ಕರಾವಳಿ

“ಗಬ್ಬರ್ ಸಿಂಗ್” ತುಳು ಚಿತ್ರಕ್ಕೆ ಸುರತ್ಕಲ್ ಸುತ್ತಮುತ್ತ ಬಿರುಸಿನ ಚಿತ್ರೀಕರಣ

Pinterest LinkedIn Tumblr

ಮಂಗಳೂರು: ಟೈಟಲ್, ಪೋಸ್ಟರ್‌ನಿಂದಲೇ ಕುತೂಹಲ ಕೆರಳಿಸಿರೋ ಮುತ್ತು ಗೋಪಾಲ ಫಿಲಂಸ್ ರವರ ಕಡಂದಲೆ ಸುರೇಶ್ ಭಂಡಾರಿ ಅರ್ಪಿಸುವ ಬಾರ್ಕೂರು ಸತೀಶ್ ಪೂಜಾರಿ ನಿರ್ಮಾಣದ “ಗಬ್ಬರ್ ಸಿಂಗ್” ತುಳುಚಿತ್ರದ ಚಿತ್ರೀಕರಣ ಸುರತ್ಕಲ್ ಸುತ್ತಮುತ್ತ ಬಿರುಸಿನಿಂದ ನಡೆಯುತ್ತಿದೆ.

ಚಿತ್ರದ ಪೊಲೀಸ್ ಠಾಣೆಯ ಸನ್ನಿವೇಶವನ್ನು ಹೊಸಬೆಟ್ಟು ಬಳಿ ಚಿತ್ರೀಕರಿಸಲಾಗುತ್ತಿದ್ದು ನಾಯಕ ನಟ ಸೌರಭ್ ಭಂಡಾರಿ, ಹಾಸ್ಯನಟ ಅರವಿಂದ್ ಬೋಳಾರ್ ಪಾಲ್ಗೊಂಡಿದ್ದಾರೆ.

ಚಿತ್ರದಲ್ಲಿ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ಬೋಳಾರ್ ಚಿತ್ರದ ಬಗ್ಗೆ ಸಾಕಷ್ಟು ಥ್ರಿಲ್ ಆಗಿದ್ದಾರೆ. ಸಮಾಜದಲ್ಲಿ ಅಶಾಂತಿ ಸೃಷ್ಟಿಯಾದಾಗ ಮತ್ತೆ ಶಾಂತಿ ನೆಲೆಸುವಂತೆ ಮಾಡುವ ಖಡಕ್ ಅಧಿಕಾರಿ ಪಾತ್ರದಲ್ಲಿ ಸೌರಭ್ ಕಾಣಿಸಿಕೊಂಡಿದ್ದಾರೆ.

ಗಬ್ಬರ್ ಸಿಂಗ್ ಆಕ್ಷನ್ ಥ್ರಿಲ್ಲರ್ ಫ್ಯಾಮಿಲಿ ಓರಿಯೆಂಟೆಡ್ ಫಿಲ್ಮ್ ಆಗಿದ್ದು ಚಿತ್ರಕ್ಕೆ ಒಂದೇ ಶೆಡ್ಯೂಲ್ ನಲ್ಲಿ ಚಿತ್ರೀಕರಣ ನಡೆಯಲಿದೆ. ಮುಂದಿನ ಏಪ್ರಿಲ್ ಹೊತ್ತಿಗೆ ತುಳುವರ ಮುಂದೆ ಹಾಜರಾಗುವ ಇರಾದೆ ಚಿತ್ರತಂಡಕ್ಕಿದೆ.  ಸಿನಿಮಾಕ್ಕೆ ಕತೆ, ಚಿತ್ರಕತೆ, ನಿರ್ದೇಶನದ ಜವಾಬ್ದಾರಿಯನ್ನು ಪ್ರದೀಪ್ ಬೈಕಾಡಿ ವಹಿಸಿದ್ದಾರೆ. ಮಧು ಸುರತ್ಕಲ್ ಸಂಭಾಷಣೆ ರಚಿಸಿದ್ದಾರೆ. ಸಿನಿಮಾದಲ್ಲಿ ನಾಯಕಿಯಾಗಿ ನವ್ಯ ಪೂಜಾರಿ ಅಭಿನಯಿಸಲಿದ್ದಾರೆ.

