ಕರಾವಳಿ

ಮೊಳಹಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘದ ನೂತನ ಕಟ್ಟಡ ‘ಸಹಕಾರ ಸಾನಿಧ್ಯ’ ಉದ್ಘಾಟನೆ | ಸಹಕಾರಿ ಕ್ಷೇತ್ರ ಕಲ್ಪವೃಕ್ಷವಿದ್ದಂತೆ: ಡಾ. ಎಂ.ಎನ್. ರಾಜೇಂದ್ರ ಕುಮಾರ್

Pinterest LinkedIn Tumblr

ಕುಂದಾಪುರ: ರೈತರಿಗೆ ಹತ್ತು ಹಲವು ಸವಲತ್ತು ನೀಡುವ ಸಹಕಾರಿ ಕ್ಷೇತ್ರ ಕಲ್ಪವೃಕ್ಷವಿದ್ದಂತೆ ಎಂದು ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಹೇಳಿದರು.

ಅವರು ಬಿದ್ಕಲ್ ಕಟ್ಟೆಯಲ್ಲಿ ನೂತನವಾಗಿ ನಿರ್ಮಾಣಗೊಂಡ ಮೊಳಹಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘದ ನೂತನ ಕಟ್ಟಡ ‘ಸಹಕಾರ ಸಾನಿಧ್ಯ’ ಉದ್ಘಾಟಿಸಿ ಮಾತನಾಡಿದರು.

ಸೇವೆ ಮಾಡಲು ಸಹಕಾರಿ ಕ್ಷೇತ್ರ ಬೇಕು. ಆದರೆ ದುಡಿಮೆಗೆ ವಾಣಿಜ್ಯ ಬ್ಯಾಂಕಿಂಗ್ ಬೇಕು ಎಂಬ ಸ್ಥಿತಿಯಿದ್ದು ಸರಕಾರ ಕ್ಷೇತ್ರದ ಠೇವಣಿ ಸಹಕಾರಿ ರಂಗದಲ್ಲಿ ಇಡುವ ಇಚ್ಚಾಶಕ್ತಿ ತೋರಬೇಕು ಎಂದರು.

ಕುಂದಾಪುರ ಶಾಸಕ ಎ.‌ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ಸಹಕಾರಿ ಸಂಘಗಳು ಉಭಯ ಜಿಲ್ಲೆಗಳಲ್ಲಿ ಕೃಷಿಕರ ಸಹಿತ ಸಾರ್ವಜನಿಕರ ಪರವಾದ ಕೆಲಸ ಮಾಡುತ್ತಿದೆ ಎಂದರು.

ಭದ್ರತಾಕೊಠಡಿಯನ್ನು ವಿಧಾನ ಪರಿಷತ್ತಿನ ಮಾಜಿ ಸಭಾಪತಿ ಕೆ. ಪ್ರತಾಪಚಂದ್ರ ಶೆಟ್ಟಿ ಉದ್ಘಾಟಿಸಿದರು. ಗೋದಾಮನ್ನು ಉಡುಪಿ ಜಿಲ್ಲಾ ಸಹಕಾರ ಸಂಘಗಳ ಉಪನಿಬಂದಕರಾದ ಲಾವಣ್ಯ ಕೆ.ಆರ್ ಉದ್ಘಾಟಿಸಿದರು. ನವೀಕೃತ ಶಿವರಾವ ಪ್ರತಿಮೆಯನ್ನು ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರಾದ ಜಯಕರ ಶೆಟ್ಟಿ ಇಂದ್ರಾಳಿ ನೆರವೇರಿಸಿದರು.

ಎಂ.ಮಹೇಶ್ ಹೆಗ್ಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು.

ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕರಾದ ಎಸ್. ರಾಜು ಪೂಜಾರಿ, ಭಾಸ್ಕರ ಕೋಟ್ಯಾನ್, ಅಶೋಕ್ ಕುಮಾರ್ ಶೆಟ್ಟಿ, ಮೊನಪ್ಪ ಶೆಟ್ಟಿ ಎಕ್ಕಾರು, ಜಯರಾಜ್ ರೈ, ಕುಂದಾಪುರ ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಅರುಣ್ ಕುಮಾರ ಎಸ್.ವಿ., ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಕುಂದಾಪುರ ಇದರ ಅಧ್ಯಕ್ಷರಾದ ಮಲ್ಯಾಡಿ ಶಿವರಾಮ್ ಶೆಟ್ಟಿ, ಕುಂದಾಪುರ ತಾಲೂಕು ಕೃಷಿ ಉತ್ಪನ್ನ ಸಹಕಾರ ಮಾರಾಟ ಸಂಘ ಕುಂದಾಪುರ ಇದರ ಅಧ್ಯಕ್ಷರಾದ ಎಚ್. ಹರಿಪ್ರಸಾದ ಶೆಟ್ಟಿ, ಮೊಳಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎಂ. ದಿನೇಶ ಹೆಗ್ಡೆ, ಮೊಳಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ಎಂ. ಚಂದ್ರಶೇಖರ ಶೆಟ್ಟಿ, ಹೊಂಬಾಡಿ-ಮಂಡಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯಂತಿ ಶೆಟ್ಟಿ, ಹಾರ್ದಳ್ಳಿ-ಮಂಡಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷೆ ದೀಪಾ ಆರ್. ಶೆಟ್ಟಿ ಇದ್ದರು.

ಸಂಘದ ಉಪಾಧ್ಯಕ್ಷರಾದ ಸಿ.ಜಗನ್ನಾಥ ಶೆಟ್ಟಿ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪಾರ್ವತಿ ಎಂ. ನಿರ್ದೇಶಕರಾದ ಎಚ್.ದೀನಪಾಲ ಶೆಟ್ಟಿ, ಎಚ್.ಹರಿಪ್ರಸಾದ್ ಶೆಟ್ಟಿ, ಎಂ.ದಿನೇಶ್ ಹೆಗ್ಡೆ, ಲವಕರ ಶೆಟ್ಟಿ, ಎಚ್.ಬಾಲಕೃಷ್ಣ ಹೆಗ್ಡೆ, ಪ್ರಶಾಂತ, ಅನಿತ್ ಕುಮಾರ್ ಶೆಟ್ಟಿ, ಉಷಾ ಶೆಟ್ಟಿ, ಚೈತ್ರಾ ಅಡಪ, ಗಣೇಶ, ರಾಜು, ಉದಯ ಕುಲಾಲ್, ಸಂದೀಪ್ ಕುಮಾರ್ ಶೆಟ್ಟಿ, ಉಪಸ್ಥಿತರಿದ್ದರು.

ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷರಾದ ಡಾ.ಎಂ.ಎನ್ ರಾಜೇಂದ್ರ ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಸಂಘದ ಮಾಜಿ ಅಧ್ಯಕ್ಷರು, ನಿವೃತ್ತ ಸಿಇಓ, ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು. ಶೈಕ್ಷಣಿಕವಾಗಿ ಸಾಧನೆಗೈದವರನ್ನು ಗೌರವಿಸಲಾಯಿತು. ಕಟ್ಟಡ ಸ್ಥಳದಾನಿ, ಗುತ್ತಿಗೆದಾರರು, ಇಂಜಿನಿಯರ್ ಅವರನ್ನು ಗುರುತಿಸಿ, ಗೌರವಿಸಲಾಯಿತು.

ಅಶೋಕ ಸಾರಂಗ ರೈತಗೀತೆ ಹಾಡಿದರು. ಅನುಷಾ ಸನ್ಮಾನಿತರ ಪರಿಚಯಿಸಿದರು. ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ ನಿರೂಪಿಸಿ, ಸಂಘದ ನಿರ್ದೇಶಕ ದೀನಪಾಲ ಶೆಟ್ಟಿ ವಂದಿಸಿದರು.

Comments are closed.