ಕರಾವಳಿ

ಜೀರಳೆಗಳ ಕಾಟದಿಂದ ಮುಕ್ತಿ ಪಡೆಯಲು ಕೆಲವು ಸಲಹೆ

Pinterest LinkedIn Tumblr

ಹಬ್ಬಗಳು ಬಂತಂದ್ರೆ ಸಾಕು ನಮ್ಮ ಹೆಣ್ಣು ಮಕ್ಕಳಿಗೆ ಮನೆ ಸ್ವಚ್ಛ ಮಾಡೋ ಕೆಲಸ. ಮನೆಯ ಮೂಲೇ- ಮೂಲೇನೂ ಗುಡಿಸಿ ಒರೆಸಿ ಹಬ್ಬಕ್ಕೆ ಮನೆ ಸಿಂಗಾರ ಮಾಡಿ, ಹಬ್ಬ ಮುಗಿಯೋದ್ರಲ್ಲಿ ಹೆಣ್ಣುಮಕ್ಕಳ ಬೆನ್ನು ಮೂಳೆ ಮುರಿದು ಬಿದ್ದಿರುತ್ತೆ. ಎಲ್ಲ ಕೆಲಸ ಓಕೆ… ಆದ್ರೆ!! ಮನೆ ಕ್ಲೀನ್ ಮಾಡೋವಾಗ ಈ ಜಿರಳೆಗಳ ಹಾವಳಿ ಇದ್ಯಲ್ಲ ಅದನ್ನ ನೆನೆಸಿಕೊಂಡರೆ ಮೈಎಲ್ಲಾ ಉರಿಯುತ್ತೆ. ಮನೆಯ ಯಾವ ಜಾಗದಲ್ಲಿ ಇವು ಇರಲ್ಲ ಹೇಳಿ ? ಇವುಗಳನ್ನ ತಿನ್ನೋಕಂತ ಮನೇಲಿ ನಾವು ಇದೀವಿ ಅಂತ ಆಗಾಗ ಗೋಡೆ ಮೇಲೆ ಹರಿದಾಡೋ ಹಲ್ಲಿಗಳದ್ದು ಇನ್ನೊಂತರ ಕಾಟ. ಆ ಜಿರಳೆಗಳು, ಜಿರಳೆಗಳ ಕಪ್ಪು ಪಿಸ್ಕಿ, ಹಲ್ಲಿಗಳು ಜಿರಳೆಗಳನ್ನ ತಿಂದು ಅರ್ಧ ದೇಹ ಅಲ್ಲೇ ಬಿದ್ದಿದ್ದು , ಅದನ್ನ ತಿನ್ನೋಕೆ ಬರೋ ಇರುವೆಗಳು,,,ಇವುಗಳಿಂದಾಗೋ ಹಿಂಸೇನ ಯಾರಿಗಂತಾ ಹೇಳೋದು ?

ನಾನು ಈ ಜಿರಳೆಯಿಂದ ಉಪಟಳ ತಪ್ಪಿಸಿಕೊಳ್ಳೋಕೆ ಸಿಕ್ಕೋರತ್ರ ಎಲ್ಲ ಟಿಪ್ಸ್ ಕೇಳಿ, ಇಂಟರ್ನೆಟ್ ನಲ್ಲಿ ಸರ್ಚ್ ಮಾಡಿ, ನನಗೆ ಸಿಕ್ಕ ಕೆಲವೊಂದು ಸಮಾಧಾನಕರ, ಮಾಡಲು ಸುಲಭದ ಟಿಪ್ಸ್ ಗಳನ್ನ ಇಲ್ಲಿ ಬರಿತಾಯಿದೀನಿ….ನನ್ನಂತೆ ಜಿರಲೆಗಳಿಂದ ಹಿಂಸೆಗೆ ಒಳಗಾಗುತ್ತಿರುವ ಮಹಿಳೆಯರಿಗೆ ನನ್ನದೊಂದು ಪುಟ್ಟ ಅಳಿಲು ಸೇವೆ ಥರ ಇವು ಅಳಿಲು ಸಲಹೆಗಳು ಅಂದುಕೊಳ್ಳಿ ,,,,,ಟ್ರೈ ಮಾಡಿ ನೋಡಿ,,,,