ಮುಖ್ಯ ಪಾತ್ರ ದಲ್ಲಿ ನವೀನ್ ಡಿ ಪಡೀಲ್, ಭೋಜರಾಜ ವಾಮಂಜೂರು, ಪ್ರಸನ್ನ ಶೆಟ್ಟಿ ಬೈಲೂರು, ಉಮೇಶ್ ಮಿಜಾರ್, ಸತೀಶ್ ಬಂದಲೆ, ಗಿರೀಶ್ ಎಂ. ಶೆಟ್ಟಿ ಕಟೀಲ್, ಪ್ರಜ್ವಲ್ ಪ್ರಕಾಶ್, ಶಶಿ ಬೆಳ್ಳಾಯರು, ನರೇಶ್ ಕುಮಾರ್ ಸಸಿಹಿತ್ಲು, ನರೇಂದ್ರ
ಕೆರೆಕಾಡು, ಉದಯ, ಸುನಿಲ್ ಕೃಷ್ಣಾಪುರ, ಯಶವಂತ ಕೃಷ್ಣಾಪುರ, ಚಂದ್ರಹಾಸ ಶೆಟ್ಟಿ ಮಾಣಿ, ಶಿಲ್ಪಾ ಶೆಟ್ಟಿ, ಮೋಹನ್ ಕೊಪ್ಪಳ, ಶೇಖರ್ ಭಂಡಾರಿ ಕಾರ್ಕಳ, ಮೊದಲಾದವರಿದ್ದಾರೆ.

ಹನಿರ್ದೇಶನ: ರೋಶನ್ ಮೈಸೂರು, ಛಾಯಾಗ್ರಹಣ: ರವಿ ಸುವರ್ಣ, ಸಂಕಲನ ಹರೀಶ್ ಕೊಟ್ಪಾಡಿ, ಸಂಗೀತ: ಡಾಲ್ಪಿ ಕೊಳಲಗಿರಿ. ಕಲೆ: ಕೇಶವ ಸುವರ್ಣ, ಮೇಕಪ್ ಪ್ರದೀಪ್, ವಸ್ತ್ರಾಲಂಕಾರ ಶರತ್ ಸಿನಿಮಾಕ್ಕೆ ನರೇಶ್ ಕುಮಾರ್ ಸಸಿಹಿತ್ಲು, ಆರ್.ಎನ್. ಶೆಟ್ಟಿ ಕಳವಾರು ಗೀತಾ ಸಾಹಿತ್ಯ ಒದಗಿಸಿ ದ್ದಾರೆ. ಸಿನಿಮಾಕ್ಕೆ ಮಂಗಳೂರು, ಸುರತ್ಕಲ್ ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ.

ಅಂಬರ್ ಕ್ಯಾಟರರ್ಸ್ ತುಳು ಸಿನಿಮಾದ ಮೂಲಕ ಕೋಸ್ಟಲ್ ವುಡ್‍ಗೆ ಭರ್ಜರಿಯಾಗಿ ಎಂಟ್ರಿ ಪಡೆದಿದ್ದ ಉದ್ಯಮಿ ಕಡಂದಲೆ ಸುರೇಶ್ ಭಂಡಾರಿಯವರ ಪುತ್ರ ಸೌರಭ ಭಂಡಾರಿ ಈ ಚಿತ್ರದ ಮೂಲಕ ಮತ್ತೆ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

_ಶಶಿ ಬೆಳ್ಳಾಯರು

Comments are closed.