ಕರಾವಳಿ

ಶಂಕರನಾರಾಯಣದಲ್ಲಿ ಅದ್ಧೂರಿಯ ಕಟ್ಟೆಪೂಜೆ- ರಾತ್ರಿ ನಡೆಯಿತು ಯಕ್ಷಗಾನ

Pinterest LinkedIn Tumblr

ಕುಂದಾಪುರ: ಇತಿಹಾಸ ಪ್ರಸಿದ್ಧವಾದ ಕುಂದಾಪುರದ ಶಂಕರನಾರಾಯಣ ದೇವಸ್ಥಾನದ ರಥೋತ್ಸವವು ಜ.17 ರಂದು ನಡೆಯಲಿದ್ದು ಇದರ ಪೂರ್ವಭಾವಿಯಾಗಿ ಸೋಮವಾರ ರಾತ್ರಿ ದೇವರು ಕಟ್ಟೆ ಪೂಜೆ ಅಥವಾ ಕಟ್ಟೆ ಓಲಗಕ್ಕೆ ಬರುವ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು.

ಶಂಕರನಾರಾಯಣ ಪೊಲೀಸ್ ಠಾಣೆ ಎದುರಿಗಿನ ಆವರಣದಲ್ಲೇ ಇರುವ ಶಂಕರನಾರಾಯಣ ದೇವರಿಗೆ ಸಂಬಂಧಿಸಿದ ಕಟ್ಟೆಗೆ ಶ್ರೀ ದೇವರ ಉತ್ಸವ ಮೆರವಣಿಗೆ ಆಗಮಿಸುತ್ತಿದ್ದಂತೆಯೇ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಸಹಿತ ನೂರಾರು ಮಂದಿ ಭಕ್ತರು ಆಗಮಿಸಿ ದೇವರ ದರ್ಶನ ಪಡೆದು ಪೂಜಾಕೈಂಕರ್ಯದಲ್ಲಿ ಭಾಗಿಯಾದರು. ಅಲ್ಲದೇ ಶ್ರೀ ಕ್ಷೇತ್ರ ಕಮಲಶಿಲೆ ಮೇಳದವರ ಯಕ್ಷಗಾನ ಪ್ರದರ್ಶನವನ್ನು ಕಣ್ತುಂಬಿಕೊಂಡರು.

ಕುಂದಾಪುರ ಉಪವಿಭಾಗದ ಎಎಸ್ಪಿ ಹರಿರಾಂ ಶಂಕರ್, ಕುಂದಾಪುರ ಸಿಪಿಐ ಗೋಪಿಕೃಷ್ಣ, ಶಂಕರನಾರಾಯಣ ಠಾಣೆ ಪಿಎಸ್ಐ ಶ್ರೀಧರ್ ನಾಯ್ಕ್ ಮೊದಲಾದವರು ಈ ಸಂದರ್ಭ ಇದ್ದರು.

Comments are closed.