ರಾಷ್ಟ್ರೀಯ

ಪ್ರಸಿದ್ಧ ಮಲಯಾಳಂ ಕವಿ ಅಕ್ಕಿತಂ ಅಚ್ಯುತನ್ ನಂಬೂದಿರಿ 55ನೆ ಜ್ಞಾನಪೀಠ ಪುರಸ್ಕಾರಕ್ಕೆ ಆಯ್ಕೆ

Pinterest LinkedIn Tumblr

ಹೊಸದಿಲ್ಲಿ : ‘ಅಕ್ಕಿತಂ’ ಎಂದು ಗುರುತಿಸಲ್ಪಡುವ ಪ್ರಸಿದ್ಧ ಮಲಯಾಳಂ ಕವಿ ಅಕ್ಕಿತಂ ಅಚ್ಯುತನ್ ನಂಬೂದಿರಿ 55ನೆ ಜ್ಞಾನಪೀಠ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ. ಅವರಿಗೆ 93 ವರ್ಷ ವಯಸ್ಸಾಗಿದೆ.

11 ಲಕ್ಷ ರೂ. ನಗದು ಬಹುಮಾನವಿರುವ ಪ್ರತಿಷ್ಠಿತ ಪುರಸ್ಕಾರಕ್ಕೆ ಆಯ್ಕೆಗಾರರ ಸಮಿತಿಯು ಅಕ್ಕಿತಂ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿತು.

ಜ್ಞಾನಪೀಠ ಪುರಸ್ಕಾರಕ್ಕೆ ಪಾತ್ರರಾದ 6ನೆ ಮಲಯಾಳಂ ಕವಿಯಾಗಿದ್ದಾರೆ ಅಕ್ಕಿತಂ. ಇದಕ್ಕೂ ಮೊದಲು ಜಿ. ಶಂಕರ ಕುರುಪ್, ತಕಾಳಿ, ಎಸ್.ಕೆ. ಪೊಟ್ಟೆಕಟ್, ಎಂಟಿ ವಾಸುದೇವನ್ ನಾಯರ್ ಮತ್ತು ಒ.ಎನ್.ವಿ ಕುರುಪ್ ಈ ಪುರಸ್ಕಾರ ಗಳಿಸಿದ್ದರು.

Comments are closed.