ರಾಷ್ಟ್ರೀಯ

ಈ ಬ್ರಷ್ ಬಳಸಿದರೆ ಕೇವಲ 50 ಸೆಕೆಂಡ್​ಗಳಲ್ಲಿ ಎಲ್ಲ ಬದಿಯಿಂದಲೂ ಹಲ್ಲುಗಳು ಸ್ವಚ್ಛ.

Pinterest LinkedIn Tumblr

ಬೆಳಗ್ಗೆ ಎದ್ದು ಹಲ್ಲುಜ್ಜುವ ಕೆಲಸ ಕೆಲವರಿಗೆ ತುಸು ತ್ರಾಸದಾಯಕವಾದುದು. ಇನ್ನು ಹಲ್ಲುಜ್ಜಿದರೂ ಸರಿಯಾಗಿ ಕ್ಲೀನ್ ಆಗತ್ತೆ ಎಂದೇನೂ ಇಲ್ಲ. ಇದನ್ನು ಗಮನದಲ್ಲಿರಿಸಿಕೊಂಡು ಹಲವು ಮಾದರಿಯ ಬ್ರಷ್​ಗಳು ಮಾರುಕಟ್ಟೆ ಬಂದಿವೆ. ಕೆಲವು ಇಲೆಕ್ಟ್ರಿಕ್​ ಬ್ರಷ್​ಗಳಂತೂ 10,20 ಅಥವಾ 30 ಸೆಕೆಂಡ್​ಗಳಲ್ಲಿ ಎಲ್ಲ ಹಲ್ಲುಗಳನ್ನೂ ಕ್ಲೀನ್ ಮಾಡುತ್ತವೆ ಎಂಬ ಜಾಹೀರಾತುಗಳನ್ನೂ ಕಾಣಬಹುದು.

ಆದರೆ, 50 ಸೆಕೆಂಡ್​ನಲ್ಲಿ ಹಲ್ಲುಗಳನ್ನು ಎಲ್ಲ ಬದಿಯಿಂದಲೂ ಹಲ್ಲುಗಳನ್ನು ಸ್ವಚ್ಛಗೊಳಿಸುವ ಬ್ರಷ್​ ಸ್ವಲ್ಪ ಭಿನ್ನವಾಗಿದೆ. ಇದಕ್ಕೆ ಸಂಬಂಧಿಸಿದ ವೆಬ್​ಸೈಟ್​ನಲ್ಲಿ ಪ್ರಕಟಿಸಿರುವ ಮಾಹಿತಿ ಪ್ರಕಾರ, ಸಾಮಾನ್ಯ ಬ್ರಷ್​ನಲ್ಲಿ ಹಲ್ಲು ಉಜ್ಜುವುದಕ್ಕೆ 180 ಸೆಕೆಂಡ್ ಬೇಕಾಗುತ್ತದೆ. ಮೂರು ತಲೆಯ ಈ ಬ್ರಷ್ ಬಳಸಿದರೆ ಕೇವಲ 50 ಸೆಕೆಂಡ್​ಗಳಲ್ಲಿ ಎಲ್ಲ ಬದಿಯಿಂದಲೂ ಹಲ್ಲುಗಳನ್ನು ಸ್ವಚ್ಛ ಗೊಳಿಸಬಹುದು. ಇದು ಕೂಡ ಇಲೆಕ್ಟ್ರಿಕ್ ಬ್ರಷ್​ ಆಗಿದ್ದು, ಇತರೆ ಇಲೆಕ್ಟ್ರಿಕ್ ಬ್ರಷ್​ಗಳಿಗಿಂತ ಹೇಗೆ ಭಿನ್ನ ಎಂಬುದನ್ನೂ ಅದರಲ್ಲಿ ವಿವರಿಸಲಾಗಿದೆ.

ಈ ಬ್ರಷ್ ಇನ್ನೂ ಪ್ರಾಯೋಗಿಕ ಹಂತದಲ್ಲಿದೆ. ಇದು ಇಲೆಕ್ಟ್ರಿಕ್ ಬ್ರಷ್ ಆಗಿದ್ದರೂ, ಸಾಮಾನ್ಯ ಬ್ರಷ್​ನಂತೆಯೂ ಬಳಸಬಹುದು. ಆದರೆ, ಸಾಮಾನ್ಯ ಬ್ರಷ್ ಬಳಸುವಂತೆ ಎಲ್ಲ ಬದಿಗೂ ತಿರುಗಿಸಿ ಈ ಬ್ರಷನ್ನು ಬಳಸಬೇಕಾಗಿಲ್ಲ. ಸಾಮಾನ್ಯ ಎಂಬ ಒಕ್ಕಣೆಯೂ ಇದೆ. ಈ ಬ್ರಷ್​ ಬಗ್ಗೆ ಕುತೂಹಲ ಸೃಷ್ಟಿಯಾಗಿದ್ದು, ಯೂಟ್ಯೂಬ್​ನಲ್ಲಿ ಸಾಕಷ್ಟು ವಿಡಿಯೋಗಳು ಹರಿದಾಡುತ್ತಿವೆ.

Comments are closed.