ರಾಷ್ಟ್ರೀಯ

ಮೋದಿ ಪ್ರಮಾಣ ವಚನ ಸಮಾರಂಭ : ನೂತನ ಸಂಸದ ಕ್ಯಾ| ಬ್ರಿಜೇಶ್ ಚೌಟರಿಂದ ಅಭಿನಂದನೆ

Pinterest LinkedIn Tumblr

ಭಾರತದ ಪ್ರಧಾನಿಯಾಗಿ ಮೂರನೇ ಬಾರಿಗೆ ಅಯ್ಕೆಯಾಗಿ ಪ್ರಮಾಣ ವಚನ ಸ್ವಿಕರಿಸಿದ ಶ್ರೀ ನರೇಂದ್ರ ದಾಮೋದರದಾಸ್ ಮೋದಿಯವರಿಗೆ ದ.ಕ ಜಿಲ್ಲೆಯ ನೂತನ ಸಂಸದರಾಗಿ ಮೋದಲ ಬಾರಿಗೆ ಅಯ್ಕೆಯಾದ ಶ್ರೀ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಅಭಿನಂದನೆ ಸಲ್ಲಿಸಿದ್ದಾರೆ. ಸನ್ಮಾನ್ಯ ನರೇಂದ್ರ ಮೋದಿಯವರನ್ನು ಮೂರನೇ ಬಾರಿ ಪ್ರಧಾನಿಯನ್ನಾಗಿ ಮಾಡುವ ಮೂಲಕ ಭಾರತವು ಇತಿಹಾಸವನ್ನು ನಿರ್ಮಿಸಿದೆ ಎಂದವರು ತಮ್ಮ ಅಭಿನಂದನ ನುಡಿಯಲ್ಲಿ ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯು ಸಾಧ್ಯತೆಗಳ ಸಾಗರವಾಗಿದೆ. ನಮ್ಮ ಜಿಲ್ಲೆಯು ಕರ್ನಾಟಕದಲ್ಲಿ ನಂಬರ್ ವನ್ ಜಿಲ್ಲೆಯಾಗಿ ಹಾಗೂ ದೇಶದ ಭೂಪಟದಲ್ಲಿ ಅಗ್ರಸ್ಥಾನಕ್ಕೆ ಏರಲು ನಿಮ್ಮೆಲ್ಲರ ಸಹಕಾರವನ್ನು ಬಯಸುತ್ತೇನೆ ಎಂದು ಚೌಟ ಅವರು ವಿನಂತಿಸಿದ್ದಾರೆ.

Comments are closed.