ಕರಾವಳಿ

ಬೆಳ್ಳಗೆ ಕರ ನೋಡಿಕೊಂಡು ಇದನ್ನ ಹೇಳಿಕೊಂಡರೆ ದಿನ ಪೂರ್ತಿ ಅದೃಷ್ಟ ನಿಮ್ಮದಾಗಿರುತ್ತೆ..!

Pinterest LinkedIn Tumblr

ಕರ ಎಂದರೆ ಕೈಗಳು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರಬಹುದು ಬೆಳಿಗ್ಗೆ ಎದ್ದ ತಕ್ಷಣ ಎರಡು ಕೈಗಳನ್ನು ಉಜ್ಜಿಕೊಂಡು ಕೈಗಳ ಬೊಗಸೆಯನ್ನು ಮಾಡಿ ಅದರಲ್ಲಿ ಮನಸ್ಸನ್ನು ಏಕಾಗ್ರತೆಗೊಳಿಸಿ ಕೈಗಳ ದರ್ಶನವನ್ನು ಮಾಡುವುದು ನಂತರ ಕರಾಗ್ರೇ ವಸತೇ ಲಕ್ಷ್ಮೀಃ ಕರಮಧ್ಯೇ ಸರಸ್ವತೀ. ಕರಮೂಲೇ ಸ್ಥಿತೇ ಗೌರೀ ಪ್ರಭಾತೇ ಕರದರ್ಶನಮ್. ಎಂಬ ಮಂತ್ರವನ್ನು ಹೇಳಬೇಕು. ನಮ್ಮ ಶಾಸ್ತ್ರದಲ್ಲಿ ಹೇಳಿರುವ ಪ್ರಕಾರ ನಮ್ಮ ಹಿಂದೂಗಳು ಈ ಮಂತ್ರ ಬೆಳ್ಳಗೆ ಕರ ನೋಡಿಕೊಂಡು ಹೇಳಿಕೊಂಡರೆ ಇಡೀ ದಿನ ಪೂರ್ತಿ ಅದೃಷ್ಟ ಇರುತ್ತದೆ ಅಂತೆ. ಸಾಕಷ್ಟು ಕೆಲಸ ಕಾರ್ಯಗಳು ವೇಗ ಪಡೆದುಕೊಳ್ಳುತ್ತದೆ ಎಂಬುದು ಸಾಬೀತಾಗಿದೆ. ಈ ಮಂತ್ರದ ಅರ್ಥವನ್ನು ತಿಳಿಯೋಣ ಬನ್ನಿ

ಕೈಗಳ ಆಗ್ರ ಮುಂಭಾಗ ಭಾಗದಲ್ಲಿ ಲಕ್ಷ್ಮೀಯು ವಾಸಿಸುತ್ತಾಳೆ. ಕೈಗಳ ಮಧ್ಯಭಾಗದಲ್ಲಿ ಸರಸ್ವತೀಯು ವಾಸಿಸುತ್ತಾಳೆ ಮತ್ತು ಮಣಿಗಂಟಿನಲ್ಲಿ ಗೌರಿಯು ವಾಸವಾಗಿರುತ್ತಾಳೆ. ಆದುದರಿಂದಲೇ ಪ್ರಾತಃಕಾಲದಲ್ಲಿ ಎದ್ದು ಮೊದಲಿಗೆ ಕೈಗಳ ಅಂದರೆ ದೇವತೆಗಳ ದರ್ಶನವನ್ನು ಪಡೆಯಬೇಕು. ಅಪವಾದ ಕರಮೂಲೇ ತು ಗೋವಿಂದಃ ಬ್ರಹ್ಮಃ ಪ್ರಾತಃಕಾಲದಲ್ಲಿ ಎದ್ದು ಕರದರ್ಶನ ಅಂದರೆ ಕೈಗಳನ್ನು ನೋಡಿ ‘ಕರಾಗ್ರೇ ವಸತೇಲಕ್ಷ್ಮೀಃ ಶ್ಲೋಕವನ್ನು ಪಠಿಸುವುದು ಎಂದರೆ ತನ್ನಲ್ಲಿರುವ ಈಶ್ವರನ ದರ್ಶನ ಪಡೆದುಕೊಂಡಂತೆ ಹಿಂದೂ ಧರ್ಮವು ಅಯಂ ಆತ್ಮಾ ಬ್ರಹ್ಮ ಅಂದರೆ ಈ ಆತ್ಮವೇ ಬ್ರಹ್ಮವಾಗಿದೆ ಎಂಬುವುದನ್ನು ಇದು ಕಲಿಸುತ್ತದೆ. ಪ್ರಾತಃಕಾಲ ಎದ್ದ ನಂತರ ಕರದರ್ಶನ ಪಡೆಯುತ್ತಾ ಕರಾಗ್ರೇ ವಸತೇ ಲಕ್ಷ್ಮೀಃ ಎಂಬ ಶ್ಲೋಕವನ್ನು ಪಠಿಸುವುದೆಂದರೆ ತನ್ನಲ್ಲಿರುವ ಶಿವನನ್ನು ನೋಡುವುದು.

