ ಮತ್ತು ಶ್ರೀಮತಿ ಶರ್ಮಿಳಾ ಶೇರಿಗಾರ್ ನಿರ್ಮಿಸುತ್ತಿರುವ ಕೆ. ಸೂರಜ್ ಶೆಟ್ಟಿ ನಿರ್ದೇಶನದ “ಇಂಗ್ಲಿಷ್” – ಎಂಕ್ಲೆಗ್ ಬರ್ಪುಜಿ Bro ತುಳು ಸಿನಿಮಾ ಇದೇ ಬರುವ ಮಾರ್ಚ್ 20ರಂದು ದಕ್ಷಿಣ ಕನ್ನಡ, ಉಡುಪಿ ಹಾಗೂ ಗಲ್ಫ್‌ ರಾಷ್ಟ್ರಗಳಲ್ಲಿ ಏಕಕಾಲದಲ್ಲಿ ( ಮಾರ್ಚ್,27ರಂದು ಬೆಂಗಳೂರು ಹಾಗೂ ಎಪ್ರಿಲ್ 5ರಂದು ಪುಣೆ ಮತ್ತು ಮುಂಬೈಯಲ್ಲಿ ) ತೆರೆಕಾಣಲಿದೆ.

ಚಿತ್ರದ ಟ್ರೈಲರ್ ಬಿಡುಗಡೆ ( TRAILER LAUNCH ) ಸಮಾರಂಭವು ಮಾರ್ಚ್ 6 ಶುಕ್ರವಾರದಂದು ಸಂಜೆ ಮಂಗಳೂರಿನಲ್ಲಿ ನಡೆಯಲಿದ್ದು, “ಇಂಗ್ಲಿಷ್” ತುಳು ಚಿತ್ರದಲ್ಲಿ ಪ್ರಥಮ ಬಾರಿಗೆ ನಟಿಸುವ ಮೂಲಕ ಕೋಸ್ಟಲ್ ವುಡ್‌ಗೆ ಎಂಟ್ರಿ ಕೊಟ್ಟಿರುವ ಚಿತ್ರರಂಗದ ಮೇರು ನಟ ಅನಂತ್ ನಾಗ್ ಅವರು ಟ್ರೈಲರ್ ಬಿಡುಗಡೆಗೊಳಿಸಲಿರುವರು.

ಮಾರ್ಚ್ 6 ಶುಕ್ರವಾರದಂದು ಸಂಜೆ 7.30ಕ್ಕೆ ಬಿಡುಗಡೆ ಸಮಾರಂಭದ ವಿಡೀಯೋ ಯುಟ್ಯುಬ್ ಚಾನೆಲ್‌ನಲ್ಲಿ ಪ್ರಸಾರಗೊಳ್ಳಲಿದ್ದು, ತುಳು ಚಿತ್ರ ಅಭಿಮಾನಿಗಳು, ಸಿನಿ ಪ್ರೀಯರು ಹೆಚ್ಚಿನ ಸಂಖ್ಯೆಯಲ್ಲಿ ಈ ವಿಡೀಯೋವನ್ನು ಸಬ್ಸ್‌ಕ್ರೈಬ್ ಮಾಡಿ ಲೈಕ್ ಮಾಡಿ.

ಈಗಾಗಲೇ ಅಕ್ಮೆ ಮೂವೀಸ್ ಇಂಟರ್‌ನ್ಯಾಷನಲ್ ಲಾಂಛನದಲ್ಲಿ ಹರೀಶ್ ಶೇರಿಗಾರ್ ಮತ್ತು ಶ್ರೀಮತಿ ಶರ್ಮಿಳಾ ಶೇರಿಗಾರ್ ನಿರ್ಮಾಣದಲ್ಲಿ ತಯಾರಾಗಿರುವ ಮಾರ್ಚ್ 22, ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ, ಯಾನ ಮೊದಲಾದ ಕನ್ನಡ ಸಿನಿಮಾ ಬಹಳ ಯಶಸ್ವಿ ಪ್ರದರ್ಶನ ಕಂಡಿದೆ. ಇದೀಗ ಇಂಗ್ಲಿಷ್ ತುಳು ಸಿನಿಮಾ ಕೋಸ್ಟಲ್ ವುಡ್‌ನಲ್ಲಿ ಬಾರಿ ಸದ್ದು ಮಾಡುತ್ತಿದ್ದು, ಚಿತ್ರ ಪ್ರೇಮಿಗಳಲ್ಲಿ ಬಹಳ ನಿರೀಕ್ಷೆ ಮೂಡಿಸಿದೆ.

Comments are closed.