ಸಲಹೆಗಳು
ಮೆಣಸು, ಈರುಳ್ಳಿ, ಬೆಳ್ಳುಳ್ಳಿ ರಸಗಳನ್ನು ಮಾಡಿ ಜಿರಳೆ ಓಡಾಡುವಲ್ಲಿ ಚಿಮುಕಿಸಿದರೆ ಜಿರಳೆಗಳು ಸಾಯುತ್ತವೆ.
ಸ್ವಲ್ಪ ರೆಡ್ ವೈನ್ ನನ್ನು ಸ್ಲಾಬ್ ಕೆಳಗೆ ಚಿಮುಕಿಸಿದರೆ ಜಿರಳೆ ಬರುವುದಿಲ್ಲ.
ಅಡುಗೆ ಮನೆ ಕಬೋಡ ಒಳಗೆ ರೆಡ್ ವೈನ್ ಇಟ್ಟರೆ ಸಾಕು ಜಿರಳೆ ಬರುವುದಿಲ್ಲ.
ಜಿರಳೆ ಬರುವ ಕಡೆ ಸ್ಲಾಬ್ ಅಡಿ ಲವಂಗ ಪುಡಿಯನ್ನು ಇಡಿ. ಎರೆಡು – ಮೂರೂ ವಾರಕ್ಕೊಮ್ಮೆ ಪುಡಿ ಬದಲಾಯಿಸುತ್ತಿರಿ.
ಸುವಾಸನೆ ಭರಿತ ಕರಿಬೇವು ಸೊಪ್ಪನ್ನು ಜಿರಳೆ ಓಡಾಡುವಲ್ಲಿ ಇಟ್ಟರೆ ಜಿರಳೆಗಳು ಆ ವಾಸನೆಗೆ ದೂರ ಓಡುತ್ತವೆ.
ಕಾಫೀ ಬೀಜ ಅಥವಾ ಕಾಫೀ ಪುಡಿ ಮತ್ತು ತಂಬಾಕು ಪುಡಿಯನ್ನು ಮಿಶ್ರಣ ಮಾಡಿ ಅಲ್ಲಲ್ಲಿ ಚಿಕ್ಕ ಪ್ಲ್ಯಾಸ್ಟಿಕ್ ಕಪ್ ಗಳಲ್ಲಿ ತುಂಬಿಡಿ ಅದನ್ನು ತಿಂದು ಜಿರಳೆ ಸಾಯುತ್ತವೆ.
ಮೊಟ್ಟೆಯ ಚಿಪ್ಪನ್ನು ಜಿರಳೆ ಬರುವ ಕಡೆ ಇಟ್ಟರೆ ಸಾಕು ಜಿರಳೆ ಮನೆಯೊಳಗೇ ಬರುವುದಿಲ್ಲ.
ಸಕ್ಕರೆ ಪುಡಿಯನ್ನು ಒಂದು ಬಟ್ಟಲಿನಲ್ಲಿ ಹಾಕಿ , ಅದಕ್ಕೆ ಬೋರಿಕ್ ಆಸಿಡ್ ಹಾಕಿ ಮಿಶ್ರಣ ಮಾಡಿ ಇಟ್ಟರೆ ಅದರ ವಾಸನೆಗೆ ಜಿರಳೆ ದೂರ ಓಡುತ್ತವೆ.
ಬೋರಾಕ್ಸ್ ಪುಡಿಯನ್ನು 15 ದಿನಗಳಿಗೊಮ್ಮೆ ಚಿಮುಕಿಸುತ್ತಿದ್ದರೆ ಜಿರಳೆಗಳು ಬರುವುದಿಲ್ಲ.
ಬೋರಿಕ್ ಆಮ್ಲ ಮತ್ತು ಅದರ ಹಿಟ್ಟನ್ನು ಉಂಡೆಗಳನ್ನಾಗಿ ಮಾಡಿ ಅಲ್ಲಲ್ಲಿ ಇಡಿ. ಅದನ್ನು ತಿಂದ ಜಿರಳೆಗಳು ಸಾಯುತ್ತವೆ.
ಸ್ನಾನದ ಸೋಪ್ ಮತ್ತು ನೀರನ್ನು ಮಿಶ್ರಣ ಮಾಡಿ ನೇರವಾಗಿ ಜಿರಳೆ ಮೇಲೆ ಚಿಮುಕಿಸಿದರೆ ಆ ನೀರು ಜಿರಳೆಗಳನ್ನು ಕೊಲ್ಳುತ್ತದೆ.
ಪ್ರತಿ ಎರೆಡು ವಾರಕ್ಕೊಮ್ಮೆ 2 ಕಪ್ ಅಮೋನಿಯಗೆ ನೀರನ್ನು ಹಾಕಿ ನೆಲವನ್ನು ಒರೆಸುತ್ತಿದ್ದರೆ ಆ ವಾಸನೆಗೆ ಜಿರಳೆ ಹೊರ ಹೋಗುತ್ತವೆ.
ಸಪ್ತಾಲಿನ್ ಬಾಲ್ ನ್ನು ಬಟ್ಟೆಗಳಿರುವಲ್ಲಿ, ಬಾತ್ರೂಮ್ ನಲ್ಲಿ, ಅಡುಗೆ ಮನೆಯಲ್ಲಿ ಅಲ್ಲಲ್ಲಿ ಇಡಿ ಅದರ ವಾಸನೆಗೆ ಜಿರಳೆ ದೂರ ಹೋಗುತ್ತವೆ.
3ಭಾಗ ಬೊರಾಕ್ಸ್ ಮತ್ತು ಒಂದು ಭಾಗ ಸಕ್ಕರೆ ಮಿಶ್ರಣ ಮಾಡಿ ಜಿರಳೆ ಹೆಚ್ಚಾಗಿರುವ ಜಾಗಕ್ಕೆ ಸ್ಪ್ರೇ ಮಾಡಿ ತಕ್ಷಣ ಜಿರಳೆಗಳು ಸಾಯುತ್ತವೆ.
ಬೊರಕ್ಷ್ ಬಳಸಲು ಇಷ್ಟ ಇಲ್ಲ ಅಂದ್ರೆ ಅಡುಗೆ ಸೋಡಾ ಮತ್ತು ಸಕ್ಕರೆ ಸಮ ಪ್ರಮಾಣದಲ್ಲಿ ಬೆರೆಸಿ ಚಿಮುಕಿಸಿ.
ಫ್ಯಾಬ್ರಿಕ್ ಸಾಫ್ಟ್ನಾರ್ 3 ಭಾಗ , ಎರೆಡು ಭಾಗ ನೀರು ಬಳಸಿ ಜಿರಳೆ ಮೇಲೆ ಮೇಲೆ ಸ್ಪ್ರೇ ಮಾಡಿ.

Comments are closed.