ಕರಾವಳಿ

ಪ್ರತಿ ದಿನ ಹಸಿ ಈರುಳ್ಳಿ ತಿನ್ನುವುದರಿಂದ ಆಗುವ ಪ್ರಯೋಜನ ಬಲ್ಲಿರಾ….?

Pinterest LinkedIn Tumblr

ನಮಗೆ ಈರುಳ್ಳಿ ಸುಲಭವಾಗಿ ಸಿಗುವಂತಹ ಮನೆ ಮದ್ದು ಎಂಬುದಾಗಿ ಹೇಳ ಬಹುದು ಕೆಲವ್ರು ಹಸಿ ಈರುಳ್ಳಿಯನ್ನು ತಿನ್ನಲು ಇಷ್ಟ ಪಡುವುದಿಲ್ಲ ಆದರೆ ಇದರ ಪ್ರಯೋಜನ ಗೊತ್ತಾದ ಮೇಲೆ ತಿನ್ನದೇ ಇರೋದಿಲ್ಲ ಅನ್ಸತ್ತೆ.

ಹಸಿ ಈರುಳ್ಳಿಯನ್ನು ನಿತ್ಯವೂ ಸೇವಿಸುವುದು ಒಳ್ಳೆಯದು.ಹಾಲುಣಿಸುತ್ತಿರುವ ತಾಯಂದಿರ ಸ್ತನದಲ್ಲಿ ಹಾಲನ್ನು ವೃದ್ಧಿಸುತ್ತದೆ ಸ್ತನದಲ್ಲಿ ಹಾಲಿನ ಉತ್ಪತ್ತಿಯನ್ನು ಹಸಿ ಈರುಳ್ಳಿ ಹೆಚ್ಚಿಸಲಿದೆ.

ರಕ್ತದೊತ್ತಡವನ್ನು ನಿರ್ವಹಿಸುತ್ತದೆ ಕ್ಯಾಲೋರಿ ಪ್ರಮಾಣವು ಈರುಳ್ಳಿಯಲ್ಲಿ ಕಡಿಮೆ ಇರುವುದರಿಂದ ಕೊಬ್ಬು ಇಲ್ಲ. ಅಧಿಕ ರಕ್ತದೊತ್ತಡವನ್ನು ಇದು ನಿರ್ವಹಿಸುತ್ತದೆ. ಪ್ರತಿ ನಿತ್ಯವೂ ಹಸಿ ಈರುಳ್ಳಿಯನ್ನು ಸೇವಿಸುವುದರಿಂದ ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ.

ರಕ್ತದ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುತ್ತದೆ ರಕ್ತದಲ್ಲಿರುವ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುವಲ್ಲಿ ಈರುಳ್ಳಿ ಸಹಕಾರಿಯಾಗಿದೆ. ನಿಮ್ಮ ಸಕ್ಕರೆ ಸೇವನೆಯನ್ನು ಮಿತದಲ್ಲಿಟ್ಟುಕೊಳ್ಳುವುದರ ಜೊತೆಗೆ ಈರುಳ್ಳಿ ಸೇವಿಸುವುದರಿಂದ ಸಕ್ಕರೆಯ ದುಷ್ಪರಿಣಾಮವನ್ನು ಇದು ನಿವಾರಿಸಲಿದೆ.

ಕ್ಯಾನ್ಸರ್ ವಿರೋಧಿ ಗುಣಗಳು ಈರುಳ್ಳಿಯಲ್ಲಿರುವ ಫೈಟೊಕೆಮಿಕಲ್ಸ್ ಡಿಲ್ಫೈಡ್ಸ್, ಟ್ರೈಸುಲ್ಫೈಡ್ಸ್, ಸೆಪೇನ್ ಮತ್ತು ಕ್ವೆರ್ಸಟಿನ್ ನಿಮ್ಮ ರಕ್ತದ ತೆಳುಗೊಳಿಸುವಿಕೆಗೆ ಸಹಾಯ ಮಾಡುತ್ತದೆ. ಇದರಿಂದ ಉರಿಯೂತ ಕಡಿಮೆಯಾಗಿ ಇದು ಕ್ಯಾನ್ಸರ್ ತಡೆಗಟ್ಟುವ ದಿವ್ಯೌಷಧಿಯಾಗಿ ಸಹಾಯ ಮಾಡಲಿದೆ. ಜೀರ್ಣಕ್ರಿಯೆ ಸಮಸ್ಯೆಗಳನ್ನು ನಿವಾರಿಸುತ್ತದೆ ಹಸಿ ಈರುಳ್ಳಿಯನ್ನು ಸೇವಿಸುವುದು ಹೊಟ್ಟೆಗೆ ಸಂಬಂಧಿತವಾಗಿರುವ ಸರ್ವ ರೋಗವನ್ನು ಪರಿಹರಿಸುತ್ತದೆ.

Comments are closed.