ಎರಡೂ ಕೈಗಳಿಂದ ಬೊಗಸೆಯನ್ನು ಮಾಡುವುದರಿಂದ ಬ್ರಹ್ಮಮುದ್ರೆಯು ನಿರ್ಮಾಣವಾಗುತ್ತದೆ.ಇದು ದೇಹದಲ್ಲಿನ ಸುಷುಮ್ನಾನಾಡಿಯು ಕಾರ್ಯನಿರತವಾಗುತ್ತದೆ ಮತ್ತು ಅದರಿಂದ ರಾತ್ರಿಯ ಸಮಯ ಮಾಡಿದ ನಿದ್ರೆಯಿಂದ ದೇಹದಲ್ಲಿ ನಿರ್ಮಾಣವಾದ ತಮೋಗುಣವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಕೈಗಳಿಂದ ಬೊಗಸೆಯನ್ನು ಮಾಡಿ ಅದರಲ್ಲಿ ಮನಸ್ಸನ್ನು ಏಕಾಗ್ರತೆಗೊಳಿಸಿ ಕರಾಗ್ರೇ ವಸತೇ ಲಕ್ಷ್ಮೀಃ ಈ ಶ್ಲೋಕವನ್ನು ಹೇಳುವುದರಿಂದ ಬ್ರಹ್ಮಾಂಡದಲ್ಲಿನ ದೇವತೆಗಳ ಲಹರಿಗಳು ಬೊಗಸೆಯತ್ತ ಆಕರ್ಷಿತವಾಗುತ್ತವೆ ಎಂಬ ನಂಬಿಕೆ. ಹೀಗೆ ಆಕರ್ಷಿತಗೊಂಡ ದೇವತ್ವರೂಪಿ ಲಹರಿಗಳು ಬೊಗಸೆಯಲ್ಲಿಯೇ ಘನೀಕೃತವಾಗುತ್ತವೆ ಮತ್ತು ಬೊಗಸೆಯ ರೂಪದಲ್ಲಿ ತಯಾರಾದ ಟೊಳ್ಳಿನಲ್ಲಿ ಆಕಾಶದ ವ್ಯಾಪಕತ್ವವನ್ನು ಪಡೆದುಕೊಂಡು ಅಲ್ಲಿಯೇ ಸುತ್ತಾಡುತ್ತಿರುತ್ತವೆ.

ನಾವು ಬೆಳಿಗ್ಗೆ ಎದ್ದು ದೇವರನ್ನು ನೋಡಲು ದೇವರ ಫೋಟೋವನ್ನು ಹುಡುಕಾಡುವ ಬದಲು ನಮ್ಮ ಕೈಗಳಲ್ಲೇ ಇರುವ ದೇವತೆಗಳನ್ನು ನೋಡುವುದು ಒಳ್ಳೆಯದು ಇದರಿಂದ ನಮ್ಮ ಮನಸ್ಸು ಕೂಡ ವಿಶಾಲವಾಗುತ್ತದೆ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಇಂದಿನ ದಿನ ಅದ ಎಲ್ಲ ಕೆಟ್ಟ ಯೋಚನೆಗಳು ನಮ್ಮಿಂದ ದೂರ ಹೋಗಿ ಮನಸ್ಸು ರಿಲ್ಯಾಕ್ಸ್ ಆಗುತ್ತದೆ. ಜೊತೆಗೆ ನಮಲ್ಲಿರುವ ನೆಗೆಟಿವ್ ಅಂಶಗಳು ದೂರವಾಗಿ ಪಾಸಿಟಿವ್ ಅಂಶಗಳು ನಮ್ಮನ್ನು ಸೇರುತ್ತದೆ. ಹಾಗಾಗಿ ಇನ್ನು ಮುಂದೆ ಬೆಳಿಗ್ಗೆ ಎದ್ದ ತಕ್ಷಣ ಫೋಟೋವನ್ನು ಹುಡುಕುವ ಬದಲು ನಿಮ್ಮ ಕೈಗಳನ್ನು ಬೊಗಸೆಯ ರೀತಿಯಲ್ಲಿ ಮಾಡಿಕೊಂಡು ನಿಮ್ಮ ಕರ ದರ್ಶನವನ್ನು ಮಾಡಿ.

ಇದರಿಂದ ಎಲ್ಲ ದೇವತೆಗಳ ಅನುಗ್ರಹ ನಮಗೆ ಸಿಗುತ್ತದೆ ಹಾಗೂ ಆ ದಿನದ ಎಲ್ಲ ಕೆಲಸ ಕಾರ್ಯಗಳು ಸುಗಮವಾಗಿ ಏನೇ ಕಷ್ಟಗಳು ಆಗದೆ ಕೆಲಸಗಳು ಆಗುತ್ತವೇ ಹಾಗೂ ಆ ದಿನ ತುಂಬಾ ಸುಂದರವಾಗಿ ಸಂತೋಷವಾಗಿ ಇರುತ್ತದೆ. ಇದರ ಜೊತೆಗೆ ಇನ್ನೊಂದು ಮುಖ್ಯವಾದ ಅಂಶ ತಿಳಿಯಬೇಕು ಅದು ಏನೆಂದರೆ ಕರ ದರ್ಶನ ಮಾಡಬೇಕು ಎಂದು ಬೆಳಿಗ್ಗೆ ಎದ್ದು ಕೈಗಳನ್ನು ನೋಡಿ ಬಿಡುವುದಲ್ಲ ಭಕ್ತಿಯಿಂದ ಮನಸ್ಸನ್ನು ಏಕಾಗ್ರತೆಯಲ್ಲಿ ಇಟ್ಟುಕೊಂಡು ಕೈಗಳ ದರ್ಶನ ಮಾಡಿ ಮಂತ್ರ ಪಠಿಸಿ ದೇವರನ್ನು ನೆನೆಯಬೇಕು ಹೀಗೆ ಮಾಡಿದರೆ ನಮಗೆ ದೇವರ ಕೃಪೆ ಸಿಗುತ್ತದೆ.

Comments are closed.